Rahu Gochara 2025: ಮುಂದಿನ ವರ್ಷ ಕುಂಭ ರಾಶಿಯಲ್ಲಿ ರಾಹು ಸಂಚಾರ- ಈ ರಾಶಿಗೆ ಒಲಿಯಲಿದ್ದಾಳೆ ಧನಲಕ್ಷ್ಮೀ!
ರಾಹು-ಕೇತುಗಳು ನೆರಳು ಗ್ರಹಗಳು. ಅವುಗಳನ್ನು ಭ್ರಮೆಯ ಗ್ರಹಗಳೆಂದು ಕರೆಯಲಾಗುತ್ತದೆ. ಈ ಗ್ರಹಗಳು ಜಾತಕದಲ್ಲಿ ಪ್ರಬಲವಾಗಿದ್ದಾಗ ಹಾಗೂ ದುರ್ಬಲವಾಗಿದ್ದಾಗ ಕ್ರಮವಾಗಿ ಶುಭ ಮತ್ತು ಅಶುಭ ಪರಿಣಾಮಗಳನ್ನು ನೀಡುತ್ತವೆ. ಹೀಗಾಗಿ ಇವುಗಳ ಸಂಚಾರವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಅಂದಹಾಗೆ ರಾಹು 2025ರಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಕೆಲವು ರಾಶಿಗಳು ರಾಹುವಿನ ರಾಶಿಯ ಬದಲಾವಣೆಯಿಂದ ನೇರ ಲಾಭವನ್ನು ಪಡೆಯುತ್ತಿವೆ.
ಅಲ್ಲದೆ ರಾಹುವನ್ನು ಸದಾ ಕೆಟ್ಟದ್ದನ್ನೇ ಉಂಟು ಮಾಡುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಆದರೆ ಎಲ್ಲಾ ಸಮಯದಲ್ಲೂ ರಾಹು ಅಶುಭ ಫಲಗಳನ್ನು ನೀಡುವುದಿಲ್ಲ. ಬದಲಿಗೆ ಶುಭ ಫಲಗಳನ್ನೂ ರಾಹು ಕೊಡುತ್ತಾನೆ. ವಿಶೇಷವಾಗಿ ಮುಂದಿನ ವರ್ಷ ಕುಂಭ ರಾಶಿಗೆ ಸಂಚಾರ ಮಾಡುವ ರಾಹು ಕೆಲ ರಾಶಿಗಳಿಗೆ ಉತ್ತಮ ಸಮಯವನ್ನು ಒದಗಿಸಲಿದ್ದಾನೆ. ಅಂದಹಾಗೆ ರಾಹು ಮೇ 18, 2025 ರಂದು ಸಂಜೆ 5:08ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಡಿಸೆಂಬರ್ 5, 2026 ರವರೆಗೆ ಕುಂಭ ರಾಶಿಯಲ್ಲಿ ರಾಹು ಇರಲಿದ್ದಾನೆ.
ರಾಹುವಿನ ರಾಶಿ ಬದಲಾವಣೆಯಿಂದ ಯಾರಿಗೆ ಲಾಭ?

ಮೇಷ ರಾಶಿ
ರಾಹುವಿನ ಸಂಕ್ರಮಣ ಮೇಷ ರಾಶಿಯ 11 ನೇ ಮನೆಯಲ್ಲಿ ನಡೆಯುತ್ತದೆ. ಈ ಮನೆಯನ್ನು ಲಾಭದ ಮನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರು ಅಪಾರ ಲಾಭದ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ನಿಮ್ಮ ವ್ಯವಹಾರದಲ್ಲಿಯೂ ನೀವು ಬೆಳವಣಿಗೆಯನ್ನು ಕಾಣುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ವೃತ್ತಿಜೀವನದ ವಿಷಯದಲ್ಲಿ ಹೊಸ ಅವಕಾಶಗಳನ್ನು ಪಡೆಯುವಿರಿ. ಒಟ್ಟಾರೆಯಾಗಿ ಮೇಷ ರಾಶಿಯವರ ಲಾಭದ ಮನೆಯಲ್ಲಿ ರಾಹು ಕುಂಭ ರಾಶಿಯನ್ನು ಪ್ರವೆಶ ಮಾಡುವುದರಿಂದ ಲಾಭವನ್ನು ಮಾತ್ರ ಕೊಡುತ್ತಾನೆ.

ಧನು ರಾಶಿ
ರಾಹುವಿನ ಸಂಚಾರ ಧನು ರಾಶಿಯ ಮೂರನೇ ಮನೆಯಲ್ಲಿ ನಡೆಯಲಿದೆ. ಧನು ರಾಶಿಯ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಈ ರಾಶಿಯ ಜನರು ದೀರ್ಘಕಾಲದವರೆಗೆ ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಈಗ ದೂರವಾಗುತ್ತದೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಅವರ ಆರ್ಥಿಕ ಅಂಶ ಬಲವಾಗಿರುತ್ತದೆ ಮತ್ತು ಈ ಜನರು ಧಾರ್ಮಿಕ ಪ್ರಯಾಣವನ್ನು ಸಹ ಮಾಡಬಹುದು.

ಕುಂಭ ರಾಶಿ
ರಾಹು ಕುಂಭರಾಶಿಯ ಲಗ್ನ ಮನೆಯಲ್ಲಿ ಸಾಗಲಿದ್ದಾನೆ. ಇದರಿಂದಾಗಿ ಕುಮಭ ರಾಶಿ ಅವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ವೃತ್ತಿಜೀವನ ಪ್ರಗತಿಯಲ್ಲಿದೆ. ಕುಮಭ ರಾಶಿಯ ಜನರು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ.
ಅಲ್ಲದೆ ಕುಂಭ ರಾಶಿಯವರು ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಆದಾಯದ ಮೂಲಗಳು ಸಹ ತೆರೆಯಬಹುದು. ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ, ಅದು ಸಹ ದೂರವಾಗುತ್ತದೆ. ಅನೇಕ ಸಮಸ್ಯೆಗಳು ರಾಹು ಕುಂಭ ರಾಶಿಗೆ ಪ್ರವೆಶ ಮಾಡುವ ಮೂಲಕ ದೂರ ಮಾಡುತ್ತಾನೆ.












Click it and Unblock the Notifications