• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನ ಖರೀದಿಗೆ ಜ್ಯೋತಿಷ್ಯ ಪ್ರಕಾರ ಚಿನ್ನದಂಥ ದಿನಗಳಿವು!

By ಪಂಡಿತ್ ವಿಠ್ಠಲ ಭಟ್
|

'ಚಿನ್ನ' ಎಂಬ ಎರಡಕ್ಷರದಲ್ಲಿ ಅದೇನೋ ಮೋಡಿ ಇದೆ. ಗೌರವ- ಪ್ರತಿಷ್ಠೆ, ಸೌಂದರ್ಯ (ಎಲ್ಲರಿಗೂ ಈ ಮಾತು ಅನ್ವಯಿಸಲ್ಲ. ಚಿನ್ನದ ಆಭರಣ ನೋಡಿಯೇ ಎದುರಿನ ವ್ಯಕ್ತಿಗೆ ಗೌರವ- ಮನ್ನಣೆ ನೀಡುವ ಸ್ವಭಾವ ಇರುವ ವ್ಯಕ್ತಿಗಳಿಗೆ ಹೆಚ್ಚು ಆಭರಣ ತೊಟ್ಟವರು ಗೌರವಾನ್ವಿತರಾಗಿಯೂ, ಪ್ರತಿಷ್ಠಿತರಾಗಿಯೂ ಅಷ್ಟೇ ಅಲ್ಲ, ಅಪೂರ್ವ ಸೌಂದರ್ಯ ಇರುವಂತೆಯೂ ಕಾಣುತ್ತಾರೆ.) ಹೊಂದಿರುವಂತೆ ಕಾಣುತ್ತಾರೆ.

ಅದೇ ರೀತಿ ಚಿನ್ನ ಖರೀದಿ ಮಾಡುವುದು ಆಪತ್ ಕಾಲಕ್ಕೆ ಎಂಬುದು ಕೂಡ ಹೌದು. ಮನೆಯಲ್ಲಿ ಅನುಕೂಲದ ಕಾಲದಲ್ಲಿ ಕಾಸಿಗೆ ಕಾಸು ಕೂಡಿ ಹಾಕಿ, ವರ್ಷದಲ್ಲಿ ಯಾವುದೋ ಒಂದು ವೇಳೆ ಚಿನ್ನದ ದರ ಕಡಿಮೆ ಆಯಿತು ಅಂತ ಅನ್ನಿಸಿದಾಗ ಆಭರಣ ಖರೀದಿ ಮಾಡುವ ಪರಿಪಾಠ ಇದೆ. ಅದರಲ್ಲೂ ಕೃಷಿಕ ಕುಟುಂಬಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಮನೆಯ ಹೆಣ್ಣುಮಕ್ಕಳಿಗೆ ಚಿನ್ನ ಖರೀದಿಸುತ್ತಾರೆ.

ಯಾವ ರಾಶಿಯವರು ಕಾರು ಖರೀದಿಸಬಹುದು? ಅದೃಷ್ಟದ ಬಣ್ಣ ಯಾವುದು?

ಆದರೆ, ಆಭರಣ ಖರೀದಿ ಮಾಡುವಾಗ ಮುಹೂರ್ತ ನೋಡುವುದು ಉತ್ತಮ. ಏಕೆಂದರೆ ದುಡಿಮೆಯ ಹಣವನ್ನು ಹಾಕಿ, ಲಕ್ಷ್ಮಿ ಸ್ವರೂಪವಾದ ಚಿನ್ನವನ್ನು ಮನೆಗೆ ತಂದ ಮುಹೂರ್ತದ ಆಧಾರದಲ್ಲೇ ಶ್ರೇಯೋಭಿವೃದ್ಧಿ ಸಹ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಚಿನ್ನದ ಆಭರಣ ಖರೀದಿಗೆ ಸೂಕ್ತ ಕಾಲ ಯಾವುದು, ಯಾವ ಸಮಯದಲ್ಲಿ ಖರೀದಿಸಬಾರದು ಎಂಬುದನ್ನು ತಿಳಿಸಲಾಗುತ್ತಿದೆ.

ಚಿನ್ನ ಖರೀದಿಗೆ ಉತ್ತಮ ನಕ್ಷತ್ರಗಳು

ಚಿನ್ನ ಖರೀದಿಗೆ ಉತ್ತಮ ನಕ್ಷತ್ರಗಳು

ಮೊದಲಿಗೆ ಯಾವ ನಕ್ಷತ್ರ ಇದ್ದಾಗ ಖರೀದಿ ಮಾಡಬಹುದು ಅನ್ನೋದು ನೋಡೋಣ. ಪುಷ್ಯ, ಮೃಗಶಿರಾ, ಅನೂರಾಧ, ಶ್ರವಣ, ಶತಭಿಷಾ, ರೇವತಿ, ಅಶ್ವಿನಿ, ಪುನರ್ವಸು, ವಿಶಾಖ ಇವೆಲ್ಲ ಚಿನ್ನ ಖರೀದಿ ಮಾಡುವುದಕ್ಕೆ ಉತ್ತಮ ನಕ್ಷತ್ರ. ಇವುಗಳ ಪೈಕಿ ನಿಮಗೆ ಅಂದರೆ ಖರೀದಿಸುವವರ ನಕ್ಷತ್ರಕ್ಕೆ ತಾರಾನುಕೂಲ ಇರುವ ದಿನವನ್ನು ನೋಡಿ.

