Astrology: ಬುಧ ಉದಯದಿಂದ ಹೆಚ್ಚುವುದು ಈ ರಾಶಿಯವರ ಆದಾಯ: ಪ್ರತಿ ಹಂತದಲ್ಲಿಯೂ ಸಿಗುವುದು ಯಶಸ್ಸು

Astrology: ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಮಾತು, ವ್ಯವಹಾರ, ಸಂವಹನ ಕೌಶಲ್ಯ ಮತ್ತು ವ್ಯಾಪಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಗ್ರಹಗಳ ರಾಜಕುಮಾರ ಬುಧ ಮೇ 26 ರಂದು ವೃಷಭ ರಾಶಿಯಲ್ಲಿ ಉದಯಿಸುತ್ತಾನೆ. ಜ್ಯೋತಿಷ್ಯದಲ್ಲಿ, ಯಾವುದೇ ಶುಭ ಗ್ರಹದ ಉದಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಬುಧ ಉದಯಿಸಿದಾಗ, ಅದು ಜೀವನದ ವಿವಿಧ ಅಂಶಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಬುಧ ತನ್ನ ಸ್ನೇಹಪರ ರಾಶಿಯಲ್ಲಿಯೇ ಉದಯಿಸುವುದರಿಂದ ಈ ಬದಲಾವಣೆಯು ವಿಶೇಷವಾಗಿರಲಿದೆ.

12 ರಾಶಿಗಳ ಮೇಲೆ ಬುಧ ಗ್ರಹ ಉದಯದ ಪರಿಣಾಮ

ಮೇಷ ರಾಶಿ: ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಕೆಲಸದಲ್ಲಿ ಬಡ್ತಿ ಸಾಧ್ಯವಾಗುವುದು. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸುತ್ತದೆ.

Astrology

ವೃಷಭ ರಾಶಿ: ಬುಧನ ಉದಯದ ಪ್ರಭಾವದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಹೊಸ ಆದಾಯದ ಮೂಲಗಳು ಹೊರಹೊಮ್ಮುವುದು. ಮಾನಸಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ.

ಮಿಥುನ ರಾಶಿ: ಒಂದು ಪ್ರಮುಖ ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗುವುದು. ಈ ಸಮಯದಲ್ಲಿ ಆರೋಗ್ಯವು ಅತ್ಯುತ್ತಮವಾಗಿರುತ್ತದೆ. ಭೂ ಸಂಬಂಧಿತ ಕೆಲಸಗಳಲ್ಲಿ ಲಾಭವಾಗುವುದು. ಆಸ್ತಿಯಲ್ಲಿ ಹೂಡಿಕೆ ಮಾಡಲು ನಿಮಗೆ ಅವಕಾಶ ಸಿಗಬಹುದು. ವ್ಯರ್ಥ ಖರ್ಚುಗಳಿಗೆ ಕಡಿವಾಣ ಬೀಳುವುದು.

ಕರ್ಕಾಟಕ ರಾಶಿ: ಬುಧನ ಪ್ರಭಾವದಿಂದ ನಿಮ್ಮ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಹೊಸ ಮನ್ನಣೆ ಸಿಗುವುದು. ನೀವು ಮಾಡುವ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ನಿಮ್ಮ ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯಾಗುವುದು.

ಸಿಂಹ ರಾಶಿ: ಬುಧನ ಉದಯದೊಂದಿಗೆ, ವೃತ್ತಿಜೀವನದಲ್ಲಿ ಬೆಳವಣಿಗೆಯಾಗುವುದು. ಈ ಸಮಯದಲ್ಲಿ, ನಿಮ್ಮ ವ್ಯವಹಾರವು ಅಗಾಧವಾದ ಆರ್ಥಿಕ ಬೆಳವಣಿಗೆಯಸನ್ನು ನೀಡುತ್ತದೆ. ಸಂವಹನ ಕೌಶಲ್ಯಗಳು ಉತ್ತಮವಾಗಿರುತ್ತವೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ.

