Perfect Couple: ಈ ರಾಶಿಗಳ ಜೋಡಿ ರಾಧಾ-ಕೃಷ್ಣನಂತೆ: ನಿಮ್ಮ ಜೀವನ ಸಂಗಾತಿಯ ರಾಶಿ ಇದೆನಾ?
ರಾಧಾ ಮತ್ತು ಕೃಷ್ಣನ ಪ್ರೀತಿ ಜಗತ್ತಿನಲ್ಲಿ ವಿಶಿಷ್ಟವಾಗಿದೆ. ಇದನ್ನು ಆಧ್ಯಾತ್ಮಿಕತೆಯ ಸುಂದರ ಮತ್ತು ದೈವಿಕ ಸಂಕೇತವೆಂದು ಪರಿಗಣಿಸಲಾಗಿದೆ. ಜಗತ್ತಿನಲ್ಲಿಯೇ ವಿಶಿಷ್ಟವಾದ ರಾಧಾ ಮತ್ತು ಕೃಷ್ಣರ ಪ್ರೇಮ ಸಂಬಂಧವು ಜನರಿಗೆ ಒಂದು ಉದಾಹರಣೆ. ಎಲ್ಲರೂ ಇಂತಹ ಮುದ್ದಾದ ಜೋಡಿಯಂತೆ ತಾವು ಕೂಡ ತಮ್ಮ ಸಂಗಾತಿಯನ್ನು ಪಡೆಯಲು ಬಯಸುತ್ತಾರೆ. ವೈದಿಕ ಜ್ಯೋತಿಷ್ಯದಲ್ಲಿ 12 ರಾಶಿಗಳಲ್ಲಿ ಕೆಲವು ರಾಶಿಯವರನ್ನು ರಾಧಾ-ಕೃಷ್ಣ ಜೋಡಿ ಎಂದು ಕರೆಯಲಾಗುತ್ತದೆ. ಇಂತಹ ಕೆಲವು ರಾಶಿಗಳೊಂದಿಗೆ ಮದುವೆ ಆದರೆ ಏಳು ಜನ್ಮಗಳವರೆಗೆ ಒಟ್ಟಿಗೆ ಇರುತ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
ಹಾಗಾದರೆ ಯಾವ ರಾಶಿಯವರೊಂದಿಗೆ ಮದುವೆಯಾದರೆ ಅದು ರಾಧಾ-ಕೃಷ್ಣ ಜೋಡಿ ಎಂದು ಕರೆಯಲ್ಪಡುತ್ತದೆ. ಈ ಮೂಲಕ ನಿಮ್ಮ ಸಂಗಾತಿಯ ರಾಶಿಯೊಂದಿಗೆ ಹೊಂದಾಣಿಕೆ ಸರಿಯೋ ಇಲ್ಲವೋ ಎಂದು ತಿಳಿಯಬಹುದು. ಹಾಗಾದರೆ ಆ ಅದೃಷ್ಟದ 3 ರಾಶಿಗಳು ಯಾವುವು? ರಾಧಾ-ಕೃಷ್ಣ ಜೋಡಿ ಎಂದು ಕರೆಯಲ್ಪಡುವ ರಾಶಿಗಳ ಬಗ್ಗೆ ತಿಳಿಸೋಣ.

ಮೇಷ ಮತ್ತು ಕುಂಭ
ಮೇಷ ಮತ್ತು ಕುಂಭ ರಾಶಿಯವರಿಬ್ಬರನ್ನೂ ಒಳ್ಳೆಯ ಜೋಡಿ ಎಂದು ಪರಿಗಣಿಸಲಾಗುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದಾರೆ. ಇಬ್ಬರೂ ರೋಮ್ಯಾಂಟಿಕ್ ಆದ ಜೀವನ ಹೊಂದಿರುತ್ತಾರೆ. ಜೀವನದಲ್ಲಿ ಸಾಹಸ ಮಾಡಲು ಇಷ್ಟಪಡುತ್ತಾರೆ. ಒಬ್ಬರಿಗೊಬ್ಬರು ಸಮಯ ಕಳೆಯಲು ಇಷ್ಟಪಡುತ್ತಾರೆ. ಎರಡೂ ರಾಶಿಚಕ್ರದ ಜನರು ಜೀವನದಲ್ಲಿ ಸಂತೋಷಕ್ಕೆ ಕಾರಣವಾಗುವ ಉತ್ತಮ ಸಮನ್ವಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿದಿರುತ್ತಾರೆ.
