Ugadi Horoscope 2025: ಕರ್ಕಾಟಕ ರಾಶಿಯ ಯುಗಾದಿ ಜಾತಕ- ಭವಿಷ್ಯ ಬದಲಿಸಿಕೊಳ್ಳುವ ಅವಕಾಶ
ಮಾರ್ಚ್ 30ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹೊಸ ವರ್ಷದ ಆರಂಭವಾಗಿದೆ. 12 ರಾಶಿಗಳಲ್ಲಿ ಮೇಷ, ವೃಷಭ ಹಾಗೂ ಮಿಥುನ ರಾಶಿಯ ಯುಗಾದಿ ಭವಿಷ್ಯವನ್ನು ಈಗಾಗಲೇ ತಿಳಿದುಕೊಂಡಿದ್ದೇವೆ. ಇದೀಗ ಕರ್ಕಾಟಕ ರಾಶಿಯವರಿಗೆ ವಿಶ್ವವಾಸ ಸಂವತ್ಸರದಲ್ಲಿ ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ವೃತ್ತಿಜೀವನದ ವಿಷಯದಲ್ಲಿ ಏನೆಲ್ಲಾ ಆಸಕ್ತಿದಾಯಕ ಸಂಗತಿಗಳು ಸಂಭವಿಸುತ್ತವೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿಯಲ್ಲಿ ಜನಿಸಿದ ಜನರು ಯುಗಾದಿ ನಂತರ ಅನೇಕ ಕ್ಷೇತ್ರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಗುರು ಮತ್ತು ಶನಿ ಗ್ರಹಗಳಿಂದ ನಿಮಗೆ ವಿಶೇಷ ಆಶೀರ್ವಾದ ಸಿಗಲಿದೆ. ಇದಲ್ಲದೆ ರಾಹು ಮತ್ತು ಕೇತುವಿನ ಪ್ರಭಾವದಿಂದಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿವೆ. ನೀವು ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಪರಿಹಾರ ಪಡೆಯಬಹುದು. ವರ್ಷದ ಆರಂಭದಲ್ಲಿ ಮಂಗಳ ಗ್ರಹದ ಪ್ರಭಾವ ಇರುತ್ತದೆ.

ಗ್ರಹಗಳ ಸ್ಥಾನಪಲ್ಲಟ
ಗ್ರಹಗಳ ಚಲನೆಯ ಬಗ್ಗೆ ತಿಳಿದುಕೊಳ್ಳುವುದಾದರೆ- ಶನಿ ಈ ಮಾರ್ಚ್ ತಿಂಗಳಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚಾರ ಮಾಡುತ್ತಿದ್ದಾನೆ. ಜೊತೆಗೆ ಗುರು ಐದನೇ ತಿಂಗಳು ಅಂದರೆ ಮೇನಲ್ಲಿ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚಾರ ಮಾಡಲಿದೆ. ಇನ್ನೂ ರಾಹು ಕೇತುಗಳು ಕೂಡ ಮೇ ತಿಂಗಳಲ್ಲಿ ತಮ್ಮ ಸ್ಥಾನಗಳನ್ನು ಬದಲಾಯಿಸುತ್ತವೆ. ಇದರ ಪರಿಣಾಮದ ಫಲ ಕರ್ಕಾಟಕ ರಾಶಿಯವರ ಮೇಲೆ ಯಾವ ರೀತಿ ಆಗುತ್ತದೆ ಎಂದು ಈಗ ತಿಳಿಯೋಣ.
ಕರ್ಕಾಟಕ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ
ಕರ್ಕಾಟಕ ರಾಶಿಯ ಜನರು ಯುಗಾದಿಯ ನಂತರ ಹಣಕಾಸಿನ ವಿಷಯಗಳಲ್ಲಿ ಸ್ಥಿರತೆಯನ್ನು ನೋಡುತ್ತಾರೆ. ನಿಮ್ಮ ಹಣವನ್ನು ನೀವು ಚೆನ್ನಾಗಿ ನಿರ್ವಹಿಸುವಿರಿ. ಭವಿಷ್ಯಕ್ಕಾಗಿ ಹೆಚ್ಚಿನ ಹಣವನ್ನು ಉಳಿಸಿ. ಈ ಅವಧಿಯಲ್ಲಿ ಹೆಚ್ಚುವರಿ ಆದಾಯಕ್ಕೆ ಹೆಚ್ಚಿನ ಅವಕಾಶಗಳು ಇರುತ್ತವೆ. ಕೆಲಸದ ಸ್ಥಳದಲ್ಲಿ ನಿಮಗೆ ಬಡ್ತಿ ಅಥವಾ ಬೋನಸ್ ಸಿಗುವ ಸಾಧ್ಯತೆಯಿದೆ. ಹೆಚ್ಚುವರಿ ಆದಾಯಕ್ಕಾಗಿ ಕೆಲವು ಹೊಸ ಯೋಜನೆಗಳನ್ನು ಕೈಗೊಳ್ಳಬಹುದು. ದೀರ್ಘಾವಧಿಯ ಆದಾಯಕ್ಕಾಗಿ ಹೂಡಿಕೆ ಮಾಡಲು ಈ ಅವಧಿ ಅನುಕೂಲಕರವಾಗಿದೆ. ಆದರೆ ಖರ್ಚಿನ ಬಗ್ಗೆ ಜಾಗರೂಕರಾಗಿರಿ. ಬುದ್ಧಿವಂತಿಕೆಯಿಂದ ಖರ್ಚು ಮಾಡಿ.

