Shobhana Yoga 2024: ಇಂದು ಶೋಭನ ಯೋಗ: ಈ ರಾಶಿಯವರಿಗೆ ಗುರುರಾಯರ ಅನುಗ್ರಹದಿಂದ ಸಮೃದ್ಧಿ

ಜಾತಕದಲ್ಲಿ ಗ್ರಹಗಳ ಸ್ಥಾನ ತುಂಬಾ ಮಹತ್ವದ್ದಾಗಿದೆ. ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಾದ ಇಂದು (ನವೆಂಬರ್ 28) ಅನೇಕ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಈ ದಿನ ಚಂದ್ರ ಗ್ರಹ ತುಲಾ ರಾಶಿಯಲ್ಲಿ ಸಂಚಾರ ಮಾಡಲಿದೆ. ಈ ಸಂಚಾರದಿಂದಾಗಿ ಶೋಭನ ಯೋಗ ಮತ್ತು ಚಿತ್ರ ನಕ್ಷತ್ರದ ಶುಭ ಸಂಯೋಗ ಸಂಭವಿಸಲಿದೆ. ಇದರ ಪ್ರಭಾವ ದ್ವಾದಶಿ ರಾಶಿಗಳ ಮೇಲೆ ಕಂಡು ಬರುತ್ತದೆ. ಗುರು ಪ್ರದೋಷ ವ್ರತದ ದಿನವಾದ ಇಂದು ಶೋಭನ ಯೋಗ ಜೊತೆಗೆ ಸೌಭಾಗ್ಯ ಯೋಗ ಕೂಡ ರೂಪಗೊಳ್ಳುತ್ತದೆ. ಹಾಗಾದರೆ ಈ ದಿನದ ಅದೃಷ್ಟ ರಾಶಿಗಳ ಬಗ್ಗೆ ತಿಳಿಯೋಣ.

Astrology shobhana yoga on november 28 these 5 zodiac signs will get fortune happiness prosperity

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಮಂಗಳಕರವಾಗಿದೆ. ವ್ಯಾಪಾರದಲ್ಲಿ ಬೆಳವಣಿಗೆ ಕಾಣುವಿರಿ. ಹೊಸ ಉತ್ಸಾಹ ಕಂಡು ಬರಲಿದೆ. ಜೀವನದಲ್ಲಿ ನೆಮ್ಮದಿ ಸಿಗಲಿದೆ. ಕೆಲಸದ ಒತ್ತಡದಿಂದ ಕೊಂಚ ವಿರಾಮ ಸಿಗುವುದು. ನಿಮ್ಮವರ ಸಹಾಯದಿಂದ ಅನೇಕ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಗುರುರಾಯರ ಆಶೀರ್ವಾದಿಂದ ನಿಮ್ಮ ಕುಟುಂಬದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಮನಸ್ತಾಪಗಳು ಶಮನವಾಗಿ ಕುಟುಂಬದಲ್ಲಿ ಸುಖ, ಶಾಂತಿ ನೆಲೆಸಲಿದೆ. ವೃತ್ತಿಜೀವನದ ಪ್ರಗತಿಗೆ ಸುವರ್ಣಾವಕಾಶ ಸಿಗುತ್ತದೆ.

Astrology shobhana yoga on november 28 these 5 zodiac signs will get fortune happiness prosperity

ಕಟಕ ರಾಶಿ

ಕಟಕ ರಾಶಿಯವರಿಗೆ ಗುರುವಾರ ಶುಭ ದಿನವಾಗಿದೆ. ಚಿಂತೆಗಳು ನಿಮ್ಮಿಂದ ದೂರವಾಗುತ್ತವೆ. ವಿಷ್ಣುವಿನ ಅನುಗ್ರಹದಿಂದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಈ ದಿನ ಮಾಡಿದ ಉತ್ತಮ ಕಾರ್ಯಗಳಿಗೆ ದುಪ್ಪಟ್ಟು ಫಲ ನಿಮಗೆ ಲಭಿಸಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರವಾಸ ಕೈಗೊಳ್ಳಬಹುದು.

