Makara Rashi Bhavishya 2025: ಮರಕ ರಾಶಿ ಹೊಸ ವರ್ಷ ಭವಿಷ್ಯ: ಆರೋಗ್ಯ ಭಾಗ್ಯ- ಪ್ರೇಮ ವಿವಾಹ ಗ್ಯಾರಂಟಿ

ಹೊಸ ವರ್ಷ ಆರಂಭವಾಗುತ್ತಿದ್ದಂತೆ ಮುಂಬರುವ ವರ್ಷ ನಮಗೆ ಹೇಗಿರಲಿದೆ ಎಂದು ತಿಳಿಯಲು ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. 2025ನೇ ವರ್ಷ ಉದ್ಯೋಗ, ಮದುವೆ, ಶೈಕ್ಷಣಿಕ, ವೃತ್ತಿ, ಕುಟುಂಬ ಜೀವನ ಹೇಗಿದೆ ಎಂದು ತಿಳಿಯುವ ಕುತೂಹಲ ನಿಮಗಿದ್ದರೆ ಈ ಬಗ್ಗೆ ಮಾಹಿತಿ ಇಲ್ಲಿದೆ. ಮಕರ ರಾಶಿಯವರಿಗೆ 2025ನೇ ವರ್ಷ ಹೇಗಿದೆ?

ಮಕರ ರಾಶಿ 2025 ಆರೋಗ್ಯ ಭವಿಷ್ಯ

ಮಕರ ರಾಶಿಯವರಿಗೆ ಮುಂದಿನ ವರ್ಷ ಆರೋಗ್ಯ ಉತ್ತಮವಾಗಿರಲಿದೆ. ಸಾಡೇಸಾತ್ ಮುಗಿಯುತ್ತಿದೆ. ಹೀಗಾಗಿ ಆರೋಗ್ಯ ತುಂಬಾ ಸುಧಾರಣೆ ಕಾಣಲಿದೆ. ಹೊಸ ವರ್ಷದಲ್ಲಿ ಗುರು ಬಲ ಇರುವುದಿಲ್ಲ. ಆದರೆ ಶನಿ ಬಲ ಸಿಗಲಿದೆ. ಇದರಿಂದ ಶುಭ ಫಲ ಪಡೆಯುವಿರಿ. ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ.

Capricorn yearly prediction 2025 makara varshika bhavishya- job family financial love horoscope

ಮುಂದಿನ ವರ್ಷ ಶನಿ ಪೀಡನೆಯಿಂದ ಹೊರಗಡೆ ಬರುವಿರಿ. ಈ ಸಮಯದಲ್ಲಿ ನಾಯಿಯಿಂದ ಕಚ್ಚಿಸಿಕೊಂಡರೆ ಯೋಗ ಎಂದು ಹೇಳಲಾಗುತ್ತದೆ. ಅಂದರೆ ತಲೆ ಹೋಗುವುದು ಕೂದಲಿನಿಂದ ಹೋಯ್ತು ಅನ್ನೋ ಹಾಗೆ ಆಕಶ್ಮಿಕವಾಗಿ ನಿಮಗೆ ನಾಯಿ ಕಚ್ಚಿದರೆ ದೊಡ್ಡ ಅನಾಹುತದಿಂದ ನೀವು ದೂರವಾಗಿ ಚಿಕ್ಕದರಲ್ಲಿ ಅನಾಹುತ ತಪ್ಪಿತು ಎಂದುಕೊಳ್ಳಿ. ಇನ್ನೇನು ಶನಿ ನಿಮಗೆ ಕೆಡಕು ಮಾಡುವುದಿಲ್ಲ.

ಮಕರ ರಾಶಿ 2025 ಶೈಕ್ಷಣಿಕ ಜೀವನ

ಮಕರ ರಾಶಿಯವರ ಶಿಕ್ಷಣ 2025ರಲ್ಲಿ ಉತ್ತಮವಾಗಿರುತ್ತದೆ. ಉನ್ನತ ಶಿಕ್ಷಣ ಯೋಗದ ಫಲ ಸಿಗಲಿದೆ. ಮಕರ ರಾಶಿಯವರ ನಾಲ್ಕನೇ ಮನೆ ಉನ್ನತ ಶಿಕ್ಷಣವನ್ನು ತೋರಿಸುತ್ತಿದೆ. ಹಾಗೇ ಎರಡನೇ ಮನೆ ವಿದ್ಯಾಸ್ಥಾನವಾಗಿದೆ. ಎರಡೂ ಮನೆಯ ಸ್ಥಾನಗಳು ತುಂಬಾ ಸುಸ್ಥಿತಿಯಲ್ಲಿ ಇರುವುದರಿಂದ ಅಪಾರವಾದ ವಿದ್ಯಾಪ್ರಾಪ್ತಿಯಾಗಲಿದೆ. ವಿದ್ಯವನ್ನು ಮುಂದುವರೆಸಿಕೊಂಡು ಹೋಗುವಿರಿ. ಶಿಕ್ಷಣದ ಅನುಭೂತಿಯನ್ನು ಪಡೆದುಕೊಳ್ಳುವಿರಿ. ಯಾವುದೇ ವಿಭಾಗದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಲಾಭಾಂಶ ಸಿಗಲಿದೆ.