ಹೀಗಾಗಿ ಈ ರಾಶಿಯವರು ಮದುವೆ ಆದರೆ ಸುಖಕರವಾದ ಜೀವನವನ್ನು ನಡೆಸುತ್ತಾರೆ. ಏಳು ಜನ್ಮಗಳವರೆಗೂ ಒಟ್ಟಿಗೆ ಜೀವನ ಮಾಡುವ ಆಶೀರ್ವಾದವನ್ನು ಪಡೆಯುತ್ತಾರೆ. ಮೇಷ ಹಾಗೂ ಕುಂಭ ರಾಶಿಯವರು ರಾಧಾ-ಕೃಷ್ಣನಂತೆ ಸುಖಕರ ಜೀವನವನ್ನು ನಡೆಸುತ್ತಾರೆ.
ವೃಷಭ ರಾಶಿ ಮತ್ತು ಕನ್ಯಾರಾಶಿ
ವೃಷಭ ಮತ್ತು ಕನ್ಯಾ ರಾಶಿಯವರು ಪರಿಪೂರ್ಣ ದಂಪತಿಗಳು. ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಅವರು ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಪ್ರತಿಯೊಂದು ಸನ್ನಿವೇಶದಲ್ಲೂ ಪರಸ್ಪರ ನಿಲ್ಲಲು ಮುಂಚೂಣಿಯಲ್ಲಿರುತ್ತಾರೆ. ಅವರ ಕುಟುಂಬ ಜೀವನ ಸಂತೋಷದಿಂದ ಇರುತ್ತದೆ. ಇಬ್ಬರೂ ಜೀವನದಲ್ಲಿ ಹೊಸದನ್ನು ಮಾಡಲು ಇಷ್ಟಪಡುತ್ತಾರೆ. ಇಬ್ಬರ ನಡುವೆ ತುಂಬಾ ಪ್ರೀತಿ ಇರುತ್ತದೆ.
ಇವರ ದಾಂಪತ್ಯ ಜೀವನ ರಾಧಾ-ಕೃಷ್ಣನಿಗೆ ಹೋಲಿಸಬಹುದು. ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಇವರ ಜೀವನದಲ್ಲಿ ಕಂಡುಬರಲಿದೆ. ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಸಾಮಾರ್ಥ್ಯವನ್ನು ಇವರು ಹೊಂದಿರುತ್ತಾರೆ. ಹೀಗಾಗಿ ವೃಷಭ ಹಾಗೂ ಕನ್ಯಾ ರಾಶಿಯವರ ಜೋಡಿ ಅದ್ಭುತವಾಗಿದೆ.
ತುಲಾ ಮತ್ತು ವೃಶ್ಚಿಕ ರಾಶಿ
ತುಲಾ ಮತ್ತು ವೃಶ್ಚಿಕ ರಾಶಿಯವರ ಜೋಡಿ ರಾಧಾ-ಕೃಷ್ಣನಿಗೆ ಸಂಬಂಧಿಸಿವೆ ಎಂದು ಹೇಳಲಾಗುತ್ತದೆ. ಈ ರಾಶಿಚಕ್ರದವರು ಪ್ರಣಯ ಸ್ವಭಾವದವರು. ಇಬ್ಬರೂ ತಮ್ಮ ಗುರಿಗಳನ್ನು ತಲುಪಲು ಶ್ರಮಿಸುತ್ತಾರೆ. ಇಬ್ಬರೂ ವಿಭಿನ್ನ ಸ್ವಭಾವಗಳನ್ನು ಹೊಂದಿದ್ದಾರೆ ಮತ್ತು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.
ಎಂಥಹ ಸಂದರ್ಭ ಬಂದರೂ ಕೂಡ ಇಬ್ಬರು ಒಟ್ಟಿಗೆ ನಿಲ್ಲುತ್ತಾರೆ. ಒಟ್ಟಿಗೆ ಎದುರಿಸುತ್ತಾರೆ. ಯಾವುದೇ ಸಂದರ್ಭ ಬಂದರೂ ಕೂಡ ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಎಲ್ಲಾ ಸಂದರ್ಭಗಳಲ್ಲೂ ಒಬ್ಬರನ್ನೊಬ್ಬರು ಕಾಪಾಡಿಕೊಳ್ಳುತ್ತಾರೆ. ಒಟ್ಟಿಗೆ ಜೀವನ ನಡೆಸುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications