Trigrahi Yoga 2025: ಮೀನ ರಾಶಿಯಲ್ಲಿ ತ್ರಿಗ್ರಹಿ ಯೋಗ- ಈ ರಾಶಿಗೆ ಅಷ್ಟೈಶ್ವರ್ಯ
ನವಗ್ರಹಗಳ ಸ್ಥಾನ ಜಾತಕದಲ್ಲಿ ಅತ್ಯುತ್ತಮವಾಗಿದ್ದರೆ ಆ ವ್ಯಕ್ತಿ ಜೀವನದಲ್ಲಿ ಕೆಳಗೆ ಬೀಳಲು ಸಾಧ್ಯವೇ ಇಲ್ಲ. ಆತನ ಏಳಿಗೆಯನ್ನು ತಡೆಯಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ಆದರೆ ಗ್ರಹಗಳ ಸ್ಥಾನ ಉತ್ತಮವಾಗಿಲ್ಲವಾದಲ್ಲಿ ಪಾತಾಳಕ್ಕೆ ಬೀಳುವುದು ಖಚಿತ. ಹೀಗಾಗಿ ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿಗಳಲ್ಲಿನ ಬದಲಾವಣೆ ಬಹಳ ಮುಖ್ಯವಾಗಿದೆ.
ಗ್ರಹಗಳು ಸಂಚಾರ ಮಾಡುವಾಗಲೆಲ್ಲಾ ಅದರ ಶುಭ ಅಥವಾ ಅಶುಭ ಪರಿಣಾಮ ಎಲ್ಲಾ ರಾಶಿಗಳ ಜನರ ಮೇಲೆ ಅವರ ಜಾತಕದಲ್ಲಿನ ಗ್ರಹಗಳ ಸ್ಥಾನಕ್ಕೆ ಅನುಗುಣವಾಗಿ ಕಂಡುಬರುತ್ತದೆ. ಎಲ್ಲಾ ಗ್ರಹಗಳು ತಮ್ಮ ರಾಶಿಗಳನ್ನು ಒಂದು ನಿರ್ದಿಷ್ಟ ಮಧ್ಯಂತರದಲ್ಲಿ ಬದಲಾಯಿಸುತ್ತವೆ.
ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಚಾರ ಮಾಡಿದಾಗ ಶುಭ ಹಾಗೂ ಆಶುಭ ಯೋಗಗಳು ರೂಪಗೊಳ್ಳುತ್ತವೆ. ಕೆಲವು ದಿನಗಳ ನಂತರ ರಾಹು, ಬುಧ ಮತ್ತು ಸೂರ್ಯ ಈ ಮೂರು ಗ್ರಹಗಳು ಮೀನ ರಾಶಿಯಲ್ಲಿ ಸಾಗುತ್ತವೆ. ರಾಹು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು 18 ತಿಂಗಳು ತೆಗೆದುಕೊಳ್ಳುತ್ತದೆ. ರಾಹು ಪ್ರಸ್ತುತ ಮೀನ ರಾಶಿಯಲ್ಲಿದ್ದಾನೆ, ಮತ್ತೊಂದೆಡೆ ಬುಧ ಫೆಬ್ರವರಿ 27 ರಂದು ಮೀನ ರಾಶಿಗೆ ಪ್ರವೇಶಿಸುತ್ತಾನೆ ಮತ್ತು ಸೂರ್ಯ ದೇವರು ಮಾರ್ಚ್ 14 ರಂದು ಮೀನ ರಾಶಿಗೆ ಪ್ರವೇಶಿಸುತ್ತಾನೆ.
ಈ ರೀತಿಯಾಗಿ ಸೂರ್ಯ, ಬುಧ ಮತ್ತು ರಾಹುವಿನ ಸಂಯೋಗದಿಂದಾಗಿ ತ್ರಿಗ್ರಹಿ ರೂಪುಗೊಳ್ಳುತ್ತದೆ. ಕೆಲವು ರಾಶಿಗಳ ಜನರು ಈ ತ್ರಿಗ್ರಹಿ ಯೋಗದಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.

ಮಿಥುನ ರಾಶಿ
ತ್ರಿಗ್ರಹಿ ಯೋಗ ಮಿಥುನ ರಾಶಿಯ ಜನರಿಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ಮಿಥುನ ರಾಶಿಯವರ ಆರ್ಥಿಕ ಲಾಭದ ಅವಕಾಶಗಳು ಹೆಚ್ಚಾಗಲಿವೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ.
ಈ ತ್ರಿಗ್ರಹಿ ಯೋಗವು ಮಿಥುನ ರಾಶಿಯ ಹತ್ತನೇ ಮನೆಯಲ್ಲಿ ಸಂಭವಿಸುತ್ತದೆ. ನಿಮ್ಮ ಕೆಲಸದ ಮೂಲಕ ನೀವು ಬಹಳಷ್ಟು ಸಂಪತ್ತನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಉದ್ಯೋಗ ಹುಡುಕುತ್ತಿರುವವರಿಗೆ ಹಲವು ಅವಕಾಶಗಳು ಸಿಗಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ಗಳಿಸಲು ಸಾಕಷ್ಟು ಅವಕಾಶವಿದೆ.

ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಮೀನ ರಾಶಿಯಲ್ಲಿನ ತ್ರಿಗ್ರಹಿ ಯೋಗ ತುಂಬಾ ಶುಭವಾಗಲಿದೆ. ಈ ಯೋಗ ನಿಮ್ಮ ರಾಶಿಯ ಎಂಟನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಸಿಂಹ ರಾಶಿಯ ಜನರಿಗೆ ಹಠಾತ್ ಆರ್ಥಿಕ ಲಾಭದ ಅವಕಾಶಗಳು ಹೆಚ್ಚಾಗುತ್ತವೆ.
ಈ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ನೀವು ಕೆಲವು ದೊಡ್ಡ ಲಾಭಗಳನ್ನು ಪಡೆಯುವಿರಿ. ಸಮಾಜದಲ್ಲಿ ನಿಮಗೆ ವಿಶೇಷ ಗೌರವ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ
ಮೀನ ರಾಶಿಯವರಿಗೆ ಈ ತ್ರಿಗ್ರಹಿ ಯೋಗ ಲಗ್ನ ಮನೆಯಲ್ಲಿ ಸಂಭವಿಸುತ್ತದೆ. ಈ ರಾಶಿಯ ಜನರು ಆತ್ಮವಿಶ್ವಾಸದಿಂದ ಇರುತ್ತಾರೆ. ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ.
ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ನೀವು ಜೀವನದಲ್ಲಿ ಸೌಕರ್ಯಗಳು ಮತ್ತು ಐಷಾರಾಮಿ ಜೀವನವನ್ನು ನಡೆಸುವ ಅವಕಾಶ ಸಿಗಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications