Get Updates
Get notified of breaking news, exclusive insights, and must-see stories!

Rahu Transit 2024: ಕುಂಭ ರಾಶಿಯಲ್ಲಿ ರಾಹು ಸಂಕ್ರಮಣ: ಬದಲಾಗುತ್ತೆ ಈ 4 ರಾಶಿಗಳ ಜೀವನ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವಿಗೆ ಮಹತ್ವದ ಸ್ಥಾನವಿದೆ. ಜ್ಯೋತಿಷ್ಯದಲ್ಲಿ ರಾಹುವನ್ನು ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಒಬ್ಬ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲ ನೀಡುತ್ತದೆ. ಅಂದಹಾಗೆ ರಾಹು ಸಂಚಾರದ ವೇಳೆ ಎಲ್ಲಾ ಗ್ರಹಗಳಂತೆ ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತದೆ. ರಾಹುವಿನ ಸಂಚಾರ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

ಈ ಗ್ರಹ 18ನೇ ಮೇ 2025 ರಂದು ಕುಂಭ ರಾಶಿಗೆ ಚಲಿಸುತ್ತದೆ. 05 ಡಿಸೆಂಬರ್ 2026 ರವರೆಗೆ ಅದೇ ಸ್ಥಾನದಲ್ಲಿರುತ್ತದೆ. ಸದ್ಯ ರಾಹು ಮೀನ ರಾಶಿಯಲ್ಲಿದೆ. ಈ ಬಾರಿ ಕುಂಭದಲ್ಲಿ ರಾಹುವಿನ ಸಂಚಾರ ಕೆಲವು ರಾಶಿಗಳಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಈ ರಾಶಿಗಳು ತಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳುತ್ತವೆ. ಅವರು ಯಶಸ್ಸಿನ ಉತ್ತುಂಗವನ್ನು ತಲುಪಬಹುದು ಮತ್ತು ಕುಟುಂಬ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು. ಹಾಗಾದರೆ ಆ ಅದೃಷ್ಟದ ರಾಶಿಯವರು ಯಾರೆಂದು ಈಗ ತಿಳಿಯೋಣ.

astrology rahu transit in aquarius brings golden period for these zodiac signs in kannada

ಮೇಷ ರಾಶಿ (Aries)

ಮೇಷ ರಾಶಿಯ ಹನ್ನೊಂದನೇ ಮನೆಯಲ್ಲಿ ರಾಹು ಸಂಚಾರ ಮಾಡುತ್ತದೆ. ಈ ಅವಧಿಯಲ್ಲಿ ಮೇಷ ರಾಶಿ ಅವರು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಅವರ ಆದಾಯ ಅನಿರೀಕ್ಷಿತ ರೀತಿಯಲ್ಲಿ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವಿರಿ. ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ಬೆಂಬಲವನ್ನು ನಿರೀಕ್ಷಿಸಬಹುದು.

ಮೇಷ ರಾಶಿಯ ಸ್ಥಳೀಯರು ಮಾಡಿದ ಹೂಡಿಕೆಗಳು ಈಗ ದುಪ್ಪಟ್ಟು ಲಾಭವನ್ನು ನೀಡುತ್ತವೆ. ಈ ಅವಧಿಯಲ್ಲಿ ಮೇಷ ರಾಶಿ ಅವರು ದೊಡ್ಡ ಲಾಭವನ್ನು ನಿರೀಕ್ಷಿಸಬಹುದು. ಮೇಷ ರಾಶಿಯವರು ಹೊಸ ಆದಾಯದ ಮೂಲಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಆದಾಯದಲ್ಲಿ ಭಾರಿ ಹೆಚ್ಚಳವನ್ನು ಕಾಣುತ್ತಾರೆ.

astrology rahu transit in aquarius brings golden period for these zodiac signs in kannada

ವೃಷಭ ರಾಶಿ (Taurus)

ರಾಹುವಿನ ಈ ಸಾಗಣೆಯು ವೃಷಭ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ರಾಹುವಿನ ಸಂಚಾರ ತರುತ್ತದೆ. ಹೀಗಾಗಿ ವೃಷಭ ರಾಶಿ ಅವರು ತಮ್ಮ ಜೀವನದ ವಿವಿಧ ಅಂಶಗಳಲ್ಲಿ ಯಶಸ್ವಿಯಾಗುತ್ತಾರೆ. ಈ ಸಮಯ ವೃಷಭ ರಾಶಿಯವರಿಗೆ ತುಂಬಾ ಅದೃಷ್ಟವಾಗಿರುತ್ತದೆ. ಉದ್ಯೋಗಸ್ಥರು ತಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ನಿರೀಕ್ಷಿಸಬಹುದು.

ವೃಷಭ ರಾಶಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಸಂತೋಷವಾಗಿರುತ್ತಾರೆ. ಅವರ ಆರ್ಥಿಕ ಪರಿಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ವೃಷಭ ರಾಶಿಯವರು ತಮ್ಮ ಕಲ್ಪನೆಗೂ ಮೀರಿದ ಹಣವನ್ನು ಪಡೆಯುತ್ತಾರೆ.

astrology rahu transit in aquarius brings golden period for these zodiac signs in kannada

ಸಿಂಹ ರಾಶಿ (Leo)

ರಾಹುವಿನ ಸಂಚಾರ ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಅವರ ಜೀವನ ಸಂತೋಷದಿಂದ ಕೂಡಿರುತ್ತದೆ. ಸಿಂಹ ರಾಶಿ ಅವರು ವೃತ್ತಿ ಕ್ಷೇತ್ರದಲ್ಲೂ ಲಾಭವನ್ನು ಪಡೆಯುತ್ತಾರೆ. ರಾಹು ಸಂಚಾರ ಸಿಂಹ ರಾಶಿಯವರಿಗೆ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಪದಾಧಿಕಾರಿಗಳಿಗೆ ಬಡ್ತಿ ಸಹ ಲಭ್ಯವಾಗುತ್ತದೆ. ಈ ಅವಧಿಯಲ್ಲಿ ಅವರ ಆದಾಯವೂ ಹೆಚ್ಚಾಗುತ್ತದೆ.

ಸಿಂಹ ರಾಶಿಯವರ ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ವೈವಾಹಿಕ ಜೀವನದಲ್ಲಿಯೂ ಶಾಂತಿ ಮತ್ತು ಸಂತೋಷ ಇರುತ್ತದೆ. ಗಂಡ ಹೆಂಡತಿಯ ನಡುವೆ ತಿಳುವಳಿಕೆ ಹೆಚ್ಚಾಗುತ್ತದೆ. ಕಾನೂನು ಪ್ರಕರಣ ಬಾಕಿ ಉಳಿದಿದ್ದರೆ, ಫಲಿತಾಂಶವು ನಿಮ್ಮ ಪರವಾಗಿರಬಹುದು.

astrology rahu transit in aquarius brings golden period for these zodiac signs in kannada

ಧನು ರಾಶಿ (Sagittarius)

ಧನು ರಾಶಿಯ ಮೂರನೇ ಮನೆಯಲ್ಲಿ ರಾಹು ಸಂಚಾರ ಮಾಡುತ್ತದೆ. ಈ ಅವಧಿಯಲ್ಲಿ ಧನು ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಮೇಲಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಆತ್ಮವಿಶ್ವಾಸದ ಆಧಾರದ ಮೇಲೆ ಬಹಳಷ್ಟು ವಿಷಯಗಳನ್ನು ಸಾಧಿಸಬಹುದು.

ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ. ಧನು ರಾಶಿ ಅವರು ತಮ್ಮ ವೃತ್ತಿಜೀವನದಲ್ಲಿ ಕೆಲವು ದೊಡ್ಡ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಆರ್ಥಿಕ ಪ್ರಯೋಜನಗಳನ್ನು ನಿರೀಕ್ಷಿಸಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+