saturn venus conjunction 2024: ಶುಕ್ರ ಶನಿ ಯುತಿ- ಯಾವ ರಾಶಿಯವರಿಗೆ ಶುಭ ಫಲ ಸಿಗಲಿದೆ?

ಸಂಪತ್ತು ಮತ್ತು ಸಮೃದ್ಧಿಯ ದೇವರು ಶುಕ್ರಗ್ರಹ 2024 ಡಿಸೆಂಬರ್ 28ರಂದು ರಾತ್ರಿ 11:48ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಈ ರಾಶಿಯಲ್ಲಿ ಈಗಾಗಲೇ ಶನಿ ಗ್ರಹವಿದೆ. ಶುಕ್ರಗ್ರಹ 2025 ಜನವರಿ 28ರವರೆಗೆ ಕುಂಭ ರಾಶಿಯಲ್ಲಿ ಇರಲಿದ್ದಾನೆ. ಶುಕ್ರ ಮತ್ತು ಶನಿಯ ಸಂಯೋಗ ಕುಂಭ ರಾಶಿಯಲ್ಲಿ 30 ದಿನಗಳವರೆಗೆ ಇರುತ್ತದೆ. ಈ ಸಂಯೋಗ 12ರಲ್ಲಿ 3 ರಾಶಿಗಳಿಗೆ ಉತ್ತಮ ಫಲ ನೀಡುತ್ತದೆ. ಹಾಗಾದರೆ ಆ 3 ರಾಶಿಯ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ?

Astrology saturn venus conjunction 2024 which zodiac signs will get auspicious results

ವೃಷಭ ರಾಶಿ

ವೃಷಭ ರಾಶಿಯವರಿಗೆ ಶುಕ್ರ ಮತ್ತು ಶನಿಯ ಸಂಯೋಗ ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ಹೊಸ ವರ್ಷ ಹೊಸ ಭರವಸೆಗಳು ಮತ್ತು ಆಲೋಚನೆಗಳೊಂದಿಗೆ ಇರುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.

ಸಮಾಜಸೇವೆಯಲ್ಲದೆ ಧಾರ್ಮಿಕ ಕಾರ್ಯಗಳನ್ನೂ ಮನಃಪೂರ್ವಕವಾಗಿ ಮಾಡುವಿರಿ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅವಿವಾಹಿತರು ಮದುವೆಯಾಗಬಹುದು. ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ. ಹಳೆಯ ಸ್ನೇಹಿತರೊಂದಿಗೆ ಸಮನ್ವಯ ಸುಧಾರಿಸುತ್ತದೆ. ಕಂಕಣ ಭಾಗ್ಯ ಕೂಡಿ ಬರಲಿದೆ.

Astrology saturn venus conjunction 2024 which zodiac signs will get auspicious results

ತುಲಾ ರಾಶಿ

ತುಲಾ ರಾಶಿಯವರಿಗೆ ಶುಕ್ರ ಮತ್ತು ಶನಿಯ ಸಂಯೋಗ ಲಾಭವನ್ನು ತಂದು ಕೊಡಲಿದೆ. ಹೊಸ ವರ್ಷಕ್ಕೂ ಮೊದಲು ಒಳ್ಳೆಯ ಸುದ್ದಿಯನ್ನು ನೀವು ಕೇಳಬಹುದು. ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳು ಲಭ್ಯವಾಗುತ್ತವೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಉದ್ಯೋಗಿಗಳಿಗೂ ಸಮಯ ಉತ್ತಮವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸಾಲದಿಂದ ಮುಕ್ತಿ ಸಿಗುವ ಸಾಧ್ಯತೆಯೂ ಇದೆ.

ನಿಮ್ಮ ಸಂಗಾತಿ ನಿಮ್ಮೊಂದಿಗೆ ಸುಖ ಸಂಸಾರ ನಡೆಸಲಿದ್ದಾರೆ. ಶನಿ ದೇವರ ಆಶೀರ್ವಾದದಿಂದ ಎಲ್ಲವೂ ನೀವಂದುಕೊಂಡ ರೀತಿ ಆಗಲಿದೆ. ಕೆಲಸದಲ್ಲಿನ ಸಮಸ್ಯೆಗಳು ದೂರವಾಗಲಿದೆ. ಆದಾಯದಲ್ಲಿ ಇದ್ದ ಅಡೆತಡೆಗಳು ನಾಶವಾಗಲಿದೆ. ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದೆ. ನೀವಂದುಕೊಂಡಂತೆ ನಿಮ್ಮ ಜೀವನ ನಡೆಯಲಿದೆ.

Astrology saturn venus conjunction 2024 which zodiac signs will get auspicious results

ಕುಂಭ ರಾಶಿ

ಕುಂಭ ರಾಶಿಯವರಿಗೆ ಶುಕ್ರ ಸಂಕ್ರಮಣ ಮತ್ತು ಶನಿಯ ಸಂಯೋಗ ಮಂಗಳಕರವಾಗಿದೆ. ಜೀವನದ ಎಲ್ಲಾ ಸಮಸ್ಯೆಗಳು ದೂರವಾಗಿ ಸಂತೋಷದ ಜೀವನ ನಡೆಸುವಿರಿ. ಸಂಗಾತಿಯೊಂದಿಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಸುಧಾರಣೆ ಕಾಣಲಿದೆ. ನೀವು ಹೂಡಿಕೆಯ ಬಗ್ಗೆ ಯೋಚಿಸಿದರೆ ಅದರಲ್ಲಿ ಸಾಕಷ್ಟು ಲಾಭವಿದೆ. ಅದು ಲಾಭವನ್ನು ತಂದುಕೊಡಲಿದೆ. ನ್ಯಾಯಾಲಯದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

ಕೆಲಸದ ಒತ್ತಡ ಕಡಿಮೆಯಾಗಲಿದೆ. ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗಲಿದೆ. ನಿಮ್ಮ ಮಾತು ಮಧುರವಾಗಿರುತ್ತದೆ. ನಿಮ್ಮ ಸ್ನೇಹಿತರ ಬಳಗ ಹೆಚ್ಚಾಗಲಿದ್ದು ಎಲ್ಲರೂ ನಿಮ್ಮ ಕೆಲಸದಲ್ಲಿ ಸಹಾಯ ಮಾಡಲಿದ್ದಾರೆ. ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+