Vyatipata Yoga 2024: ಸೂರ್ಯ ಚಂದ್ರನ ಸಂಯೋಗದಿಂದ ಈ ರಾಶಿಗೆ ಹೊಸ ವರ್ಷಕ್ಕೂ ಮೊದಲು ಸಂಕಷ್ಟ

ನವಗ್ರಹಗಳಲ್ಲಿ ಕೆಲ ಗ್ರಹಗಳನ್ನು ಮಂಗಳಕರ ಇನ್ನೂ ಕೆಲ ಗ್ರಹಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಶುಭ ಹಾಗೂ ಅಶುಭ ಗ್ರಹಗಳು ಸಂಚಾರದ ವೇಳೆ ವಿಭಿನ್ನ ಪ್ರಭಾವ ಬೀರುತ್ತವೆ. ಅಂದರೆ ಜಾತಕದಲ್ಲಿ ಬಲವಾಗಿರುವ ಗ್ರಹ ಶುಭ ಫಲವನ್ನು ನೀಡಿದರೆ, ಜಾತಕದಲ್ಲಿ ದುರ್ಬಲವಾಗಿರುವ ಗ್ರಹ ಅಶುಭ ಫಲವನ್ನು ನೀಡುತ್ತದೆ. ಹೀಗಾಗಿ ಜಾತಕದಲ್ಲಿ ನವಗ್ರಹಗಳ ಸ್ಥಾನ ತುಂಬಾ ಮುಖ್ಯವಾಗಿರುತ್ತದೆ. ಅಂದಹಾಗೆ ಚಂದ್ರ ಮತ್ತು ಸೂರ್ಯ ಗ್ರಹಗಳನ್ನು ಮಂಗಳ ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳು ಡಿಸೆಂಬರ್ 8ಕ್ಕೆ ವ್ಯತಿಪತ ಯೋಗವನ್ನು ರೂಪಿಸಿವೆ.

ಸೂರ್ಯ ಮತ್ತು ಚಂದ್ರ ಒಂದೇ ನಕ್ಷತ್ರದಲ್ಲಿ ಒಂದೇ ಡಿಗ್ರಿಯಲ್ಲಿ ಬಂದಾಗ ರೂಪುಗೊಳ್ಳುತ್ತದೆ. ವ್ಯತಿಪತ ಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ಜನರ ಜೀವನದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. 2025ಕ್ಕೂ ಮೊದಲು ಕೆಲ ರಾಶಿಯವರು ವ್ಯತಿಪತ ಯೋಗದ ದುಷ್ಪರಿಣಾಮಗಳನ್ನು ಎದುರಿಸಲಿದ್ದಾರೆ. ಹಾಗಾದರೆ ಆ ರಾಶಿಗಳು ಯಾವವು ಎಂದು ಈಗ ತಿಳಿಯೋಣ.

Astrology vyatipata yoga 2024 sun-moon conjunction will bring difficult times for this zodiac sign

ಮಿಥುನ ರಾಶಿ

ವ್ಯತಿಪತ ಯೋಗ ಮಿಥುನ ರಾಶಿಯವರಿಗೆ ಉತ್ತಮವಾಗಿರುವುದಿಲ್ಲ. 2025 ಪ್ರಾರಂಭವಾಗುವ ಮೊದಲು ಮಿಥುನ ರಾಶಿಯ ಜನರ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಪ್ರಾಬಲ್ಯ ಸಾಧಿಸಲಿದೆ ಎಚ್ಚರಿಕೆಯಿಂದಿರಿ. ಇದರಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಬಹುದು. ಉದ್ಯೋಗಸ್ಥರು ಪ್ರತಿ ಸಂಭಾಷಣೆಯಲ್ಲಿ ಕೋಪಗೊಳ್ಳುವುದು ಕಂಡು ಬರುತ್ತದೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ಮಿಥುನ ರಾಶಿಯವರು ಮೇಲಧಿಕಾರಿಯ ಅಸಮಾಧಾನವನ್ನು ಎದುರಿಸಬೇಕಾಗಬಹುದು. ಡಿಸೆಂಬರ್ ತಿಂಗಳಲ್ಲಿ ವ್ಯಾಪಾರ ಪ್ರವಾಸಗಳು ಲಾಭದಾಯಕವಾಗಿರುವುದಿಲ್ಲ. ಕೆಲವು ಗಂಭೀರ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು.

Astrology vyatipata yoga 2024 sun-moon conjunction will bring difficult times for this zodiac sign

ಸಿಂಹ ರಾಶಿ

ವ್ಯತಿಪತ ಯೋಗ ಸಿಂಹ ರಾಶಿಯವರಿಗೆ ಮಂಗಳಕರವಾಗಿರುವುದಿಲ್ಲ. 2025ಕ್ಕೂ ಮೊದಲು ಸಿಂಹ ರಾಶಿಯವರ ಆದಾಯ ಕಡಿಮೆಯಾಗುವುದರಿಂದ ಜಾಗರೂಕರಾಗಿರಿ. ಇದರಿಂದಾಗಿ ಸಿಂಹ ರಾಶಿಯವರಿಗೆ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರಿಗಳು ಹೊಸ ಗುತ್ತಿಗೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಧಾನ್ಯಗಳು, ತರಕಾರಿಗಳು ಮತ್ತು ಮಸಾಲೆಗಳ ವ್ಯಾಪಾರದಲ್ಲಿ ತೊಡಗಿರುವ ಜನರು ಹಣ ಕಳೆದುಕೊಳ್ಳಬಹುದು. ಒಂದೇ ಕಂಪನಿಯಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿರುವವರು ಏಕಾಏಕಿ ಕೆಲಸ ಕಳೆದುಕೊಳ್ಳಬಹುದು. ಸಿಂಹ ರಾಶಿಯ ಜನರು ವಾದಗಳ ಸುಳಿಯಲ್ಲಿ ಸಿಲುಕುತ್ತಾರೆ.

Astrology vyatipata yoga 2024 sun-moon conjunction will bring difficult times for this zodiac sign

ಮೀನ ರಾಶಿ

ಡಿಜಿಟಲ್ ಮೀಡಿಯಾ, ಒಟಿಟಿ ಮತ್ತು ಸಿನಿಮಾಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಹಿರಿಯ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಅನುಭವಿಸಬಹುದು. ಇದು ಮೀನ ರಾಶಿಯವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸ ಕೆಲಸ ಪ್ರಾರಂಭಿಸಲು ಇದು ಸರಿಯಾದ ಸಮಯವಲ್ಲ. ಮಂಗಳಕರ ಕಾರ್ಯಗಳ ವೇಳೆ ವಿವಾಹಿತ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಳೆಯ ಹೂಡಿಕೆಗಳಿಮದ ಲಾಭ ಸಿಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+