Mercury Transit in Nakshatra 2025: ಬುಧ ನಕ್ಷತ್ರ ಸಂಚಾರ- ಜೀವನದ ಎಲ್ಲಾ ಸಂತೋಷ ಪಡೆಯುವ ರಾಶಿ ಇದು
ವಾಕ್ ಮತ್ತು ಬುದ್ಧಿವಂತಿಕೆಯ ದೇವರಾದ ಬುಧನು ಇಂದು ತನ್ನ ಮಾರ್ಗವನ್ನು ಬದಲಾಯಿಸುತ್ತಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ ಜನವರಿ 13ರ ಸೋಮವಾರ ಸಂಜೆ 8:42ಕ್ಕೆ ಬುಧ ಗ್ರಹ ಮೂಲ ನಕ್ಷತ್ರವನ್ನು ಬಿಟ್ಟು ಪೂರ್ವಾಷಾಢ ನಕ್ಷತ್ರವನ್ನು ಪ್ರವೇಶಿಸುತ್ತದೆ. ಪೂರ್ವಾಷಾಡ ನಕ್ಷತ್ರಪುಂಜ 20ನೇ ನಕ್ಷತ್ರವಾಗಿದ್ದು, ಇದರ ಅಧಿಪತಿ ಶುಕ್ರ. ಈ ನಕ್ಷತ್ರ ಧನು ರಾಶಿಯಲ್ಲಿ ಕಾಣಿಸಿಕೊಂಡಾಗ ಅದು ಗುರು ಗ್ರಹದಿಂದಲೂ ಪ್ರಭಾವಿತವಾಗಿರುತ್ತದೆ.
ಪೂರ್ವಾಷಾಢ ನಕ್ಷತ್ರದಲ್ಲಿ ಬುಧ ಗ್ರಹದ ಸಂಚಾರದ ಮಹತ್ವ
ಪೂರ್ವಾಷಾಢ ನಕ್ಷತ್ರಕ್ಕೆ ಬುಧನ ಪ್ರವೇಶವು ಬಹಳ ಮುಖ್ಯವಾದ ಜ್ಯೋತಿಷ್ಯ ಘಟನೆ. ಬುಧ ಗ್ರಹ ಬುದ್ಧಿವಂತಿಕೆ, ತಾರ್ಕಿಕತೆ, ಸಂವಹನ, ಪಾಲುದಾರಿಕೆ ಮತ್ತು ವ್ಯವಹಾರವನ್ನು ಸೂಚಿಸುವ ಗ್ರಹ. ಪೂರ್ವಾಷಾಢ ನಕ್ಷತ್ರದ ಸ್ವಭಾವ ಬುಧನ ಶಕ್ತಿಯನ್ನು ತೀವ್ರಗೊಳಿಸುತ್ತದೆ. ವ್ಯಾಪಾರ ಮತ್ತು ಹಣಕಾಸಿನ ಅಂಶವಾದ ಬುಧನ ಈ ಸಂಚಾರ ಕಲೆ, ಸೌಂದರ್ಯ, ವಾಕ್ಚಾತುರ್ಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪ್ರಯೋಜನಗಳನ್ನು ನೀಡುತ್ತದೆ.

ಪೂರ್ವಾಷಾಢ ನಕ್ಷತ್ರದಲ್ಲಿ ಬುಧ ಗ್ರಹದ ಸಂಚಾರದ ಪರಿಣಾಮ
2025ನೇ ವರ್ಷದ ಮೊದಲ ಉತ್ಸವ ಲೋಹ್ರಿಯನ್ನು ಜನವರಿ 13ರಂದು ಆಚರಿಸಲಾಗುತ್ತದೆ. ಇದು ಸಂಜೆಯ ಉತ್ಸವವಾಗಿದೆ. ಅಂದರೆ ಇದು ಚಳಿಗಾಲದ ಪಂಜಾಬಿ ಜಾನಪದ ಉತ್ಸವವಾಗಿದೆ. ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಬುಧ ನಕ್ಷತ್ರ ಸಂಚಾರ ಮಾಡಲಿದೆ.
ಬುಧ ಗ್ರಹ ಪೂರ್ವಾಷಾಢ ನಕ್ಷತ್ರದಲ್ಲಿ ಸಾಗುತ್ತದೆ. ಇದು ಮೂರು ರಾಶಿಗಳಿಗೆ ಅತ್ಯಂತ ಶುಭ ಸಂಚಾರವಾಗಿದೆ. ಈ ಸಂಚಾರದ ಪರಿಣಾಮ ಹಣಕಾಸು, ವೃತ್ತಿ, ಸಂಬಂಧಗಳು ಮತ್ತು ಆತ್ಮವಿಶ್ವಾಸದಂತಹ ಜೀವನದ ವಿವಿಧ ಅಂಶಗಳ ಮೇಲೆ ಕಂಡುಬರುತ್ತದೆ. ಹಾಗಾದರೆ ಆ 3 ರಾಶಿಗಳು ಯಾವುವು ಮತ್ತು ಅವುಗಳಿಗೆ ವಿಶೇಷ ಫಲಿತಾಂಶಗಳೇನು ಎಂಬುದನ್ನು ವಿವರವಾಗಿ ತಿಳಿಸೋಣ.

