Mercury Transit 2024: ಸಿಂಹದಲ್ಲಿ ಬುಧ ಸಂಚಾರ: ಈ ರಾಶಿಗೆ ಪ್ರತಿ ಹೆಜ್ಜೆಗೂ ಸಕ್ಸಸ್!
ಕೆಲ ಗ್ರಹಗಳು ಪರಸ್ಪರ ಸ್ನೇಹ ಗ್ರಹಗಳಾಗಿದ್ದರೆ ಇನ್ನೂ ಕೆಲವು ಶತ್ರು ಗ್ರಹಗಳಾಗಿರುತ್ತವೆ. ಈ ಗ್ರಹಗಳು ಪ್ರತಿಯೊಂದು ರಾಶಿಯನ್ನು ಆಳುತ್ತವೆ. ಒಂದು ಗ್ರಹವು ತನಗೆ ಹೊಂದಿಕೆಯಾಗುವ ಇನ್ನೊಂದು ಗ್ರಹದ ರಾಶಿಯಲ್ಲಿದ್ದಾಗ, ಉತ್ತಮ ಫಲಿತಾಂಶಗಳನ್ನು ನಿಡುತ್ತದೆ. ಆದರೆ ಅದು ಹೊಂದಾಣಿಕೆಯಾಗದ ಗ್ರಹದಲ್ಲಿದ್ದಾಗ ಪ್ರತಿಕೂಲ ಫಲಿತಾಂಶಗಳನ್ನು ಉಂಟು ಮಾಡುತ್ತದೆ. ಇದರ ಪರಿಣಾಮಗಳು ಆಯಾ ರಾಶಿಗಳಲ್ಲಿ ಹುಟ್ಟಿದವರ ಮೇಲೂ ಬೀರುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಮುಂದಿನ ತಿಂಗಳು ಸಿಂಹ ರಾಶಿಗೆ ಚಲಿಸುತ್ತದೆ. ಸಿಂಹ ರಾಶಿಯ ಅಧಿಪತಿ ಬುಧ ಆಗಿದೆ. ಆದ್ದರಿಂದ ಈ ಬದಲಾವಣೆಯು ಉತ್ತಮ ಫಲಿತಾಂಶಗಳನ್ನು ತರುತ್ತದೆ. ನಿರ್ದಿಷ್ಟವಾಗಿ ಮೂರು ರಾಶಿಗಳು ಈ ರಾಶಿ ಬದಲಾವಣೆಯಿಂದ ಉತ್ತಮ ಪ್ರಯೋಜನಗಳನ್ನು ಪಡೆಯುತ್ತವೆ. ಆ ರಾಶಿಗಳು ಯಾವುವು ಎಂಬುದನ್ನು ಈಗ ತಿಳಿಯೋಣ.

ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಬುಧ ಸಂಕ್ರಮಣ ಅನುಕೂಲಕರವಾಗಿರುತ್ತದೆ. ಏಕೆಂದರೆ ಸಿಂಹ ರಾಶಿ ಅವರ ಲಗ್ನ ಭಾವದಲ್ಲಿ ಈ ರಾಶಿ ಬದಲಾವಣೆ ಉಂಟಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಈ ರಾಶಿಯವರ ಬಗ್ಗೆ ಮೆಚ್ಚುಗೆಯು ಬಹಳಷ್ಟು ಹೆಚ್ಚಾಗುತ್ತದೆ. ಇದರೊಂದಿಗೆ ಸಮಾಜದಲ್ಲಿ ಮನ್ನಣೆ ಮತ್ತು ಸ್ಥಾನಮಾನ ಹೆಚ್ಚಾಗಲಿದೆ.
ವಿಶೇಷವಾಗಿ ವಿದ್ಯಾರ್ಥಿಗಳು ಈ ಸಂಚಾರದಿಮದ ಪ್ರಯೋಜನ ಪಡೆಯುತ್ತಾರೆ. ಅಲ್ಲದೆ ದೈನಂದಿನ ಆದಾಯ ಹೆಚ್ಚುತ್ತದೆ. ಹೊಸ ಜನರೊಂದಿಗೆ ಸಂಪರ್ಕ ಸಾಧಿಸುವಿರಿ. ಭವಿಷ್ಯದಲ್ಲಿ ಇದು ಉಪಯುಕ್ತವಾಗಿರುತ್ತದೆ. ವಿವಾಹಿತರು ಸಹ ಸಂತೋಷದ ವೈವಾಹಿಕ ಜೀವನವನ್ನು ನಡೆಸುತ್ತಾರೆ. ಜಂಟಿ ಉದ್ಯಮಗಳನ್ನು ಮಾಡುವವರಿಗೂ ಲಾಭ ಸಿಗಲಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಬುಧ ಸಂಚಾರ ಅನುಕೂಲಕರವಾಗಿರುತ್ತದೆ. ಏಕೆಂದರೆ ಇದು ಈ ತುಲಾ ರಾಶಿಯ ಆದಾಯಕ್ಕೆ ಸಂಬಂಧಿಸಿದೆ. ಆದ್ದರಿಂದ ಈ ಸಮಯದಲ್ಲಿ ಅವರ ಆದಾಯವು ಹೆಚ್ಚಾಗುತ್ತದೆ. ಅಲ್ಲದೆ ಈ ಸಮಯ ಹೂಡಿಕೆಗೆ ತುಂಬಾ ಅನುಕೂಲಕರವಾಗಿದೆ. ಈ ಸಮಯದಲ್ಲಿ ಮಾಡಿದ ಹೂಡಿಕೆಯು ಭವಿಷ್ಯದಲ್ಲಿ ಲಾಭದಾಯಕವಾಗಿರುತ್ತದೆ.
ಬುಧ ಸಂಕ್ರಮಣದಿಂದಾಗಿ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಅದೃಷ್ಟವನ್ನು ಹೊಂದಿರುತ್ತಾರೆ. ಅಲ್ಲದೆ ಮಗುವಿನ ಜನನಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ನೀವು ಕೇಳಬಹುದು. ಈ ಸಮಯದಲ್ಲಿ ನೀವು ಷೇರು ಹೂಡಿಕೆ ಮತ್ತು ಲಾಟರಿಯಂತಹ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯಬಹುದು.

ಧನು ರಾಶಿ
ಧನು ರಾಶಿಯಲ್ಲಿ ಜನಿಸಿದವರಿಗೆ ಬುಧ ಸಂಕ್ರಮಣ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಧನು ರಾಶಿ ಅವರಿಗೆ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ. ಎಲ್ಲದರಲ್ಲೂ ಅದೃಷ್ಟವಿದೆ. ಈ ಅವಧಿಯು ವ್ಯಾಪಾರಸ್ಥರಿಗೆ ತುಂಬಾ ಅನುಕೂಲಕರವಾಗಿರುತ್ತದೆ.
ವ್ಯಾಪಾರದಲ್ಲಿ ಲಾಭವನ್ನು ಪಡೆಯುವಿರಿ. ಅಧಿಕಾರಿಗಳು ಹೊಸ ಜವಾಬ್ದಾರಿಗಳನ್ನು ಮತ್ತು ಕೆಲಸದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಸ್ಥಗಿತಗೊಂಡ ಕಾರ್ಯಗಳನ್ನು ಪುನರಾರಂಭಿಸಬಹುದು. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications