Daily Horoscope:ಶುಕ್ರನ ಕೃಪೆಯಿಂದ ಬದಲಾಗಲಿದೆ ಅದೃಷ್ಟ; ಈ ರಾಶಿಯವರಿಗೆ ಹಣದ ಲಾಭ, ಭರ್ಜರಿ ಯಶಸ್ಸು!

Daily Horoscope: ಇಂದು ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ರಾತ್ರಿ 10:50 ರವರೆಗೆ ಇರುವುದು. ನಂತರ ತ್ರಯೋದಶಿ ತಿಥಿ ಪ್ರಾರಂಭವಾಗುತ್ತದೆ. ಶ್ರಾವಣ ನಕ್ಷತ್ರವು ಬೆಳಿಗ್ಗೆ 9.09 ರವರೆಗೆ ಇರುತ್ತದೆ. ನಂತರ ಧನಿಷ್ಠ ನಕ್ಷತ್ರವು ಪ್ರಾರಂಭವಾಗುತ್ತದೆ. ಇಂದು ಶುಕ್ರಮ ಯೋಗವು ಸಂಜೆ 4.27 ರವರೆಗೆ ಇರುತ್ತದೆ, ನಂತರ ಧೃತಿ ಯೋಗವು ರೂಪುಗೊಳ್ಳುತ್ತದೆ.

ಮೇಷ ರಾಶಿ (Aries)

ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುವುದು. ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುವುದು. ಅದೃಷ್ಟ ನಿಮ್ಮ ಕಡೆ ಇರುವುದು. ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ವ್ಯವಹಾರದಲ್ಲಿ ನಿಮಗೆ ಉತ್ತಮ ಲಾಭ ಸಿಗುವುದು. ಶಾಪಿಂಗ್‌ ಮಾಡುವ ಅವಕಾಶ ಸಿಗುವುದು.

Daily Horoscope Today Rashi Bhavishya September 23 Zodiac Predictions Lucky Number Colour of all signs

ವೃಷಭ ರಾಶಿ (Taurus)

ತಂದೆಯಿಂದ ನಿಮಗೆ ಬೆಂಬಲ ಸಿಗುವುದು. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಗುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುವುದು. ಹೂಡಿಕೆ ಮಾಡುವುದಕ್ಕೆ ದಿನ ಅನುಕೂಲಕರವಾಗಿರುವುದು. ವಿವಾದಗಳಿಂದ ದೂರವಿರಿ.

ಮಿಥುನ ರಾಶಿ (Gemini)

ಹೊಸ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ನಿಮಗೆ ಅವಕಾಶ ಸಿಗುವುದು. ವ್ಯವಹಾರದಲ್ಲಿ ಯಶಸ್ಸು ಮತ್ತು ಉತ್ತಮ ಗಳಿಕೆ ಸಿಗುವುದು. ಸ್ಪರ್ಧೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅದೃಷ್ಟವು ನಿಮ್ಮ ಜೊತೆ ಇರುವುದು. ನಿಮ್ಮ ಸಹೋದರರಿಂದ ನಿಮಗೆ ಬೆಂಬಲ ಸಿಗುವುದು. ಬಹುಕಾಲದ ಆಸೆಗಳು ಈಡೇರಬಹುದು.

ಕರ್ಕಾಟಕ ರಾಶಿ (Cancer)

ನಿಮ್ಮ ಸಂಗಾತಿಯಿಂದ ಉಡುಗಿರೆ ಸಿಗಬಹುದು. ಕೌಟುಂಬಿಕ ವಿವಾದಗಳು ಕೊನೆಯಾಗುವುದು. ವ್ಯವಹಾರದಲ್ಲಿ ಜಾಗರೂಕರಾಗಿರಿ. ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಅವಕಾಶ ಸಿಗುವುದು. ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ.

ಸಿಂಹ ರಾಶಿ (Leo)

ಕಠಿಣ ಪರಿಶ್ರಮದ ಜೊತೆಗೆ, ಅದೃಷ್ಟವೂ ನಿಮ್ಮ ಕಡೆ ಇರುವುದು. ಸ್ನೇಹಿತರಿಂದ ನಿಮಗೆ ಲಾಭವಾಗಬಹುದು. ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಲಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗುವುದು.‌

ಕನ್ಯಾ ರಾಶಿ (Virgo)

ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದ ಫಲವಾಗಿ ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಸಮಸ್ಯೆಗಳಿಗೆ ಪರಿಹಾರ ಸಿಗುವುದು. ವ್ಯವಹಾರದಲ್ಲಿ ಲಾಭವಾಗುವುದು. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುವುದು. ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಅಗತ್ಯವಿರುವವರಿಗೆ ಸಹಾಯ ಮಾಡಲು ಅವಕಾಶ ಸಿಗುವುದು.

ತುಲಾ ರಾಶಿ (Libra)

ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಕೆಲವು ಒಳ್ಳೆಯ ಸುದ್ದಿ ಕೇಳುವಿರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವಿರಿ. ಕುಟುಂಬದ ಹಿರಿಯರಿಂದ ಪ್ರೀತಿ ಮತ್ತು ಬೆಂಬಲ ಸಿಗುವುದು.

ವೃಶ್ಚಿಕ ರಾಶಿ (Scorpio)

ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದು. ಜವಳಿ ಮತ್ತು ಗೃಹ ನಿರ್ಮಾಣ ಸಾಮಗ್ರಿಗಳಲ್ಲಿ ತೊಡಗಿರುವ ವ್ಯವಹಾರಗಳು ಉತ್ತಮ ಲಾಭ ತಂದುಕೊಡುವುದು. ಅದೃಷ್ಟವು ನಿಮ್ಮ ಜೊತೆ ಇರುವುದು. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಯಶಸ್ಸು ಸಿಗುವುದು.

ಧನು ರಾಶಿ (Sagittarius)

ಕೆಲಸದಲ್ಲಿ ಯಶಸ್ಸು ಸಿಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಮನಸ್ಸಿನ ಆಸೆ ಈಡೇರುವುದು. ಹಣಕಾಸಿನ ವ್ಯವಹಾರದಲ್ಲಿ ಲಾಭವಾಗುವುದು. ಕೆಲವು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗಬಹುದು. ಅತ್ತೆ-ಮಾವರಿಂದ ಪ್ರಯೋಜವಾಗುವುದು. ದಾನ ಧರ್ಮ ಮಾಡಲು ಅವಕಾಶ ಸಿಗುವುದು.

ಮಕರ ರಾಶಿ (Capricorn)

ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುವುದು. ಮಕ್ಕಳೊಂದಿಗೆ ಮೋಜಿನ ಸಮಯ ಕಳೆಯುವಿರಿ. ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಆರಾಮ ಮತ್ತು ಶಾಂತಿಯಿಂದ ಪೂರ್ಣಗೊಳಿಸುವಿರಿ. ಆದಾಯದ ಜೊತೆಗೆ, ವೆಚ್ಚಗಳು ಕೂಡಾ ಹೆಚ್ಚುವುದು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುವುದು.

Daily Horoscope: ಕುಂಭ ರಾಶಿ (Aquarius)

ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ವ್ಯಾಪಾರದಲ್ಲಿ ತೊಡಗಿರುವವರಿಗೆ ಈ ದಿನವು ಪ್ರಯೋಜನಕಾರಿಯಾಗಿರುವುದು. ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ತಂದೆಯಿಂದ ಬೆಂಬಲ ಸಿಗುವುದು.

Daily Horoscope:‌ ಮೀನ ರಾಶಿ (Pisces)

ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಕರಿಂದ ಬೆಂಬಲ ಸಿಗುವುದು. ಸಾಂಪ್ರದಾಯಿಕ ಅಥವಾ ಕೌಟುಂಬಿಕ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ಬಾಕಿ ಇರುವ ಕೆಲಸವನ್ನು ಸ್ನೇಹಿತರ ಸಹಾಯದಿಂದ ಪೂರ್ಣಗೊಳಿಸಬಹುದು. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸ್ವಲ್ಪ ಸುಧಾರಣೆ ಕಾಣುವರು. ವಾದಗಳಿಂದ ದೂರವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+