ಚೈತ್ರ ಮಾಸದ ವಾರದ ಪಂಚಾಂಗ: ಏಪ್ರಿಲ್ 12ರಿಂದ 18

ಚೈತ್ರ ಮಾಸದ ಏ.12ರಿಂದ ಏ.18ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Chaitra masa - April 12 to 18: Rahu Kala, Gulika Kala, Yamaganda Kala

ಏ.12. ರವಿವಾರ : ಪೂರ್ವಾಷಾಢ ನಕ್ಷತ್ರ. ಔಷಧೋಪಚಾರ ಆರಂಭಿಸಲು ಹಾಗೂ ಆಸ್ತಿ-ಪಾಸ್ತಿ ಖರೀದಿ ಮತ್ತು ಮಾರಾಟಕ್ಕೆ ಉತ್ತಮ. ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಏ.13. ಸೋಮವಾರ : ಉತ್ತರಾಷಾಢ, ಶ್ರವಣಾ. ಅಮೃತ ಸಿದ್ಧಿಯೋಗ. ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಏ.14. ಮಂಗಳವಾರ : ಧನಿಷ್ಠಾ. ಪ್ರಯಾಣದಿಂದ ನಷ್ಟ. ಮಧ್ಯಾಹ್ನ 1-46ಕ್ಕೆ ಅಶ್ವಿನಿ ಮಳೆ ಆರಂಭ (ಏಪ್ರಿಲ್ 24ರ ವರೆಗೆ).

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಏ.15. ಬುಧವಾರ : ಶತತಾರಾ. ಏಕಾದಶಿ. ಪ್ರಯಾಣದಿಂದ ಶುಭ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಏ.16. ಗುರುವಾರ : ಪೂರ್ವಾಭಾದ್ರಪದ. ಆಸ್ತಿ-ಪಾಸ್ತಿ ಖರೀದಿ ಮತ್ತು ಮಾರಾಟಕ್ಕೆ ಉತ್ತಮ. ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಏ.17. ಶುಕ್ರವಾರ : ಉತ್ತರಾಭಾದ್ರಪದ. ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಏ.18. ಶನಿವಾರ : ರೇವತಿ. ಚೈತ್ರ ಮಾಸ ಮುಕ್ತಾಯ. ಅಕ್ಷತ್ತದಗಿ ಅಮವಾಸ್ಯೆ. (ಶನಿವಾರ ಬೆಳಗಿನ 3.37ಕ್ಕೆ ಅಮವಾಸ್ಯೆ ಆರಂಭ. ರವಿವಾರ 19ರ ಮಧ್ಯರಾತ್ರಿ 12-27ಕ್ಕೆ ಮುಕ್ತಾಯ.) ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ರವಿವಾರ, ಸೋಮವಾರ, ಮಂಗಳವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.

ಈ ವಾರ ಹೊಸಮನೆಗೆ ಸಂಬಂಧಪಟ್ಟ ಯಾವುದೇ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಉತ್ತಮ.

ಈ ವಾರದ ಗ್ರಹಗತಿ : ಮೇಷ : ರವಿ+ಬುಧ+ಮಂಗಳ. ವೃಷಭ: ಶುಕ್ರ. ಕರ್ಕ: ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮಕರ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಮೀನ: ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+