ಯಾವ ವಾರ, ಯಾವ ಪಕ್ಷ ಉತ್ತಮ?

ಯಾವ ವಾರ, ಯಾವ ಪಕ್ಷ ಉತ್ತಮ?

ಇನ್ನು ಯಾವ ವಾರದಲ್ಲಿ ಆಭರಣ ಖರೀದಿ ಮಾಡಬೇಕು ಎಂಬ ಪ್ರಶ್ನೆಗೆ ಬಂದರೆ ಸೋಮವಾರ-ಬುಧವಾರ ಮಧ್ಯಮ, ಗುರುವಾರ- ಶುಕ್ರವಾರ ಉತ್ತಮ, ಶನಿವಾರ ಬೇಡ. ಶುಕ್ಲಪಕ್ಷದಲ್ಲೇ ಖರೀದಿಸಿದರೆ ಉತ್ತಮ. ಒಂದು ವೇಳೆ ಕೃಷ್ಣ ಪಕ್ಷ ಅನ್ನೋದಾದರೆ ಪಂಚಮಿ ತಿಥಿಯೊಳಗೆ ಖರೀದಿಸಿ.

ಆಭರಣದಲ್ಲಿ ರತ್ನಗಳಿದ್ದರೆ ಪರೀಕ್ಷಿಸಿಕೊಳ್ಳಿ

ಆಭರಣದಲ್ಲಿ ರತ್ನಗಳಿದ್ದರೆ ಪರೀಕ್ಷಿಸಿಕೊಳ್ಳಿ

ಆಭರಣದಲ್ಲಿ ರತ್ನಗಳಿವೆ ಅನ್ನೋದಾದರೆ ಧರಿಸುವ ವ್ಯಕ್ತಿಗೆ ಆ ರತ್ನ ಆಗಿಬರುತ್ತದೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಬರೀ ಬಣ್ಣದ ಕಲ್ಲು ಬಳಸಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ನವರತ್ನಗಳ ಪೈಕಿ ಯಾವುದೇ ರತ್ನವನ್ನು ಆಭರಣದಲ್ಲಿ ಬಳಸಿದ್ದೇ ಆದಲ್ಲಿ ಅದು ಧಾರಣೆ ಮಾಡುವವರ ರಾಶಿಗೆ ಆಗಿಬರಬೇಕು.

ಈ ದಿನಗಳಂದು ಆಭರಣ ಖರೀದಿ ಬೇಡ

ಈ ದಿನಗಳಂದು ಆಭರಣ ಖರೀದಿ ಬೇಡ

ಶನಿವಾರದಂದು ಚಿನ್ನದ ಆಭರಣ ಖರೀದಿಸಿದರೆ ಅದು ಪದೇಪದೇ ಅಡ ಇಡುವ ಸಾಧ್ಯತೆ ಹೆಚ್ಚಿರುತ್ತದೆ. ಅಮಾವಾಸ್ಯೆ, ಷಷ್ಠಿ, ಅಷ್ಟಮಿ ತಿಥಿಗಳಲ್ಲಿ ಬಂಗಾರ ಖರೀದಿಸಿದರೆ ಅಡ ಇಡುವ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ಅಷ್ಟಮಿಯಂದು ಚಿನ್ನ ಖರೀದಿಸಿದರೆ ಕಳೆದುಹೋಗುವ ಅವಕಾಶ ಹೆಚ್ಚಿರುತ್ತದೆ. ಇನ್ನು ರಿಕ್ತ ತಿಥಿಯಾದ ಚತುರ್ಥಿಯಂದು ಖರೀದಿಸಿದರೆ ಆಭರಣ ಮುರಿದು ಹೋಗುವ ಅಥವಾ ವಿರೂಪ ಆಗುವ ಸಾಧ್ಯತೆ ಹೆಚ್ಚು.

ಜ್ಯೋತಿಷಿ ಸಂಪರ್ಕ ಸಂಖ್ಯೆ

ಜ್ಯೋತಿಷಿ ಸಂಪರ್ಕ ಸಂಖ್ಯೆ

ಇನ್ನು ಯಾರೇ ಆಗಲಿ ಬಂಗಾರದ ಆಭರಣವೊಂದೇ ಅಲ್ಲ, ಯಾವುದೇ ಬೆಲೆ ಬಾಳುವ- ಮಹತ್ವದ ಖರೀದಿ ಮಾಡುವಾಗ ತಾರಾನುಕೂಲ ಕಡ್ಡಾಯವಾಗಿ ನೋಡಬೇಕು. ಖರೀದಿ ಮಾಡುವ ದಿನದಂದು ಇರುವ ನಕ್ಷತ್ರ ಯಜಮಾನನ ನಕ್ಷತ್ರಕ್ಕೆ ಸಾಧಕ ತಾರೆ, ಸಂಪತ್ ತಾರೆ, ಮಿತ್ರ ತಾರೆ, ಕ್ಷೇಮ ತಾರೆಗಳಿದ್ದ ದಿನದಲ್ಲೇ ಆಭರಣ ಖರೀದಿ ಮಾಡುವುದು ಉತ್ತಮ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is the auspicious days for gold jewel purchase according to vedic astrology. Well known astrologer Pandit Vittal Bhat explains auspicious days for gold purchase.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more