ಸಿಂಹ ರಾಶಿ
ಬುಧನ ಈ ನಕ್ಷತ್ರ ಸಂಚಾರ ಸಿಂಹ ರಾಶಿಯವರಿಗೆ ಹೊಸ ಸಂಪತ್ತಿನ ಮೂಲಗಳನ್ನು ತೆರೆಯುತ್ತದೆ. ವ್ಯವಹಾರದಲ್ಲಿ ವಿಸ್ತರಣೆ ಮತ್ತು ಹೂಡಿಕೆಯಲ್ಲಿ ಲಾಭದ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಸರ್ಕಾರಿ ವಲಯಗಳಿಗೆ ಸಂಬಂಧಿಸಿದ ಜನರು ವಿಶೇಷ ಯಶಸ್ಸನ್ನು ಪಡೆಯುತ್ತಾರೆ.
ಬುಧನ ಶಕ್ತಿಯು ಸಿಂಹ ರಾಶಿಯವರ ನಾಯಕತ್ವ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಹೊಸ ಯೋಜನೆಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ನಿಮ್ಮ ಸಲಹೆ ಮತ್ತು ಆಲೋಚನೆಗಳನ್ನು ಪ್ರಶಂಸಿಸಲಾಗುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಬುಧನ ಈ ಸಂಚಾರ ಆರ್ಥಿಕ ವಿಷಯಗಳಲ್ಲಿ ಸ್ಥಿರತೆಯನ್ನು ತರುತ್ತದೆ. ಸಿಲುಕಿಕೊಂಡಿರುವ ಹಣ ಮರಳಿ ಸಿಗುತ್ತದೆ. ಹೊಸ ಆದಾಯದ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ. ಬುಧ ಗ್ರಹದ ಅನುಗ್ರಹದಿಂದ ಸಂಬಂಧಗಳು ಸುಧಾರಿಸುತ್ತವೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಇರುತ್ತದೆ. ಹೊಸ ಸಂಬಂಧ ಆರಂಭವಾಗಬಹುದು.
ವಿದೇಶ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ತುಲಾ ರಾಶಿಯವರಿಗೆ ಬುಧ ಗ್ರಹದ ಸಂಚಾರ ವಿದೇಶ ಪ್ರಯಾಣ ಅಥವಾ ಅಂತರರಾಷ್ಟ್ರೀಯ ಯೋಜನೆಗಳಲ್ಲಿ ಯಶಸ್ಸನ್ನು ತರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಬುಧ ಗ್ರಹದ ಪ್ರಭಾವದಿಂದಾಗಿ ಸ್ಮರಣ ಶಕ್ತಿ ಸುಧಾರಿಸುತ್ತದೆ.

ಧನು ರಾಶಿ
ಪೂರ್ವಾಷಾಢ ನಕ್ಷತ್ರದಲ್ಲಿ ಬುಧನ ಸಂಚಾರದಿಂದಾಗಿ ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಧನು ರಾಶಿಯವರಿಗೆ ಆಸ್ತಿ ಸಂಬಂಧಿತ ವಿಷಯಗಳಲ್ಲಿ ಬುಧನ ಈ ಸಂಚಾರ ಪ್ರಯೋಜನಕಾರಿಯಾಗಲಿದೆ. ಮನೆ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಹೊಸ ಎತ್ತರವನ್ನು ತಲುಪುವಿರಿ. ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳನ್ನು ಗುರುತಿಸಲು ನಿಮಗೆ ಸಾಧ್ಯವಾಗುತ್ತದೆ.
ವ್ಯಾಪಾರಸ್ಥರಿಗೆ ದೊಡ್ಡ ಒಪ್ಪಂದಗಳು ಸಿಗಬಹುದು. ಬುಧ ಗ್ರಹದ ಸಕಾರಾತ್ಮಕ ಶಕ್ತಿಯು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಯೋಜನೆಗಳನ್ನು ನೀವು ಸರಿಯಾಗಿ ಕಾರ್ಯಗತಗೊಳಿಸುವಿರಿ. ಹಳೆಯ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ ಮತ್ತು ಮಾನಸಿಕವಾಗಿ ಹೆಚ್ಚು ಶಾಂತವಾಗಿರುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ಒದಗಿಸುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಸಿ)












Click it and Unblock the Notifications