Rahu Ketu Transit 2025: ರಾಹು-ಕೇತು ಸಂಕ್ರಮಣ- ಈ ರಾಶಿಯವರಿಗೆ ಸಂತಸದ ಸುದ್ದಿ

ಮುಂದಿನ ವರ್ಷ ಅಂದರೆ 2025ರಲ್ಲಿ ರಾಹು-ಕೇತು ಎರಡೂ ಗ್ರಹಗಳು ರಾಶಿಯನ್ನು ಬದಲಾಯಿಸಲಿವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಎರಡೂ ಗ್ರಹಗಳನ್ನು ಅಶುಭ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಅಂದರೆ ಇವು ಕೆಟ್ಟ ಕಾರ್ಯಗಳಿಗೆ ತಕ್ಷಣ ಪ್ರತಿಫಲ ನೀಡುವ ಗ್ರಹಗಳು. ಹೀಗಾಗಿ ತಪ್ಪು ಮಾಡಲು ಜನ ಹೆದರುತ್ತಾರೆ. ಒಮ್ಮೆ ರಾಹು ಕೇತುವಿನ ಕೆಟ್ಟ ದೃಷ್ಟಿಗೆ ಗುರಿಯಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅಂದಹಾಗೆ ಜಾತಕದಲ್ಲಿ ರಾಹು ಕೇತುವಿನ ಸ್ಥಾನ ಉತ್ತಮವಾಗಿದ್ದರೆ ಅಂತಹ ರಾಶಿಯವರ ಜೀವನ ಸುಖಕರವಾಗಿರುತ್ತದೆ.

2025ರಲ್ಲಿ ನೆರಳು ಗ್ರಹಗಳಾದ ರಾಹು ಮತ್ತು ಕೇತು ರಾಶಿಗಳನ್ನು ಬದಲಾಗುತ್ತವೆ. ರಾಹು ಮೀನ ರಾಶಿಯಿಂದ ಕುಂಭ ರಾಶಿಗೆ ಸಂಚಾರ ಮಾಡಿದರೆ, ಕೇತುವು ಕನ್ಯಾರಾಶಿಯಿಂದ ಸಿಂಹರಾಶಿಗೆ ತೆರಳುತ್ತದೆ. ಈ ಎರಡು ಮುಖ್ಯ ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಚಕ್ರದ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ, ವಿಶೇಷವಾಗಿ 3 ರಾಶಿಯ ಜನರು ಈ ಗ್ರಹಗಳ ಚಲನೆಯಿಂದ ಜೀವನದಲ್ಲಿ ಉನ್ನತಿಯನ್ನು ಪಡೆಯಲಿದ್ದಾರೆ. ಹಾಗಾದರೆ ಆ ರಾಶಿಯವರು ಯಾರೆಂದು ಈಗ ತಿಳಿಯೋಣ.

Astrology rahu ketu transit will take place in 2025 these zodiac signs will get good news

ಮಿಥುನ ರಾಶಿ

2025ರಲ್ಲಿ ರಾಹು-ಕೇತು ಸಂಕ್ರಮಣ ಮಿಥುನ ರಾಶಿಯವರಿಗೆ ಮಂಗಳಕರವಾಗಿದೆ. ಮಿಥುನ ರಾಶಿ ಅವರಿಗೆ ಅನೇಕ ಪ್ರಯೋಜನಗಳನ್ನು ಅನುಭವಿಸುತ್ತಿದ್ದರೂ, ಅನೇಕ ಆರ್ಥಿಕ ಸಮಸ್ಯೆ ಎದುರಾಗಬಹುದು. ಆದ್ದರಿಂದ ಹಣವನ್ನು ಸರಿಯಾಗಿ ಬಳಸುವಲ್ಲಿ ಜಾಗರೂಕರಾಗಿರಿ. ಈ ಅವಧಿಯಲ್ಲಿ ಮಿಥುನ ರಾಶಿಯವರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ ಉತ್ತಮ ಆದಾಯ ಸಿಗುತ್ತದೆ. ಆದ್ದರಿಂದ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ

ಮುಂದಿನ ವರ್ಷ ಫೆಬ್ರವರಿಯಿಂದ ಮಿಥುನ ರಾಶಿಯವರಿಗೆ ಅನೇಕ ಒಳ್ಳೆಯ ಸುದ್ದಿಗಳು ಬರುವ ಸಾಧ್ಯತೆಯಿದೆ. ಮಿಥುನ ರಾಶಿ ಅವರು ಕೆಲಸದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸುತ್ತಾರೆ. ಒಂಟಿಯಾಗಿರುವವರಿಗೆ ಮದುವೆಯಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತೆಯೇ ಅವರು ತಮ್ಮ ಮನಸ್ಸಿನಲ್ಲಿ ಅಂದುಕೊಂಡ ಅನೇಕ ವಿಷಯಗಳನ್ನು ಸಾಧಿಸಬಹುದು. ಬಯಸಿದ ಗಮ್ಯಸ್ಥಾನಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ.

Astrology rahu ketu transit will take place in 2025 these zodiac signs will get good news

ತುಲಾ ರಾಶಿ

ತುಲಾ ರಾಶಿಯವರಿಗೆ ರಾಹು-ಕೇತು ಸಂಚಾರ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ. ಬಹುನಿರೀಕ್ಷಿತ ಉದ್ಯೋಗ ಬದಲಾವಣೆ ಆಗುವ ಸಾಧ್ಯತೆ ಇದೆ. ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೂಡಿಕೆಗಳನ್ನು ಮಾಡುವುದು ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ನಿಮ್ಮ ಯಶಸ್ಸಿಗೆ ಅಡ್ಡಿಯಾಗಿದ್ದ ವಿಷಯಗಳು ದೂರವಾಗುತ್ತವೆ.

ತುಲಾ ರಾಶಿ ಅವರು ಅನೇಕ ಕ್ಷೇತ್ರಗಳಿಂದ ಅನಿರೀಕ್ಷಿತವಾಗಿ ಗಳಿಸಬಹುದು. ತುಲಾ ರಾಶಿಯವರು ಈ ಅವಧಿಯಲ್ಲಿ ಹಲವಾರು ರೀತಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಅನುಭವಿಸಬಹುದು. ಅದೇ ರೀತಿ ದಾಂಪತ್ಯದಲ್ಲಿ ಸುಖ ಶಾಂತಿ ದೊರೆಯುತ್ತದೆ. ಕೌಟುಂಬಿಕ ಕಲಹಗಳು ಕಡಿಮೆಯಾಗುತ್ತವೆ ಮತ್ತು ಶಾಂತಿ ಮರಳುತ್ತದೆ.

Astrology rahu ketu transit will take place in 2025 these zodiac signs will get good news

ವೃಶ್ಚಿಕ ರಾಶಿ

ರಾಹು-ಕೇತು ಸಂಚಾರ ವೃಶ್ಚಿಕ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ನೀಡಲಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಬಹುದು. ವಿದೇಶದಲ್ಲಿ ಓದಲು ಅಥವಾ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಪೋಷಕರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕುಟುಂಬ ನಿಮ್ಮ ಕೆಲಸಗಳಿಗೆ ಪ್ರಶಂಸಿಸುತ್ತದೆ.

ನೀವು ಬಹಳ ದಿನಗಳಿಂದ ಮಾಡಲು ಕಾಯುತ್ತಿದ್ದ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇದರಿಂದ ನಿಮ್ಮ ಪ್ರತಿಭೆಯನ್ನು ಎಲ್ಲರೂ ಗುರುತಿಸುವರು. ನಿಮ್ಮ ಬುದ್ಧಿವಂತಿಕೆಯು ನಿಮ್ಮನ್ನು ವ್ಯವಹಾರದಲ್ಲಿ ಯಶಸ್ವಿಯಾಗಿಸುತ್ತದೆ. ನೀವು ಆರ್ಥಿಕವಾಗಿ ಉತ್ತಮ ಲಾಭವನ್ನು ಗಳಿಸಬಹುದು. ನಿಮ್ಮ ವ್ಯಾಪಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+