ನವಪಂಚಮ ದೃಷ್ಟಿ ಯೋಗದಿಂದ ನಾಲ್ಕು ರಾಶಿಯವರಿಗೆ ಧನಲಾಭ: ತೆರೆದುಕೊಳ್ಳುವುದು ಪ್ರಗತಿಯ ಹಾದಿ
ಬುಧ-ಶನಿ ನವಪಂಚಮ ಯೋಗ 2026: ಜ್ಯೋತಿಷ್ಯದ ಪ್ರಕಾರ, ಬುಧ ಬುದ್ಧಿವಂತಿಕೆ, ಮಾತು, ವ್ಯವಹಾರ, ತರ್ಕ ಇವುಗಳ ಸೂಚಕ. ಶನಿ ನ್ಯಾಯದ ದೇವರು. ನಾವು ಯಾವ ರೀತಿ ಕೆಲಸ ಮಾಡುತ್ತೇವೆಯೋ ಆ ರೀತಿಯಲ್ಲಿ ಫಲ ನೀಡುತ್ತಾನೆ. ಅದಕ್ಕೇ ಶನಿಯನ್ನು ಕರ್ಮಫಲದಾತ ಎಂದೂ ಕರೆಯುವುದು. ಇದೀಗ ಶನಿ ಮತ್ತು ಬುಧ ವಿಶೇಷ ಸ್ಥಾನದಲ್ಲಿ ಸೇರಿ ಪ್ರಭಾವಶಾಲಿ ಯೋಗವನ್ನು ರೂಪಿಸಲಿದ್ದಾರೆ.
ಸೋಮವಾರ, ಅಂದರೆ ಆಗಸ್ಟ್ 17, 2026 ರಂದು ರಾತ್ರಿ 8:55ಕ್ಕೆ, ಈ ಎರಡು ಗ್ರಹಗಳು ಒಂಭತ್ತನೇ ಮತ್ತು ಐದನೇ ಮನೆಗಳಲ್ಲಿ, ಅಂದರೆ 120°ಯಲ್ಲಿ ನವಪಂಚಮ ದೃಷ್ಟಿ ಯೋಗವನ್ನು ರೂಪಿಸುತ್ತವೆ. ಈ ಯೋಗದ ಫಲವು ಕೆಲವು ಸಮಯದವರೆಗೆ ಇರುವುದು. ಈ ಯೋಗದ ಕಾರಣದಿಂದಾಗಿ ನಾಲ್ಕು ರಾಶಿಯವರು ತಮ್ಮ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುವರು.

ನವಪಂಚಮ ದೃಷ್ಟಿಯೋಗದಿಂದ ಈ ರಾಶಿಯವರ ಕೂ ಹಿಡಿಯುವುದು ಅದೃಷ್ಟ
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ನವ ಪಂಚಮ ಯೋಗವು ವಿಶೇಷ ಫಲ ನೀಡುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳುವುದು. ಹೊರಗೆ ಉಳಿದಿರುವ ಹಣ ವಾಪಸ್ ಸಿಗುವುದು. ಕಚೇರಿ ಕೆಲಸದಲ್ಲಿಯೂ ಲಾಭವಾಗುವುದು. ಹೊಸ ಕಂಪನಿಯಲ್ಲಿ ಉದ್ಯೋಗಾವಕಾಶ ಒದಗಿ ಬರುವುದು. ಹೊಸ ವ್ಯವಹಾರ ಆರಂಭ ಮಾಡುವುದಕ್ಕೂ ಸಮಯ ಸೂಕ್ತವಾಗಿದೆ. ಮಾಡುವ ಕೆಲಸ ಕಾರ್ಯಗಳಿಗೆ ಕುಟುಂಬದಿಂದ ಬೆಂಬಲ ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹೊಸ ಮತ್ತು ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಪಡೆಯುತ್ತಾರೆ.
ಕನ್ಯಾ ರಾಶಿ (Virgo)
ಬುಧ ಮತ್ತು ಶನಿ ಗ್ರಹದ ಸಂಯೋಜನೆಯು ಕನ್ಯಾ ರಾಶಿಯವರಿಗೆ ಹೆಚ್ಚು ಶುಭ ಫಲಗಳನ್ನು ನೀಡುವುದು. ವೃತ್ತಿಜೀವನದ ಬೆಳವಣಿಗೆ ನಿರೀಕ್ಷೆಗೂ ಮೀರಿ ಆಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕೆಲಸದಲ್ಲಿ ನಿಮ್ಮ ಕೌಶಲ್ಯಗಳನ್ನು ಪ್ರಶಂಸಿಸಲಾಗುವುದು. ಉದ್ಯೋಗ ಬದಲಾಯಿಸಲು ಇದು ಶುಭ ಸಮಯವಾಗಿರುತ್ತದೆ. ಮನೆ ಅಥವಾ ಜಮೀನು ಖರೀದಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು. ಇಲ್ಲಿಯವರೆಗೆ ಬಾಧಿಸುತ್ತಿದ್ದ ಹಣ ಸಮಸ್ಯೆ ನಿವಾರಣೆಯಾಗುವುದು.