ಮಕರ ರಾಶಿ 2025 ವೃತ್ತಿ- ವ್ಯಾಪಾರ

ಮಕರ ರಾಶಿಯವರಿಗೆ 2025 ವೃತ್ತಿ ವ್ಯಾಪಾರದಲ್ಲಿ ಇತ್ಯುನ್ನತವಾದ ಲಾಭಗಳು ಇವೆ. ಅಷ್ಟೇ ಖರ್ಚುಗಳು ಇರಲಿದೆ. ಕಾರಣ ಧನಾಧಿಪತಿಯಾದ ಶನಿ ಮೂರನೇ ಸ್ಥಾನದಲ್ಲಿ ಸಂಚಾರ ಮಾಡಿ ಶುಭ ಫಲ ನೀಡಿದರೂ ಗುರು ಸ್ಥಾನ ವ್ಯಯಾಧಿಪತಿಯಾಗಿದೆ. ಮೇ ತಿಂಗಳಲ್ಲಿ ಚರ್ಚು ಹೆಚ್ಚಿಸಲಿದೆ.

Capricorn yearly prediction 2025 makara varshika bhavishya- job family financial love horoscope

ಮಕರ ರಾಶಿ 2025 ಪ್ರೇಮ- ವೈವಾಹಿಕ ಜೀವನ

ಮಕರ ರಾಶಿಯವರಿಗೆ 2025ರ ಮಾರ್ಚ್‌ ನಂತರದಲ್ಲಿ ಒಳ್ಳೆಯ ಫಲ ಪ್ರೇಮ ಜೀವನದಲ್ಲಿ ಸಿಗಲಿದೆ. ಕುಟುಂಬದಲ್ಲಿ ನಿಮ್ಮ ಪ್ರೀತಿ ಬಗ್ಗೆ ಪ್ರಸ್ತಾಪ ಮಾಡುವಿರಿ. ಇದಕ್ಕೆ ಒಪ್ಪಿಗೆ ಕೂಡ ಸಿಗಲಿದೆ. ಮಕರ ರಾಶಿಯವರು ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಪ್ರೇಮ ವಿವಾಹಕ್ಕೆ ಅನುಕೂಲಕರವಾದ ಸಮಯ ಇದಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಉತ್ತಮ ಸಮಯ ಇದಾಗಿದೆ.

ಮಕರ ರಾಶಿ 2025 ಕುಟುಂಬ ಜೀವನ

ಕುಟುಂಬದಲ್ಲಿನ ಸಣ್ಣಪುಟ್ಟ ವಿವಾದಗಳು ಇರವಾಗುತ್ತವೆ. ಆದರೆ ರಾಹು ಪೀಡನೆ ಶುರುವಾಗಬಹುದು. ಮಾರ್ಚ್ ನಲ್ಲಿ ಮಕರ ರಾಶಿಯವರ ಚತುರ್ಥ ಸ್ಥಾನದಲ್ಲಿ ರಾಹು ಬಂದು ಕಿರಿಕಿರಿ ಕೊಡಬಹುದು. ಅದರಿಂದ ಹೆಚ್ಚು ನೊಂದುಕೊಳ್ಳಬೇಡಿ. ಎಲ್ಲಾ ಸಮಸ್ಯೆಗಳು ಮೇ ತಿಂಗಳಿನಲ್ಲಿ ದೂರವಾಗುತ್ತವೆ.

ಮಕರ ರಾಶಿ 2025 ಆಸ್ತಿ, ವಾಹನ ಖರೀದಿ

ಆಸ್ತಿ ವಾಹನ ಖರೀದಿಯಲ್ಲಿ ಶನಿ ವರ ಕೊಡಲಿದ್ದಾನೆ. ಮುಂದಿನ ವರ್ಷ ನೀವು ಆಸ್ತಿ ಖರೀದಿ ಮಾಡಲು ಸಮಯ ಉತ್ತಮವಾಗಿದೆ. ವಾಹನಯನ್ನೂ ಖರೀದಿ ಮಾಡಬಹುದು. ನಿಮ್ಮ ಆಸೆಗಳು ಈಡೇರುತ್ತವೆ. ನಿಮ್ಮ ಜೀವನ ಸಂತೋಷದಿಮದ ಕೂಡಿರುತ್ತದೆ. ಹೊಸ ವರ್ಷಗಳ ಖರೀದಿಯಿಂದ ನಿಮ್ಮ ಆರ್ಥಿಕ ಜೀವನ ಸುಧಾರಿಸಲಿದೆ.

Capricorn yearly prediction 2025 makara varshika bhavishya- job family financial love horoscope

ಮಕರ ರಾಶಿ 2025 ಪರಿಹಾರಗಳು

*ತಾಮ್ರದ ಉಂಗುರ, ತಾಮ್ರದ ತೋಳು ಬಂದಿ ಅಥವಾ ಕಡಗವನ್ನು ಕೈಗೆ ಹಾಕಿಕೊಳ್ಳಿ.

*ಹಣೆಗೆ ಯಾವಾಗಲೂ ಸಹ ಎಲ್ಲಮ್ಮನ ಭಂಡಾರವನ್ನು ಹಚ್ಚಿಕೊಳ್ಳಿ.

*ಪ್ರತಿ ನಿತ್ಯ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಂಡು 'ಓಂ ಗಂ ಗಣಪತಯೇ ನಮ:' ಎಂದು 108 ಬಾರಿ ಪಠಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+