Saturn Direct 2024: ಶನಿ ನೇರವಾಗುವುದರಿಂದ ಈ ರಾಶಿಯ ಸನ್ಮಾರ್ಗದವರೇ ಸಿರಿವಂತರು, ಸ್ನೇಹಿತರಾಗುವರು ಶತ್ರುಗಳು!

ನವಗ್ರಹಗಳಲ್ಲಿ ಶನಿ ದೇವನ ಬಗ್ಗೆ ಜನರಲ್ಲಿ ತುಂಬಾ ಭಯವಿದೆ. ಕಾರಣ ಶನಿ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲ ನೀಡುವ ದೇವರು. ಕೆಟ್ಟ ಕಾರ್ಯಗಳನ್ನು ಮಾಡುವವರಿಗೆ ಶನಿ ಒಳಿತನ್ನು ಮಾಡುವುದಿಲ್ಲ. ಒಳಿತನ್ನು ಮಾಡುವವರಿಗೆ ಶನಿ ದೇವನ ಆಶೀರ್ವಾದ ಸದಾ ಇರುತ್ತದೆ.

ಪ್ರಸ್ತುತ ಶನಿ ಹಿಮ್ಮುಖವಾಗಿ ಚಲಿಸುತ್ತಿದೆ. ನವೆಂಬರ್ 15ರಂದು ಶನಿಯು ನೇರವಾಗಿ ಚಲಿಸಲಿದೆ. ನವೆಂಬರ್ 15ರಿಂದ ಶನಿಯು ತನ್ನ ಹಿಮ್ಮುಖ ಚಲನೆಯಿಂದ ನೇರವಾಗಿ ಚಲಿಸಲು ಆರಂಭಿಸುತ್ತದೆ. ಈ ಕಾರಣದಿಂದಾಗಿ ಜನರು ನವೆಂಬರ್ 16 ರಿಂದ ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ನೋಡುತ್ತಾರೆ. ಇದು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

ಯಾರ ಜಾತಕದಲ್ಲಿ ಶನಿ ಸ್ಥಾನ ಉತ್ತಮವಾಗಿರುತ್ತೋ ಅಂಥವರ ಜೀವನ ಶನಿ ನೇರ ಸಂಚಾರದ ಸಮಯದಲ್ಲಿ ಅದ್ಭುತವಾಗಿರುತ್ತದೆ. ಶನಿದೇವ ಶುಭ ಫಲಗಳನ್ನು ನೀಡಲಿದ್ದಾನೆ. ಯಾರ ಜಾತಕದಲ್ಲಿ ಶನಿ ಸ್ಥಾನ ದುರ್ಬಲವಾಗಿರುತ್ತೋ ಅಂತವರಿಗೆ ಶನಿಕಾಟ ಶುರುವಾಗಲಿದೆ. ಹಾಗಾದರೆ ಶನಿ ನೇರ ಸಂಚಾರದಿಂದಾಗಿ ಯಾವ ರಾಶಿಯವರಿಗೆ ಅನುಕೂಲವಾಗಿದೆ ಎನ್ನುವುದು ಈಗ ತಿಳಿಯೋಣ.

ಶನಿ ಮಾರ್ಗಿ 2024 ರಾಶಿಗಳ ಮೇಲೆ ಪರಿಣಾಮ

Astrology saturn direct transit on november 15 saturn will bring good luck to this zodiac sign

ಮೇಷ ರಾಶಿ

ಶನಿ ಮಾರ್ಗಿ ಅಥವಾ ಶನಿ ನೇರ ಸಂಚಾರ ಕೆಲ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ನೀಡಲಿದೆ. ಕೆಲವು ರಾಶಿಗಳಿಗೆ ಶನಿ ನೇರ ಅದೃಷ್ಟವನ್ನು ತಂದುಕೊಡಲಿದೆ. ಇದರಲ್ಲಿ ಮೇಷ ರಾಶಿಯು ಹೆಚ್ಚಿನ ಲಾಭವನ್ನು ಪಡೆಯಲಿದೆ. ಏಕೆಂದರೆ ಇದು ಮೇಷ ರಾಶಿಯಿಂದ ಕುಂಭಕ್ಕೆ 11 ನೇ ಮನೆಯಲ್ಲಿ ಸ್ಥಿತವಾಗಿದೆ. ಶನಿಯು ತನ್ನ ನೇರ ಸ್ಥಿತಿಯಲ್ಲಿ ಈ ರಾಶಿಚಕ್ರದ ಜನರಿಗೆ ಶೀಘ್ರವಾಗಿ ಕಲ್ಯಾಣವನ್ನು ತರುತ್ತಾನೆ.

ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯು 29ನೇ ಮಾರ್ಚ್ 2025 ರೊಳಗೆ ಶನಿಯಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಲಿದೆ. ಮೇಷ ರಾಶಿಯವರಿಗೆ ಬಡ್ತಿಯ ಪ್ರಬಲ ಸಾಧ್ಯತೆಗಳಿವೆ. ಮೇಷ ರಾಶಿಯವರ ಜಾತಕದಲ್ಲಿ ಹೊಸ ವಾಹನ ಅಥವಾ ಹೊಸ ಮನೆಯನ್ನು ಖರೀದಿಸುವ ಯೋಗವಿದೆ.

ಮೇಷ ರಾಶಿಯವರಿಗೆ 2025ರ ಹೊಸ ವರ್ಷದ ಮೊದಲ ಮೂರು ತಿಂಗಳುಗಳು ಅವರ ಜೀವನದಲ್ಲಿ ವಿಶೇಷ ಸಂತೋಷವನ್ನು ತರಲಿವೆ. ಶನಿ ಪ್ರತ್ಯಕ್ಷವಾಗಿರುವುದರಿಂದ ಮೇಷ ರಾಶಿಯವರಿಗೆ ಅದೃಷ್ಟ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಟ್ಟಿನಲ್ಲಿ ನಿಮ್ಮ ಜಾತಕದಲ್ಲಿ ಶನಿ ಸಂಕ್ರಮಣವು ನಿಮಗೆ ಲಾಭದಾಯಕವಾಗಿದೆ.

Astrology saturn direct transit on november 15 saturn will bring good luck to this zodiac sign

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಶನಿ ಈ ಸಂದರ್ಭದಲ್ಲಿ ಧೈರ್ಯ ಹಾಗೂ ಶೌರ್ಯವನ್ನು ಹೆಚ್ಚಿಸುವನು. ಶನಿ ಸಂಚಾರದಿಂದ ಕನ್ಯಾ ರಾಶಿಯವರ ಜೀವನ ಬದಲಾಗಲಿದೆ. ಆಸ್ತಿ ಮತ್ತು ಅಂತಸ್ತು ಖರೀದಿಗೆ ಅವಕಾಶಗಳು ಸಿಗಲಿದೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ನಡೆಯಲಿದೆ.

ಶತ್ರುಗಳ ಕಾಟದಿಂದ ನೀವು ಮುಕ್ತರಾಗುವಿರಿ. ನಿಮ್ಮ ಜೀವನದಲ್ಲಿ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗಲಿದೆ. ನಿಮ್ಮ ಕಾರ್ಯಗಳಲ್ಲಿ ಇದ್ದ ಅಡೆತಡೆಗಳು ದೂರವಾಗಲಿದೆ. ಕೆಲಸದಲ್ಲಿ ಹೊಸ ಉತ್ಸಾಹ ಹೆಚ್ಚಾಗಲಿದೆ. ನಿಮ್ಮ ಜೀವನದ ಪ್ರತಿಯೊಂದು ಕ್ಷಣಗಳನ್ನು ನೀವು ಆನಂದಿಸುವಿರಿ.

Astrology saturn direct transit on november 15 saturn will bring good luck to this zodiac sign

ಧನು ರಾಶಿ

ಮೇಷ ರಾಶಿಯ ಜೊತೆಗೆ ಧನು ರಾಶಿಯವರಿಗೆ ಶನಿ ಆಶೀರ್ವಾದ ಲಭಿಸಲಿದೆ. ಆರ್ಥಿಕ ಜೀವನ ಸುಧಾರಿಸಲಿದೆ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗಲಿದ್ದು, ಸಮಸ್ಯೆಗಳು ಅಡೆತಡೆಗಳು ದೂರವಾಗಲಿದೆ, ಧನು ರಾಶಿಯವರಿಗೆ ಶನಿ ನೇರ ಸಂಚಾರ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು, ಹೊಸ ವಸ್ತುಗಳ ಖರೀದಿಗೆ ಅವಕಾಶ ಸಿಗಲಿದೆ.

ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದ್ದು ಅಂದುಕೊಮಡ ಸಂಗಾತಿ ಕೈಹಿಡಿಯುವಿರಿ. ವಿವಾಹಿತ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಜೀವನದ ಸಮಸ್ಯೆಗಳು ದೂರವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸಲಿದೆ. ಸಮಾಜಿದಲ್ಲಿ ನಿಮ್ಮ ಖಾರ್ಯ ಪ್ರಶಂಸಿಸಲಾಗುತ್ತದೆ. ಒಟ್ಟಿನಲ್ಲಿ ಶನಿ ನೇರ ಸಂಚಾರ ಧನು ರಾಶಿಯವರಿಗೆ ಸಕಲ ಯೋಗವನ್ನು ನೀಡಲಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕಾಕೈಕ ಉದ್ದೇಶ. ಈ ಮಾಹಿತಿಯನ್ನು ಅನುಷ್ಠಾನಕ್ಕೆ ತರುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+