ಮಕರ ರಾಶಿ (Capricorn)
ಈ ಸಂಯೋಜನೆಯು ಮಕರ ರಾಶಿಯವರಿಗೆ ಅತ್ಯಂತ ಶುಭಕರವಾಗಿ ಸಾಬೀತಾಗುವುದು. ವ್ಯವಹಾರ ವಿಸ್ತರಣೆಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗುವುದು. ನಿಂತು ಹೋಗಿದ್ದ ಕೆಲಸಗಳು ಮತ್ತೆ ವೇಗ ಪಡೆಯುವುದು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಹೊಸ ಉದ್ಯೋಗ ಹುಡುಕುವವರಿಗೂ ಸಮಯ ಚೆನ್ನಾಗಿದೆ. ನೀವಂದುಕೊಂಡ ಕೆಲಸ ಸಿಗುವ ಸಾಧ್ಯತೆ ಇದೆ. ಮದುವೆ ಮಾತುಕತೆ ನಡೆಯಬಹುದು. ವಿದ್ಯಾರ್ಥಿಗಳಿಗೂ ಸಮಯ ಅನುಕೂಲಕರವಾಗಿರಲಿದೆ.
ಕುಂಭ ರಾಶಿ (Aquarius)
ಕೆಲಸದಲ್ಲಿ ಹೊಸ ಅವಕಾಶಗಳು ಸಿಗುವುದು. ಬಡ್ತಿ ಮೂಲಕ ಜವಾಬ್ದಾರಿ ಹೆಚ್ಚಾಗುವುದು. ತುಂಬಾ ಸಮಯದಿಂದ ಕಾಡುತ್ತಿದ್ದ ಸಮಸ್ಯೆಗಳು ಕೊನೆಗೊಳ್ಳುವುದು. ಆರ್ಥಿಕ ಸ್ಥಿರತೆ ಹೆಚ್ಚಾಗುವುದು. ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು. ಆತ್ಮವಿಶ್ವಾಸ ಬೆಳೆಯುವುದು. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಸುಧಾರಿಸುತ್ತವೆ. ವಿದ್ಯಾರ್ಥಿಗಳ ಸಾಧನೆ ಪೋಷಕರಿಗೆ ಸಂತೋಷ ತರುವುದು.
ಇನ್ನು ಇವತ್ತು ಅಂದರೆ ಆಗಸ್ಟ್ 7, 2026 ರ ಶುಕ್ರವಾರ ಸೂರ್ಯ ಮತ್ತು ಶನಿ ತ್ರಿಕೋನ ಯೋಗವನ್ನು ರೂಪಿಸಿದ್ದಾರೆ. ಸೂರ್ಯನು ಕರ್ಕ ರಾಶಿಯಲ್ಲಿ, ಆಶ್ಲೇಷ ನಕ್ಷತ್ರದಲ್ಲಿ ಸುಮಾರು 20 ಡಿಗ್ರಿ, ಮತ್ತು ಶನಿಯು ವಕ್ರಗತಿ ನಕ್ಷತ್ರದಲ್ಲಿ, ಮೀನ ರಾಶಿಯಲ್ಲಿದ್ದಾನೆ. ಈ ತ್ರಿಕೋನ ಯೋಗವು ಶಿಸ್ತು, ಜವಾಬ್ದಾರಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಚಂದ್ರನು ವೃಷಭ ರಾಶಿಯಲ್ಲಿ ಕೃತ್ತಿಕಾ ನಕ್ಷತ್ರದಲ್ಲಿ ಸಾಗುತ್ತಿದ್ದಾನೆ. ಜ್ಯೋತಿಷ್ಯದ ಪ್ರಕಾರ ಇದು ಕೂಡ ಒಳ್ಳೆಯ ಬೆಳವಣಿಗೆಯಾಗಿದೆ. ಇದು ಕೂಡಾ ದ್ವಾದಶ ರಾಶಿಯವರ ಜಾತಕದ ಮೇಲೆ ಪರಿಣಾಮ ಬೀರುವುದು.


Click it and Unblock the Notifications