ಕನ್ಯಾ ರಾಶಿ: ಬುಧನ ಉಚ್ಛ್ರಾಯ ಅವಧಿಯಲ್ಲಿ ಅದೃಷ್ಟ ನಿಮ್ಮ ಕಡೆಗಿರುವುದು. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಯೋಜನೆಗಳು ಈಗ ಚುರುಕು ಪಡೆಯುವುದು. ಉನ್ನತ ಶಿಕ್ಷಣಕ್ಕಾಗಿ ಸುವರ್ಣ ಅವಕಾಶಗಳು ಸಿಗುವುದು. ಉದ್ಯೋಗಾವಕಾಶಗಳು ಅನುಕೂಲಕರವಾಗಿರುತ್ತವೆ.

ತುಲಾ ರಾಶಿ: ಮನಸ್ಸಿನಲ್ಲಿ ಶಾಂತಿ ನೆಲೆಸುವುದು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಕುಟುಂಬದಲ್ಲಿ ಶುಭ ಘಟನೆಗಳು ನಡೆಯಬಹುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು. ಸಂಗಾತಿಯೊಂದಿಗಿನ ನಿರಂತರ ವಿವಾದ ಕೊನೆಗೊಳ್ಳುತ್ತದೆ.

ವೃಶ್ಚಿಕ ರಾಶಿ: ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಉದ್ಯೋಗದಲ್ಲಿರುವವರಿಗೆ ಅನಿರೀಕ್ಷಿತವಾಗಿ ಮಹತ್ವದ ಉಡುಗೊರೆ ಸಿಗಬಹುದು. ಮನಸ್ಸಿನಲ್ಲಿ ಸಂತೋಷ ನೆಲೆಯಾಗುವುದು. ಸಂಗಾತಿಯೊಂದಿಗಿನ ನಿಮ್ಮ ನಿಕಟತೆ ಹೆಚ್ಚಾಗುತ್ತದೆ. ಭೂ ವಿವಾದದಿಂದ ಪರಿಹಾರ ಸಿಗಬಹುದು.

ಧನು ರಾಶಿ: ಕೆಲಸದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಬೆಂಬಲ ಸಿಗುವುದು. ಇದರಿಂದ ನಿಮ್ಮ ಸಂತೋಷ ಹೆಚ್ಚಾಗುವುದು. ಉದ್ಯಮಿಗಳ ಯಶಸ್ಸು ಹೆಚ್ಚಾಗುವುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು.

ಮಕರ ರಾಶಿ: ವಿದ್ಯಾರ್ಥಿಗಳಿಗೆ ಈ ಸಮಯವು ಮಹತ್ವದ್ದಾಗಿರುತ್ತದೆ. ಈ ಸಮಯದಲ್ಲಿ ಅವರು ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾಗಬಹುದು. ಉದ್ಯಮಿಗಳ ಬಾಕಿ ಹಣ ಕೈ ಸೇರುವುದು. ವಿವಾಹಿತ ವ್ಯಕ್ತಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ.

ಕುಂಭ ರಾಶಿ: ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಕೌಟುಂಬಿಕ ಸಂತೋಷ ಹೆಚ್ಚಾಗುವುದು. ವಿವಾಹಿತ ದಂಪತಿಗಳು ಸಂತೋಷದ ದಾಂಪತ್ಯ ಜೀವನವನ್ನು ಆನಂದಿಸುತ್ತಾರೆ. ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯ ಬಲವಾದ ಸಾಧ್ಯತೆಗಳಿವೆ.

ಮೀನ ರಾಶಿ: ಕೌಟುಂಬಿಕ ವಿವಾದಗಳಿಂದ ಪರಿಹಾರ ಸಿಗುವುದು. ಅತ್ತೆ-ಮಾವರಿಂದ ಒಳ್ಳೆಯ ಸುದ್ದಿ ಬರಬಹುದು. ಸಂಬಂಧಗಳು ಹೆಚ್ಚು ಸಾಮರಸ್ಯದಿಂದ ಕೂಡಿರುವುದು. ಉದ್ಯೋಗದಲ್ಲಿರುವವರಿಗೆ ಲಾಭವಾಗುವುದು. ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯ ಸಾಧ್ಯತೆಯಿದೆ.

ಬರಹ: ರಂಜಿತಾ ಆರ್.ಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+