Shukra Gochar 2025: ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದಾಗಿ ಈ 3 ರಾಶಿಯವರಿಗೆ ಅದೃಷ್ಟದೊಂದಿಗೆ ಹಣದ ಮಳೆ!
ನವಗ್ರಹಗಳಲ್ಲಿ ಶುಕ್ರಗ್ರಹ ವಿಶೇಷ ಸ್ಥಾನವನ್ನು ಹೊಂದಿದೆ. ಶುಕ್ರ ಗ್ರಹ ಒಬ್ಬ ವ್ಯಕ್ತಿಯ ಜೀವನ, ಸಂಪತ್ತು, ಆದಾಯ ಇತ್ಯಾದಿಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹೀಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಶುಕ್ರನ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶುಕ್ರ ಗ್ರಹ ಸಂಚಾರದ ವೇಳೆ 25 ರಿಂದ 26 ದಿನಗಳಲ್ಲಿ ಒಂದು ರಾಶಿಯನ್ನು ಬದಲಾಯಿಸುತ್ತಾನೆ. ಇದು 12 ರಾಶಿಯವರ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.
ಅಂದಹಾಗೆ ಶುಭ ಗ್ರಹ ಶುಕ್ರ ಮುಂದಿನ ವರ್ಷ ಮಂಗಳವಾರ ಜನವರಿ 28ರಂದು ಬೆಳಿಗ್ಗೆ 07:12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸಂಚಾರ ಅನಾನುಕೂಲವಾಗಿರುತ್ತದೆ. ಕೆಲವೊಮ್ಮೆ ಈ ಸಂಚಾರ ಸಾಕಷ್ಟು ಅನುಕೂಲಕರ ಫಲವನ್ನು ನೀಡುತ್ತದೆ. ಆದರೆ 2025ರಲ್ಲಿ ಶುಕ್ರನ ಸಂಚಾರ ಕೆಲ ರಾಶಿಯವರ ಜೀವನದಲ್ಲಿ ಸಂತೋಷ, ಶಾಂತಿ, ಸಂಪತ್ತು, ವೈಭವ ಮತ್ತು ಸಮೃದ್ಧಿ ಇತ್ಯಾದಿಗಳನ್ನು ನೀಡಲಿದೆ. ಹಾಗಾದರೆ ಯಾವ ರಾಶಿಯವರಿಗೆ ಶುಕ್ರನ ಈ ಸಂಚಾರ ಮಂಗಳಕರವಾಗಿದೆ ಎಂದು ತಿಳಿಯೋಣ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶುಕ್ರ ಸಂಕ್ರಮಣ ಮಂಗಳಕರವಾಗಿದೆ. ಇದು ಶುಭ ಪರಿಣಾಮದಿಂದ ಮಿಥುನ ರಾಶಿಯ ವಿದ್ಯಾರ್ಥಿಗಳ ಬುದ್ಧಿಶಕ್ತಿ ಸುಧಾರಿಸುತ್ತದೆ. ಉದ್ಯೋಗಿಗಳ ಉದ್ಯೋಗವಕಾಶ ಹೆಚ್ಚಾಗುತ್ತದೆ. ಆರೋಗ್ಯ, ಕಲೆ, ಬರವಣಿಗೆ, ಫ್ಯಾಷನ್ ಮತ್ತು ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಇದ್ದಕ್ಕಿದ್ದಂತೆ ಉತ್ತಮ ಲಾಭವನ್ನು ಗಳಿಸಬಹುದು. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಸಮಾಜದಲ್ಲಿ ಹೆಸರು ಗಳಿಸುತ್ತಾರೆ. ಜನವರಿ ತಿಂಗಳಲ್ಲಿ ವಿವಾಹಿತರ ಪ್ರೇಮ ಜೀವನ ಸಾಕಷ್ಟು ಸುಧಾರಿಸಲಿದೆ.

ಕನ್ಯಾ ರಾಶಿ
ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ ಕನ್ಯಾ ರಾಶಿಯವರಿಗೆ ಶುಭ ಫಲ ನೀಡಲಿದೆ. ಹೊಸ ವರ್ಷದ ಆರಂಭದಲ್ಲೇ ಸಾಕಷ್ಟು ಆದಾಯ ನಿಮ್ಮ ಕೈ ಸೇರಲಿದೆ. ಶುಕ್ರ ದೇವರ ವಿಶೇಷ ಕೃಪೆಯಿಂದ ನೀವು ಜಮೀನು, ಮನೆ, ವಾಹನ ಖರೀದಿಸಬಹುದು. ಹೊಸ ಕೆಲಸ ಮಾಡುವ ಅವಕಾಶ ಸಿಗಲಿದೆ.
ಮುಂಬರುವ ವರ್ಷ ವಿಶೇಷವಾಗಿ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವ ಜನ, ಮಾಡೆಲಿಂಗ್, ಕಬ್ಬಿಣದ ಸಾಮಾನುಗಳ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಧನಲಾಭವಿದೆ. ಅವಿವಾಹಿತರು ಮುಂದಿನ ದಿನಗಳಲ್ಲಿ ಹಣ ಸಂಪಾದಿಸಲು ಹಲವು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಸಿಗಲಿದೆ.

ವೃಶ್ಚಿಕ ರಾಶಿ
ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಶುಭ ಫಲವನ್ನು ನೀಡಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಹೊಸ ವರ್ಷದಲ್ಲಿ ಅಧಿಕ ಲಾಭವನ್ನು ಗಳಿಸುವರು. ಮಾಧ್ಯಮ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಅವರ ಇಷ್ಟಾರ್ಥಗಳು ಶೀಘ್ರದಲ್ಲೇ ಈಡೇರುತ್ತವೆ.
ಬಟ್ಟೆ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಹೊಂದಿರುವ ಜನರ ಆದಾಯ ಮಾತ್ರವಲ್ಲದೆ, ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವಿರಿ. ಸ್ವಂತ ಕಾರ್ಖಾನೆಗಳನ್ನು ಹೊಂದಿರುವವರ ಕೆಲಸ ವೇಗಗೊಳ್ಳುತ್ತದೆ. ವ್ಯಾಪಾರ ವಿಸ್ತರಣೆಯಾದಂತೆ ಲಾಭವೂ ಹೆಚ್ಚಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಿಸುತ್ತದೆ.












Click it and Unblock the Notifications