August Horoscope: ಆಗಸ್ಟ್ ಈ 4 ರಾಶಿಯವರಿಗೆ ಅದೃಷ್ಟ: ನನಸಾಗುತ್ತೆ ಸ್ವಂತ ಮನೆಯ ಕನಸು, ಧನ ಲಾಭ, ಸಾಲದಿಂದ ಮುಕ್ತಿ!
ಜ್ಯೋತಿಷ್ಯದ ಪ್ರಕಾರ, ಮಗು ಹುಟ್ಟಿದ ಸಮಯವನ್ನು ಆಧರಿಸಿ ರಾಶಿ, ನಕ್ಷತ್ರ ನಿರ್ಧಾರವಾಗುತ್ತದೆ. ಈ ರಾಶಿ, ನಕ್ಷತ್ರಗಳಿಗೆ ಗ್ರಹಗಳ ಪ್ರವೇಶ ಮತ್ತು ಅದರ ಸಂಚಾರ ನಮ್ಮ ಜಾತಕ ಫಲವನ್ನು ಶುಭ ಅಥವಾ ಅಶುಭ ಎಂದು ಬದಲಾಯಿಸುವುದು. ಒಂಭತ್ತು ಗ್ರಹಗಳು ತನ್ನದೇ ಆದ ವೇಗದಲ್ಲಿ ತನ್ನದೇ ಆದ ಮಿತಿಯಲ್ಲಿ ಸಂಚಾರ ಮಾಡುತ್ತಿರುತ್ತದೆ. ಈ ರೀತಿ ಗ್ರಹಗಳು ಮಾಡುವ ರಾಶಿ ಬದಲಾವಣೆ, ನಕ್ಷತ್ರ ಬದಲಾವನೆ ನಮ್ಮ ಜಾತಕ ಫಲದ ಮೇಲೆ ಪರಿಣಾಮ ಬೀರುತ್ತದೆ.
ಆಗಸ್ಟ್ ತಿಂಗಳಲ್ಲಿ ಕೂಡಾ ಕೆಲವು ಗ್ರಹಗಳು ತಮ್ಮ ಸಂಚಾರವನ್ನು ಸ್ಥಾನವನ್ನು ಬದಲಾಯಿಸುತ್ತದೆ. ಇದು ಕೆಲವು ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರಲಿದೆ. ಇನ್ನು ಕೆಲವರಿಗೆ ಸ್ವಲ್ಪ ಕಷ್ಟ ನಷ್ಟಗಳ ಅನುಭವ ಆಗಲೂ ಬಹುದು. ಗ್ರಹಗಳ ಸಂಕ್ರಮಣ ಈ ತಿಂಗಳು ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ಮೂಲಕ ಅವರ ಭಾಗ್ಯದ ಬಾಗಿಲು ತೆರೆಯುವುದು. ಕೆಲಸ, ಬ್ಯುಸಿನೆಸ್, ಸಣ್ಣ ಪುಟ್ಟ ವ್ಯವಹಾರ ಏನೇ ಮಾಡುತ್ತಿರಲಿ ಈ ತಿಂಗಳು ಲಾಭ ಮಾತ್ರ ಎರಡು ಪಟ್ಟರಷ್ಟಾಗುವುದಂತೆ.

ವೃಷಭ ರಾಶಿ (Taurus):
ಆಗಸ್ಟ್ ತಿಂಗಳು ಅದೃಷ್ಟ ತರುವ ಮೊದಲ ರಾಶಿ ಯಾವುದು ಎಂದು ಕೇಳಿದರೆ ಅದಕ್ಕೆ ಉತ್ತರ ವೃಷಭ. ಸ್ವಂತ ಮನೆ ಖರೀದಿಸಬೇಕು ಅಥವಾ ಕಟ್ಟಿಸಬೇಕು ಎಂದು ಕನಸು ಕಾಣುತ್ತಿರುವವರ ಕನಸು ನನಸಾಗುವ ಕಾಲ ಇದು. ಜಮೀನು ಕೊಳ್ಳುವ ಆಸೆ ಕೂಡಾ ನೆರವೇರಬಹುದು. ಇನ್ನು ಓದು ಮುಗಿಸಿ ಕೆಲಸಕ್ಕಾಗಿ ಓಡಾಡುತ್ತಿರುವವರಿಗೆ ಒಳ್ಳೆಯ ಕಂಪನಿಯಲ್ಲಿ ಕೆಲಸದ ಆಫರ್ ಬರಬಹುದು. ನೀವು ಮಾಡುವ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವ ಸಮಯ. ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಹಣ ಉಳಿಸಬೇಕು ಎನ್ನುವ ಯೋಚನೆ ಇದ್ದರೆ ಅದನ್ನೂ ಮಾಡಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ.
