Pataka Yoga 2025: ಪಾತಕ ಯೋಗ- 12 ರಾಶಿಗಳಲ್ಲಿ ಯಾರಿಗೆ ಶುಭ? ಅಶುಭ? ಮಿಶ್ರಫಲ?
ಜ್ಯೋತಿಷ್ಯದ ಪ್ರಕಾರ 9 ಗ್ರಹಗಳು ಮತ್ತು 12 ರಾಶಿಗಳು ಇವೆ. ಗ್ರಹಗಳು ಹಾಗೂ ರಾಶಿಗಳು ಪರಸ್ಪರ ಸಂಬಂಧ ಹೊಂದಿವೆ. ಈ ಗ್ರಹಗಳು ತಮ್ಮ ಸ್ಥಾನ ಬದಲಾಯಿಸಿದರೆ ಅದು ಎಲ್ಲಾ ರಾಶಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ.
ಯಾವುದೇ ಗ್ರಹವು ಯಾವುದೇ ರಾಶಿಯಲ್ಲಿ ಒಂದು ನಿರ್ದಿಷ್ಟ ಅವಧಿಯವರೆಗೆ ಇರುತ್ತದೆ. ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಬಂದಾಗ ಶುಭ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಇಂತಹ ಸಂಯೋಜನೆಯು ಜನವರಿ 26 ರವರೆಗೆ ಸಂಭವಿಸಲಿದೆ. ಈ ಸಮಯದಲ್ಲಿ ಸೌರವ್ಯೂಹದ 6 ಗ್ರಹಗಳು ಸತತವಾಗಿ ಒಟ್ಟಿಗೆ ಕಂಡುಬರುತ್ತವೆ. ಇವು ಪಾತಕ ಯೋಗವನ್ನು ರೂಪಿಸುತ್ತವೆ.

6 ಗ್ರಹಗಳಿಂದ ಪಾತಕ ಯೋಗ ಸೃಷ್ಟಿ
ಶನಿ, ಮಂಗಳ, ಗುರು ಮತ್ತು ಶುಕ್ರ ಗ್ರಹಗಳಿಂದ ಪಾತಕ ಯೋಗ ರೂಪುಗೊಳ್ಳುತ್ತದೆ. ಜೊತೆಗೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಸಹ ಇದಕ್ಕೆ ಕಾರಣವಾಗಿವೆ. ಸುಮಾರು 100 ವರ್ಷಗಳ ನಂತರ ಮಂಗಳ, ಗುರು, ಶುಕ್ರ ಮತ್ತು ಶನಿ ಗ್ರಹಗಳನ್ನು ಆಕಾಶದಲ್ಲಿ ಒಟ್ಟಿಗೆ ನೋಡಬಹುದಾಗಿದೆ. ನೆಪ್ಚೂನ್ ಮತ್ತು ಯುರೇನಸ್ ಅನ್ನು ನೋಡಲು ದೂರದರ್ಶಕವನ್ನು ಬಳಸಬೇಕಾಗುತ್ತದೆ. 12 ರಾಶಿಗಳಲ್ಲಿ 6 ಗ್ರಹಗಳ ಸಂಯೋಜನೆಯಿಂದ ಉಂಟಾಗುವ ಪಾತಾಕ ಯೋಗವು ಯಾವ ರಾಶಿಯವರಿಗೆ ಶುಭ ಪರಿಣಾಮವನ್ನು ಬೀರುತ್ತಿದೆ ಮತ್ತು ಯಾವ ರಾಶಿಯವರಿಗೆ ಅಶುಭ ಪರಿಣಾಮವನ್ನು ಬೀರುತ್ತದೆ ಎಂದು ಈಗ ತಿಳಿಯೋಣ.
ಪಾತಕ ಯೋಗದಿಂದ ಈ 4 ರಾಶಿಗಳಿಗೆ ಮಿಶ್ರ ಫಲ:-
ತುಲಾ, ಧನು, ಸಿಂಹ ಹಾಗೂ ಮೀನ ಈ ನಾಲ್ಕು ರಾಶಿಗಳಿಗೆ ಪಾತಾಕ ಯೋಗ ಮಿಶ್ರ ಫಲ ನೀಡಲಿದೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಹೆಚ್ಚಾಗಬಹುದು. ಇದು ನಿಮಗೆ ಹೆಚ್ಚು ಸವಾಲುಗಳನ್ನು ತಂದೊಡ್ಡಬಹುದು. ನೀವು ಹಣವನ್ನು ಸಾಲವಾಗಿ ನೀಡಿದರೆ, ಆ ಹಣವನ್ನು ಮರಳಿ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆರಂಭದಲ್ಲಿ ಖರ್ಚುಗಳು ಹೆಚ್ಚಾಗುತ್ತವೆ. ನೀವು ನಷ್ಟಗಳನ್ನು ಸಹ ಎದುರಿಸಬೇಕಾಗಬಹುದು.
ಪಾತಕ ಯೋಗದಿಂದ ಈ 4 ರಾಶಿಗಳಿಗೆ ಶುಭ:-
ಪಾತಾಕ ಯೋಗದ ರಚನೆಯಿಂದಾಗಿ 12 ರಾಶಿಗಳಲ್ಲಿ ಮೇಷ, ವೃಷಭ, ಮಕರ, ಕುಂಭ ಈ 4 ರಾಶಿಯ ಜನರು ಶುಭ ಪರಿಣಾಮಗಳನ್ನು ಪಡೆಯಲಿದ್ದಾರೆ. ಈ ರಾಶಿಗಳ ಅದೃಷ್ಟ ಬೆಳಗಲಿದೆ. ನೀವು ವೃತ್ತಿ, ಉದ್ಯೋಗ, ವ್ಯವಹಾರ ಮತ್ತು ಇತರ ವಿಷಯಗಳಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ವಾಹನ, ಆಸ್ತಿ, ಭೂಮಿ ಖರೀದಿಗೆ ಉತ್ತಮ ಸಮಯ ಇದಾಗಿದೆ. ನಿಮ್ಮ ಸಂಪತ್ತು ಕೂಡ ಹೆಚ್ಚಳವಾಗಬಹುದು.
ಪಾತಕ ಯೋಗದಿಂದ ಈ 4 ರಾಶಿಗಳಿಗೆ ಅಶುಭ:-
ಪಾತಕ ಯೋಗ ಕರ್ಕಾಟಕ, ವೃಶ್ಚಿಕ, ಕನ್ಯಾ ಹಾಗೂ ಮಿಥುನ ಈ 4 ರಾಶಿಗಳ ಮೇಲೆ ಅಶುಭ ಪರಿಣಾಮಗಳನ್ನು ಬೀರಲಿದೆ. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸ ಪೂರ್ಣಗೊಳ್ಳುವ ಮೊದಲೇ ಸ್ಥಗಿತಗೊಳ್ಳಬಹುದು. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಆರ್ಥಿಕ ನಷ್ಟ ಉಂಟಾಗಬಹುದು. ಹೂಡಿಕೆ ಮಾಡುವುದರಿಂದ ದೊಡ್ಡ ನಷ್ಟವಾಗಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಯಾವುದೇ ಮಾಹಿತಿ ಕಾರ್ಯ ರೂಪಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications