• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ, ಯಾರಿಗೆ ಗೆಲುವು; ಜ್ಯೋತಿಷ್ಯ ಭವಿಷ್ಯ

|
Google Oneindia Kannada News

ಭಾರೀ ಕುತೂಹಲಕ್ಕೆ ಕಾರಣವಾಗಿರುವ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಮೊದಲ ಹಂತದ ಚುನಾವಣೆ, ಡಿಸೆಂಬರ್ ಒಂದರಂದು ಮುಕ್ತಾಯಗೊಂಡಿದೆ. ಎರಡನೇ ಮತ್ತು ಕೊನೆಯ ಹಂತದ ಚುನಾವಣೆ ಡಿ. ಐದರಂದು ನಡೆಯಲಿದೆ.

ಅಂದೇ ಮತಗಟ್ಟೆ ಸಮೀಕ್ಷೆ ಕೂಡಾ ಹೊರಬೀಳಲಿದೆ. ಚುನಾವಣಾ ಫಲಿತಾಂಶ ಪ್ರಕ್ರಿಯೆ ಡಿಸೆಂಬರ್ ಎಂಟರಂದು ನಡೆಯಲಿದೆ. 2002ರಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಒಂದು ವೇಳೆ ಈ ಚುನಾವಣೆಯನ್ನೂ ಗೆದ್ದರೆ, ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ದಾಖಲೆಯನ್ನು ಬಿಜೆಪಿ ಸರಿಗಟ್ಟಲಿದೆ.

Gujarat Assembly Election 2022: 2ನೇ ಹಂತದ ಮತದಾನ- ದಿನಾಂಕ, ವೇಳೆ, ಕ್ಷೇತ್ರಗಳ ಪಟ್ಟಿGujarat Assembly Election 2022: 2ನೇ ಹಂತದ ಮತದಾನ- ದಿನಾಂಕ, ವೇಳೆ, ಕ್ಷೇತ್ರಗಳ ಪಟ್ಟಿ

ಗುಜರಾತ್ ಚುನಾವಣೆಯಲ್ಲಿ ಯಾರು ಗೆಲುವನ್ನು ಸಾಧಿಸಲಿದ್ದಾರೆ ಎನ್ನುವ ವಿಚಾರದಲ್ಲಿ ಖ್ಯಾತ ಜ್ಯೋತಿಷಿ ಆಚಾರ್ಯ ಸಲೀಲ್ ಅವರು ಭವಿಷ್ಯವನ್ನು ನುಡಿದಿದ್ದಾರೆ. ಚುನಾವಣೆ ನಡೆಯುವ ದಿನಾಂಕದ ಗ್ರಹಗತಿಯನ್ನು ಆಧರಿಸಿ ಸಲೀಲ್ ಅವರು ತಮ್ಮ ಭವಿಷ್ಯವನ್ನು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ಸಾಧನೆ ಯಾವ ರೀತಿ ಇರಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿರುವ ಇನ್ನೊಂದು ಅಂಶವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ಗುಜರಾತಿಗೆ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಯಾಗಿದೆ. ಆಚಾರ್ಯ ಸಲೀಲ್ ಅವರ ನುಡಿದ ಭವಿಷ್ಯದ ಪ್ರಮುಖಾಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

 ಚಂದ್ರ ರಾಶಿಯು ನಾಲ್ಕನೇ ಸ್ಥಾನದಲ್ಲಿದ್ದಾನೆ, ಇದು ಅವನದೇ ಸ್ಥಾನ

ಚಂದ್ರ ರಾಶಿಯು ನಾಲ್ಕನೇ ಸ್ಥಾನದಲ್ಲಿದ್ದಾನೆ, ಇದು ಅವನದೇ ಸ್ಥಾನ

ಮೊದಲ ಹಂತದ ಚುನಾವಣೆಯ ದಿನವಾದ ಡಿಸೆಂಬರ್ ಒಂದರಂದು ವೃಶ್ಚಿಕ ಲಗ್ನವಿದೆ. ಹನ್ನೆರಡನೇ ಡಿಗ್ರಿಯಲ್ಲಿ ಲಗ್ನವಿರುವುದರಿಂದ ಅದು ಪ್ರಬಲವಾದ ಸ್ಥಾನದಲ್ಲಿದೆ. ಲಗ್ನದಲ್ಲಿ ಸೂರ್ಯ, ಶುಕ್ರ ಮತ್ತು ಬುಧರಾಶಿ ಇರುವುದರಿಂದ, ಶುಕ್ರ ಸ್ವಲ್ಪ ತೊಂದರೆಯನ್ನು ಮಾಡುವ ಸಾಧ್ಯತೆಯಿದೆ. ಆದರೆ, ಇತರ ಎರಡು ರಾಶಿಯ ಸ್ಥಾನವನ್ನು ಆಧರಿಸಿ ಹೇಳುವುದಾದರೆ, ಮೊದಲ ಹಂತದ ಚುನಾವಣೆಯು ಬಿಜೆಪಿಗೆ ಅನುಕೂಲವಾಗಲಿದೆ. ಚಂದ್ರ ರಾಶಿಯು ನಾಲ್ಕನೇ ಸ್ಥಾನದಲ್ಲಿದ್ದಾನೆ, ಇದು ಅವನದೇ ಸ್ಥಾನವಾಗಿದೆ.

 ಮೋದಿ ಮತ್ತು ಅಮಿತ್ ಶಾ ಅವರ ಚರಿಸ್ಮಾ ವರ್ಕೌಟ್ ಆಗಲಿದೆ

ಮೋದಿ ಮತ್ತು ಅಮಿತ್ ಶಾ ಅವರ ಚರಿಸ್ಮಾ ವರ್ಕೌಟ್ ಆಗಲಿದೆ

ಏಳನೇ ಸ್ಥಾನದಲ್ಲಿ ಮಂಗಳ ಇರುವುದರಿಂದ ಇದು ಮೂರನೇ ಸ್ಥಾನದಲ್ಲಿರುವ ಶನಿಯ ಪ್ರಬಾವ ಹೆಚ್ಚಾಗಿರುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ. ಶನಿ ಮತ್ತು ಗುರುವಿರುವ ಸ್ಥಾನವನ್ನು ಅವಲೋಕಿಸುವುದಾದರೆ, ಮೋದಿ ಮತ್ತು ಅಮಿತ್ ಶಾ ಅವರ ಚರಿಸ್ಮಾ ವರ್ಕೌಟ್ ಆಗಲಿದೆ. ಮೊದಲ ಹಂತದ ಚುನಾವಣೆಯ ದಿನಾಂಕದ ರಾಶಿಫಲವನ್ನು ಆಧರಿಸಿ ಹೇಳುವುದಾದರೆ ಬಿಜೆಪಿಯು ಶಕ್ತಿಯುತವಾಗಿ ಹೊರಹೊಮ್ಮಲಿದೆ. ಎರಡನೇ ಹಂತದ ಚುನಾವಣೆಯ ದಿನ ವೃಶ್ಚಿಕ ಲಗ್ನದ ಸ್ಥಾನದಲ್ಲಿ ಶುಕ್ರ ಕುಳಿತಿರುತ್ತಾನೆ.

 ರಾಜಕೀಯ ಪಕ್ಷಗಳ ನಡುವೆ ಪೈಪೋಟಿ

ರಾಜಕೀಯ ಪಕ್ಷಗಳ ನಡುವೆ ಪೈಪೋಟಿ

ಕೇತು ಹನ್ನೆರಡನೇ ಮನೆಯಲ್ಲಿ ಇರುವುದರಿಂದ, ಐದನೇ ಮನೆಯಲ್ಲಿ ಮಂಗಳ ರಾಶಿಯು ವಕ್ರ ಸ್ಥಾನದಲ್ಲಿದ್ದಾನೆ. ಗುರುವು ಪ್ರಬಲ ಸ್ಥಾನದಲ್ಲಿರುವುದರಿಂದ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಇರಲಿದೆ. ಮೋದಿಯವರ ತವರು ರಾಜ್ಯವಾಗಿರುವುದರಿಂದ ಅವರ ಜಾತಕವನ್ನು ಆಧರಿಸಿ ಹೇಳುವುದಾದರೆ, ಇವರ ನಾಯಕತ್ವಕ್ಕೆ ಜನಬೆಂಬಲ ಸಿಗುವ ಸಾಧ್ಯತೆ ಎರಡನೇ ಹಂತದಲ್ಲೂ ಇರುತ್ತದೆ, ಆದರೆ ಮೊದಲ ಹಂತದ ಚುನಾವಣೆಯ ರೀತಿಯಲ್ಲಿ ಅಲ್ಲ ಎಂದು ಆಚಾರ್ಯ ಸಮೀರ್ ಜ್ಯೋತಿಷ್ಯ ಭವಿಷ್ಯ ನುಡಿದಿದ್ದಾರೆ.

 ಬಿಜೆಪಿಗೆ ಗುಜರಾತ್ ನಲ್ಲಿ 100-120, ಕಾಂಗ್ರೆಸ್ಸಿಗೆ 40-45 ಸಿಗುವ ಸಾಧ್ಯತೆ

ಬಿಜೆಪಿಗೆ ಗುಜರಾತ್ ನಲ್ಲಿ 100-120, ಕಾಂಗ್ರೆಸ್ಸಿಗೆ 40-45 ಸಿಗುವ ಸಾಧ್ಯತೆ

ಜನವರಿ 2023ರ ನಂತರ ನಡೆಯುವ ಚುನಾವಣೆಯಲ್ಲಿ ಅಲ್ಲಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜಿಪಿಗೆ ಗೆಲುವು ಸಿಗುವ ಸಾಧ್ಯತೆಯಿದೆ. ಜ್ಯೋತಿಷ್ಯದ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳಿವೆ, ಆದರೆ ಈಗಿನ ಮುಖ್ಯಮಂತ್ರಿಗಳು ಮುಂದುವರಿಯುವ ಸಾಧ್ಯತೆ ಕಮ್ಮಿ. ಬಿಜೆಪಿಗೆ ಗುಜರಾತ್ ನಲ್ಲಿ 100-120, ಕಾಂಗ್ರೆಸ್ಸಿಗೆ 40-45 ಸಿಗುವ ಸಾಧ್ಯತೆಯಿದೆ. ಆಮ್ ಆದ್ಮಿ ಪಕ್ಷದ ಸಾಧನೆ ತೃಪ್ತಿದಾಯಕವಾಗಿರುವುದಿಲ್ಲ.

English summary
Who Will Win: Astrology Prediction On Gujarat Assembly Election 2022. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X