ಸಿಂಹ ರಾಶಿ (Leo):
ಆಗಸ್ಟ್ ತಿಂಗಳು ನಿಮ್ಮ ಪಾಲಿಗೆ ವರವಾಗುವುದರಲ್ಲಿ ಸಂದೇಹ ಇಲ್ಲ. ತುಂಬಾ ಕೆಲಸಗಳನ್ನು ನೀವು ಅಂದುಕೊಂಡಿರುವ ರೀತಿಯಲ್ಲಿಯೇ ಮಾಡಿ ಮುಗಿಸುವಿರಿ. ನಿಮ್ಮ ಕೈ ತಪ್ಪಿ ಹೋಗುತ್ತಿದೆ ಎನ್ನುವ ಕೆಲಸಗಳು ಕೂಡಾ ದಡ ಸೇರುವುದು. ಆದಾಯ ಜಾಸ್ತಿಯಾಗುವುದು. ಇದರಿಂದಾಗಿ ಮನೆಯ ಹಣದ ಸಮಸ್ಯೆ ಕೂಡಾ ಕಡಿಮೆಯಾಗುತ್ತದೆ. ಬಹಳ ಸಮಯದ ನಂತರ ನೆಮ್ಮದಿ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗಿ ಹೊಸ ಕೆಲಸಕ್ಕೆ ಕೈ ಹಾಕುವಿರಿ. ಅದರಲ್ಲಿ ಗೆಲುವು ಕೂಡಾ ಸಾಧಿಸುತ್ತೀರಿ. ಒಂದೇ ಸಲಕ್ಕೆ ಆಗುವ ನಿಮ್ಮ ಅಭಿವೃದ್ದಿ ಬೇರೆಯವರ ಹುಬ್ಬೇರಿಸುವುದರಲ್ಲಿ ಆಶ್ಚರ್ಯ ಇಲ್ಲ.
ತುಲಾ ರಾಶಿ (Libra):
ಹೊಸ ತಿಂಗಳು ಹೊಸ ಅವಕಾಶಗಳನ್ನು ಹೊತ್ತು ತರುವ ಸಾಧ್ಯತೆ ತುಂಬಾ ಇದೆ. ಬಡ್ತಿ ಸಿಗುವುದು, ಸಂಬಳ ಜಾಸ್ತಿಯಾಗುವುದು. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ನೀವು ಕನಸಿನಲ್ಲಿಯೂ ಯೋಚಿಸದ ರೀತಿಯಲ್ಲಿ ಲಾಭವಾಗುವುದು. ಇಲ್ಲಿವರೆಗೆ ನಿಮ್ಮನ್ನು ಕಾಡುತ್ತಿದ್ದ ಹಣದ ಸಮಸ್ಯೆ ಒಂದೊಂದಾಗಿಯೇ ಬಗೆಹರಿಯುವುದು. ಹಣ ಕೂಡಿಡುವುದು ಸಾಧ್ಯವಾಗುತ್ತದೆ. ನಿಮ್ಮ ಜೀವನದ ಬಹಳ ಮುಖ್ಯ ನಿರ್ಧಾರ ತೆಗೆದುಕೊಳ್ಳುತ್ತೀರಿ. ಈ ಸಮಯದಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ಲಾಭವೇ ಆಗುವ ಸಾಧ್ಯತೆ ಹೆಚ್ಚು.
ಕುಂಭ ರಾಶಿ (Aquarius):
ನಿಮಗಂತೂ ಆಗಸ್ಟ್ ತಿಂಗಳು ದೊಡ್ಡ ಮಟ್ಟದಲ್ಲಿ ಗೆಲುವು ತಂದು ಕೊಡುವುದು. ಬೈಕ್ ಅಥವಾ ಕಾರು ತೆಗೆದುಕೊಳ್ಳುವ ಅವಕಾಶ ಸಿಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಸೋಲಿಲ್ಲದೆ ಮುನ್ನಡೆಯುವಿರಿ. ನಿಮ್ಮ ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ. ಹಿರಿಯರ ಆಸ್ತಿಯಲ್ಲಿ ಪಾಲು ಸಿಗುವುದು. ಸಾಲ ಸಮಸ್ಯೆಗಳಿಂದ ಮುಕ್ತಿ ಸಿಗುವ ಕಾಲ. ಈ ತಿಂಗಳು ನಿಮ್ಮ ಜೀವನದಲ್ಲಿ ಒಂದು ಪ್ರಮುಖ ತಿರುವು ಪಡೆಯುವ ಸಾಧ್ಯತೆಯಿದೆ.


Click it and Unblock the Notifications
