Sarvarth Siddhi Yoga 2025: ಹೊಸ ವರ್ಷದಲ್ಲಿ ಈ 6 ದಿನ ಕಾರು, ಆಭರಣ ಖರೀದಿಸಲು ಉತ್ತಮ ಸಮಯ

ಜ್ಯೋತಿಷ್ಯದ ಪ್ರಕಾರ ಸರ್ವಾರ್ಥ ಸಿದ್ಧಿ ಯೋಗ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ಜೀವನದಲ್ಲಿ ಎಲ್ಲಾ ರೀತಿಯ ಶುಭ ಫಲಗಳನ್ನು ನೀಡುತ್ತದೆ. ವ್ಯಾಪಾರ ಆರಂಭಿಸುವುದು, ಹೊಸ ಮನೆ ಕೊಳ್ಳುವುದು ಅಥವಾ ಯಾವುದಾದರೊಂದು ಉತ್ತಮ ಕೆಲಸಕ್ಕಾಗಿ ಪ್ರಯಾಣ ಮಾಡಲು ಇದು ಶುಭ ಸಂದರ್ಭ ಎಂದು ಪರಿಗಣಿಸಲಾಗುತ್ತದೆ. ನೀವು ಯಾವುದೇ ದೊಡ್ಡ ಕೆಲಸವನ್ನು ಮಾಡಲು ಯೋಜಿಸುತ್ತಿದ್ದರೆ ಜ್ಯೋತಿಷಿಗಳ ಪ್ರಕಾರ ಸರ್ವಾರ್ಥ ಸಿದ್ಧಿ ಯೋಗದ ಸಮಯದಲ್ಲಿ ಆ ಕೆಲಸವನ್ನು ಮಾಡಿದರೆ ಅದು ಲಾಭವನ್ನು ನೀಡಲಿದೆ. ಅಡೆತಡೆಗಳು ಇರದೆ ಆ ಕೆಲಸ ಯಶಸ್ವಿಯಾಗುತ್ತದೆ. ಹಾಗಾದರೆ ಸರ್ವಾರ್ಥ ಸಿದ್ಧಿ ಯೋಗ ಎಂದರೇನು?

ಸರ್ವಾರ್ಥ ಸಿದ್ಧಿ ಯೋಗ ಎಂದರೇನು?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸರ್ವಾರ್ಥ ಸಿದ್ಧಿ ಯೋಗ ಅತ್ಯಂತ ಮಂಗಳಕರ ಯೋಗವಾಗಿದೆ. 'ಸರ್ವಾರ್ಥ ಸಿದ್ಧಿ' ಎಂಬ ಹೆಸರಿನಿಂದಲೇ ಈ ಯೋಗದ ಮಹತ್ವ ಸ್ಪಷ್ಟವಾಗುತ್ತದೆ. ಸರ್ವಾರ್ಥ ಸಿದ್ಧಿ ಯೋಗದ ಶುಭ ಸಮಯದಲ್ಲಿ ವ್ಯಕ್ತಿಯು ಯಾವುದೇ ಕೆಲಸವನ್ನು ಪ್ರಾರಂಭಿಸಿದಾಗ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಈ ಯೋಗದ ಪ್ರಭಾವದಿಂದ ಸಂಪತ್ತು, ಕೀರ್ತಿ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ಪಡೆಯುತ್ತಾನೆ ಎಂದು ನಂಬಲಾಗುತ್ತದೆ. ಹಾಗಾದರೆ ಸರ್ವಾರ್ಥ ಸಿದ್ಧ ಯೋಗ ಹೇಗೆ ರೂಪಗೊಳ್ಳುತ್ತದೆ?

Astrology sarvarth siddhi yoga these 6 days in 2025 best to buy car jewelry start a new job

ಸರ್ವಾರ್ಥ ಸಿದ್ಧಿ ಯೋಗ ಹೇಗೆ ರೂಪುಗೊಳ್ಳುತ್ತದೆ?

ಸರ್ವಾರ್ಥ ಸಿದ್ಧಿ ಯೋಗ ಹಲವು ವಿಧಗಳಲ್ಲಿ ರೂಪುಗೊಳ್ಳಬಹುದು. ಆದರೆ ಇದು ಮುಖ್ಯವಾಗಿ ಒಂದು ನಿರ್ದಿಷ್ಟ ತಿಥಿ, ವಾರ ಅಂದರೆ ದಿನ ಮತ್ತು ನಕ್ಷತ್ರದ ಕಾಕತಾಳೀಯವಾದಾಗ ರೂಪುಗೊಳ್ಳುತ್ತದೆ. ಭಾನುವಾರ ಮತ್ತು ಹಸ್ತಾ ನಕ್ಷತ್ರ, ಸೋಮವಾರ ಮತ್ತು ಮೃಗಶಿರ ನಕ್ಷತ್ರ, ಗುರುವಾರ ಮತ್ತು ಪುಷ್ಯ ನಕ್ಷತ್ರ, ಶನಿವಾರ ಮತ್ತು ರೋಹಿಣಿ ನಕ್ಷತ್ರ ಮುಂತಾದ ಈ ಸಂಯೋಜನೆಯಿಂದ ಸರ್ವಾರ್ಥ ಸಿದ್ಧಿ ಯೋಗ ರೂಪಗೊಳ್ಳುತ್ತದೆ.