ಕರ್ಕಾಟಕ ರಾಶಿಯ ಯುಗಾದಿ ಕೌಟುಂಬಿಕ ಜಾತಕ
ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸಲು ಪ್ರಯತ್ನಿಸುವುದು ತುಂಬಾ ಮುಖ್ಯ. ನಿಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ನಡೆಯುತ್ತಿದ್ದರೆ ನೀವು ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಇದು ತುಂಬಾ ದೊಡ್ಡದಾಗಿ ಸ್ಪೋಟಗೊಳ್ಳಬಹುದು.
ಕರ್ಕಾಟಕ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ
ಈ ರಾಶಿಯ ವಿದ್ಯಾರ್ಥಿಗಳು ಯುಗಾದಿಯ ನಂತರ ಅಂದುಕೊಂಡ ಫಲಿತಾಂಶವನ್ನು ಪಡೆಯುತ್ತಾರೆ. ಶಾಲಾ ಕಾಲೇಜುಗಳಲ್ಲಿ ಅವರನ್ನು ಪ್ರಶಂಸಿಸಲಾಗುತ್ತದೆ. ನಿಮಗೆ ಶಿಕ್ಷಣದ ಬಗ್ಗೆ ಉತ್ತಮ ಏಕಾಗ್ರತೆ ಇರುತ್ತದೆ. ಯಾವುದೇ ಮಾಹಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲಿರಿ. ನೀವು ಆಯ್ಕೆ ಮಾಡಿದ ಅಧ್ಯಯನ ಕ್ಷೇತ್ರದಲ್ಲಿ ಬಲವಾದ ನೆಲೆಯನ್ನು ನಿರ್ಮಿಸಲು ಇದು ಉತ್ತಮ ಸಮಯ. ಕೋರ್ಸ್‌ಗಳು ಅಥವಾ ಕಾರ್ಯಾಗಾರಗಳನ್ನು ತೆಗೆದುಕೊಳ್ಳುವುದು ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿಯಾಗಿದೆ.

ಕರ್ಕಾಟಕ ರಾಶಿಯ ಯುಗಾದಿ ವೃತ್ತಿ ಭವಿಷ್ಯ
ಯುಗಾದಿ ಹಬ್ಬದ ನಂತರ ಕರ್ಕಾಟಕ ರಾಶಿಯವರು ಹೊಸ ವೃತ್ತಿ ಅವಕಾಶಗಳನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲಿದ್ದಾರೆ. ಈಗಾಗಲೇ ಉದ್ಯೋಗದಲ್ಲಿರುವ ಜನರು ಬಡ್ತಿ ಪಡೆಯಲಿದ್ದಾರೆ. ಮತ್ತೊಂದೆಡೆ ನಿಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ನೀವು ಶ್ರಮಿಸಬೇಕಾಗುತ್ತದೆ.
ಕರ್ಕಾಟಕ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ
ಯುಗಾದಿಯ ನಂತರ ಈ ರಾಶಿಯ ಜನರ ಯಾವುದೇ ಆರೋಗ್ಯ ಸಮಸ್ಯೆ ದೂರವಾಗಲಿದೆ. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಶಾಲಿಯಾಗಿರುತ್ತೀರಿ. ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ. ಆರೋಗ್ಯವಾಗಿರಲು ಒತ್ತಡದಿಂದ ದೂರವಿರಿ.
ಕರ್ಕಾಟಕ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ
ಕರ್ಕಾಟಕ ರಾಶಿಯ ಏಕಾಂಗಿಯಾಗಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಯುಗಾದಿ ಹೊಸ ವರ್ಷದಲ್ಲಿ ವಿವಾಹಕ್ಕೆ ಸಂಬಂಧಿಸಿದ ಸಕಾರಾತ್ಮಕ ಫಲಿತಾಂಶಗಳನ್ನು ನೀವು ಪಡೆಯುವಿರಿ. ದಾಂಪತ್ಯ ಜೀವನದಲ್ಲಿನ ಮನಸ್ತಾಪಗಳು ದೂರವಾಗುತ್ತವೆ. ಸಂಗಾತಿಯೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಕೆಲವರು ಪ್ರೀತಿಸಿದವರನ್ನೇ ಮದುವೆಯಾಗಲಿದ್ದಾರೆ.
ಕರ್ಕಾಟಕ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ
ಯುಗಾದಿ ನಂತರ ಕರ್ಕಾಟಕ ರಾಶಿಯವರಿಗೆ ದುಬಾರಿ ವಸ್ತುಗಳ ಖರೀದಿಗೆ ಶುಭ ಸಮಯ. ಈ ಹಿಂದೆ ಇದ್ದ ಈಡೇರದ ದೊಡ್ಡ ಕನಸುಗಳು ಈಡೇರುತ್ತವೆ. ಮನೆ, ವಾಹನ, ಭೂಮಿ ಖರೀದಿ ಮಾಡಲು ಇದು ಉತ್ತಮ ಸಮಯವಾಗಿದೆ. ಕರ್ಕಾಟಕ ರಾಶಿಯವರಿಗೆ ಹೂಡಿಕೆಯಿಂದಲೂ ಲಾಭ ಕಡಿಮೆ.ಆದರೆ ಸಣ್ಣ ಪ್ರಯತ್ನದಿಂದ ಹೆಚ್ಚು ದುಬಾರಿ ವಸ್ತುಗಳ ಖರೀದಿ ಮಾಡುವಿರಿ.












Click it and Unblock the Notifications