ನಿರುದ್ಯೋಗಿಗಳಿಗೆ ಅಂದುಕೊಂಡ ಉದ್ಯೋಗವಕಾಶ ಸಿಗಲಿದೆ. ಕೃಷಿಕರಿಗೆ ಉತ್ತಮ ಲಾಭ ಕೈ ಸೇರುವ ಸಮಯವಿದು. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹೂಡಿಕೆಯಲ್ಲಿ ಲಾಭ ಇದೆ. ಉದ್ಯಮಿಗಳಿಗೆ ಈ ದಿನ ಸಾಕಷ್ಟು ಹಣದ ಹರಿವು ಇರುತ್ತದೆ.

Astrology shobhana yoga on november 28 these 5 zodiac signs will get fortune happiness prosperity

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಗುರುವಾರದ ದಿನ ಅತ್ಯಂತ ಶುಭ ಫಲವನ್ನು ನೀಡುವ ದಿನವಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ನಿಮ್ಮ ಆತ್ಮೀಯರಿಂದ ಹಣದ ಸಹಾಯ ಸಿಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನಿಮ್ಮ ನೆಚ್ಚಿನ ಉದ್ಯೋಗ ಪಡೆಯಲು ನಿಮಗೆ ಆಫರ್ ಬರಬಹುದು. ವಿದ್ಯಾರ್ಥಿಗಳಿಗೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಪರೀಕ್ಷೆಯಲ್ಲಿ ಅಂದುಕೊಮಡ ಅಂಕ ಬರಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ.

Astrology shobhana yoga on november 28 these 5 zodiac signs will get fortune happiness prosperity

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಮಂಗಳಕರವಾದ ಫಲಿತಾಂಶ ಸಿಗಲಿದೆ. ಯಾವುದೇ ಕೆಲಸದಲ್ಲಿ ಯಶಸ್ಸು ಕಾಣುವುದು ಪಕ್ಕಾ. ಮುಚ್ಚೆದ್ದೆಲ್ಲವೂ ಚಿನ್ನವಾಗುವ ಸಮಯ ಇದು. ಮನೆಗೆ ಧನಾಗಮನವಾಗಲಿದೆ. ಲಕ್ಷ್ಮೀದೇವಿಯ ಕೃಪಕಟಾಕ್ಷದಿಂದ ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ. ಯಾವುದೇ ಉದ್ಯೋಗಿಗಳ ಉತ್ಸಾಹ ಈ ದಿನ ಹೆಚ್ಚಾಗಿಲಿದೆ. ವಿಷ್ಣವಿನ ಆಶೀರ್ವಾದಿಂದ ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುವವರಿಗೆ ಶುಭ ಸುದ್ದಿ ಕಾದಿದೆ. ವ್ಯಾಪಾರದಲ್ಲಿ ಏಳಿಗೆ, ಸಮಾಜದಲ್ಲಿ ಖ್ಯಾತಿ, ನಿಮ್ಮವರಿಂದ ನಿಮಗೆ ಪ್ರಶಸಂಸೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದೊಂದಿದೆ ನೆಮ್ಮದಿ ಕೂಡ ನೆಲೆಸಲಿದೆ.

Astrology shobhana yoga on november 28 these 5 zodiac signs will get fortune happiness prosperity

ಧನು ರಾಶಿ

ಧನು ರಾಶಿಯವರಿಗೆ ಗುರುವಾರ (ನವೆಂಬರ್ 28) ಅದ್ಭುತ ದಿನವಾಗಿದೆ. ಈ ದಿನ ನೀವಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರುತ್ತವೆ. ಅಪೂರ್ಣ ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗವನ್ನು ಬದಲಾಯಿಸಲು ನೀವು ಪ್ರಯತ್ನಗಳು ಮಾಡಬಹುದು. ಕೆಲಸದಲ್ಲಿ ಬಾಸ್‌ನಿಂದ ಪ್ರಶಂಸೆ ಪಡೆಯುವಿರಿ. ನಿಮ್ಮ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಕುಟುಂಬಸ್ಥರೊಂದಿಗೆ ಕೆಲ ಕಾಲ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗಲಿದೆ. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ನೀವು ಮಾಡಿದ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+