ಜನವರಿ 2025ರಲ್ಲಿ ಸರ್ವಾರ್ಥ ಸಿದ್ಧಿ ಯೋಗದ ದಿನಾಂಕ

2025ರಲ್ಲಿ ಸರ್ವಾರ್ಥ ಸಿದ್ಧಿ ಯೋಗದ ದಿನಾಂಕಗಳು ಮತ್ತು ಮಂಗಳಕರ ಸಮಯ

*ಜನವರಿ 5, 2025 ಭಾನುವಾರ ರಾತ್ರಿ 08:18 ರಿಂದ ಜನವರಿ 06 ಬೆಳಗ್ಗೆ 07:15ರವರ

*ಜನವರಿ 7, 2025 ಮಂಗಳವಾರ ಸಂಜೆ 05:50 ರಿಂದ ಜನವರಿ 08 ಬೆಳಗ್ಗೆ 07:15 ರವರೆಗೆ

* ಜನವರಿ 11, 2025 ಶನಿವಾರ ಬೆಳಗ್ಗೆ 07:15 ರಿಂದ ಮಧ್ಯಾಹ್ನ 12:29ರವರೆಗೆ

*ಜನವರಿ 19, 2025 ಭಾನುವಾರ ಬೆಳಗ್ಗೆ 07:14 ರಿಂದ ಜನವರಿ 20 ಬೆಳಗ್ಗೆ 07:14 ರವರೆಗೆ

*ಜನವರಿ 24, 2025 ಶುಕ್ರವಾರ ಬೆಳಗ್ಗೆ 05:08 ರಿಂದ ಜನವರಿ 25 ಬೆಳಗ್ಗೆ 07:07 ರವರೆಗೆ

*ಜನವರಿ 26, 2025 ಭಾನುವಾರ ಬೆಳಗ್ಗೆ 08:26 ರಿಂದ ಜನವರಿ 27 ಬೆಳಗ್ಗೆ 07:12ರವರೆಗೆ

Astrology sarvarth siddhi yoga these 6 days in 2025 best to buy car jewelry start a new job

ಸರ್ವಾರ್ಥ ಸಿದ್ಧಿ ಯೋಗದಲ್ಲಿ ಈ ಕೆಲಸ ಮಾಡಿ:-

*ಹೊಸ ಕೆಲಸವನ್ನು ಪ್ರಾರಂಭಿಸುವುದು: ಹೊಸ ವ್ಯವಹಾರವನ್ನು ಪ್ರಾರಂಭಿಸುವುದು, ಉದ್ಯೋಗಕ್ಕೆ ಸೇರುವುದು ಅಥವಾ ಹೊಸ ಯೋಜನೆಯನ್ನು ಪ್ರಾರಂಭಿಸುವುದು ಈ ಯೋಗದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

*ಆಸ್ತಿ ವಹಿವಾಟು: ಭೂಮಿ, ಕಾರು, ಆಭರಣಗಳಂತಹ ಆಸ್ತಿಯನ್ನು ಖರೀದಿಸುವುದು, ಮಾರಾಟ ಮಾಡುವುದು ಅಥವಾ ಯಾವುದೇ ರೀತಿಯ ಹೂಡಿಕೆ ಮಾಡುವುದು ಕೂಡ ಈ ಯೋಗದಲ್ಲಿ ಮಂಗಳಕರವಾಗಿದೆ.

*ಮದುವೆ ಅಥವಾ ನಿಶ್ಚಿತಾರ್ಥ: ಈ ಯೋಗದಲ್ಲಿ ಮದುವೆ ಅಥವಾ ನಿಶ್ಚಿತಾರ್ಥದಂತಹ ಶುಭ ಕಾರ್ಯಗಳನ್ನು ಮಾಡುವುದರಿಂದ ವೈವಾಹಿಕ ಜೀವನ ಸಂತೋಷವಾಗುತ್ತದೆ.

*ಪ್ರಯಾಣ: ಈ ಯೋಗದಲ್ಲಿ ಪ್ರಯಾಣ ಮಂಗಳಕರವಾಗಿದೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಮಾಡಬಹುದು.

*ಶಿಕ್ಷಣ ಮತ್ತು ಜ್ಞಾನ ಸಂಪಾದನೆ: ಈ ಯೋಗದಲ್ಲಿ ಹೊಸ ಶಿಕ್ಷಣವನ್ನು ಪಡೆಯುವುದು, ಹೊಸ ಕೌಶಲ್ಯವನ್ನು ಕಲಿಯುವುದು ಅಥವಾ ಜ್ಞಾನವನ್ನು ಹೆಚ್ಚಿಸುವುದು ಸಹ ಮಂಗಳಕರವಾಗಿದೆ.

*ದಾನ: ಈ ಯೋಗದಲ್ಲಿ ದಾನವನ್ನು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಅನ್ನದಾನ, ವಸ್ತ್ರ, ಧನದಾನ ಮಾಡುವುದು ಶುಭಕರವಾಗಿದೆ.

*ಆರಾಧನೆ: ಈ ಯೋಗದಲ್ಲಿ ದೇವಾನುದೇವತೆಗಳ ಆರಾಧನೆ ಮತ್ತು ಮಂತ್ರಗಳನ್ನು ಪಠಿಸುವುದರಿಂದ ತುಂಬಾ ಪ್ರಯೋಜನವಾಗುತ್ತದೆ.

*ಹೊಸ ಬಟ್ಟೆ ಖರೀದಿ: ಈ ಯೋಗದಲ್ಲಿ ಹೊಸ ಬಟ್ಟೆ ಕೊಳ್ಳುವುದನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

*ಗೃಹಪ್ರವೇಶ: ಈ ಯೋಗದಲ್ಲಿ ಹೊಸ ಗೃಹ ಪ್ರವೇಶವೂ ಶುಭಕರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+