Mercury Retrograde 2024: ಕರ್ಕಾಟಕದಲ್ಲಿ ಬುಧ ಹಿಮ್ಮುಖ ಸಂಚಾರ: ಈ 3 ರಾಶಿಗಳಿಗೆ ಸುವರ್ಣ ಯುಗ...

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧ ದೇವನನ್ನು ಮಾತು, ಬುದ್ಧಿವಂತಿಕೆ, ಅಧ್ಯಯನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಇತರ ಗ್ರಹಗಳಿಗೆ ಹೋಲಿಸಿದರೆ ಬುಧ ಕಡಿಮೆ ದಿನಗಳಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಪ್ರಸ್ತುತ ಈ ಬುಧ ಸಿಂಹ ರಾಶಿಯಲ್ಲಿ ಸಾಗುತ್ತಿದೆ.

ಆಗಸ್ಟ್ 22 ರಂದು ಅಂದರೆ ಇಂದು ಈ ಬುಧವಾರ ಕರ್ಕ ರಾಶಿಯನ್ನು ವಕ್ರ ಸ್ಥಾನದಲ್ಲಿ ತಲುಪುತ್ತದೆ. ಬುಧನು ವಕ್ರ ಸ್ಥಾನದಲ್ಲಿ ಕರ್ಕಾಟಕವನ್ನು ತಲುಪುವುದರಿಂದ ಅದರ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಅಲ್ಲದೆ ಗ್ರಹಗಳು ಕ್ಷೀಣ ಸ್ಥಿತಿಯದಲ್ಲಿದ್ದಾಗ ಲಾಭದಲ್ಲಿ ವಿಳಂಬವಾಗುತ್ತದೆ.

ಬುಧನು ಕರ್ಕಾಟಕದಲ್ಲಿ ವಕ್ರ ಸ್ಥಾನದಲ್ಲಿ ಸಾಗುವುದರಿಂದ ಕೆಲವು ಸ್ಥಳೀಯರ ಅದೃಷ್ಟ ಬೆಳಗಲಿದೆ. ಪರಿಣಾಮವಾಗಿ ಉದ್ಯಮ ಮತ್ತು ವ್ಯಾಪಾರದಲ್ಲಿ ಸುಧಾರಣೆ ಕಂಡುಬರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುವರು. ಹಾಗಾದರೆ ಬುಧ ಗ್ರಹ ಕರ್ಕಾಟಕ ಸಂಕ್ರಮಣದಿಂದ ಯಾವ ರಾಶಿಯವರ ಅದೃಷ್ಟ ಹೊಳೆಯುತ್ತದೆ ಎಂದು ಈಗ ನೋಡೋಣ.

Astrology mercury retrograde in cancer on 22 august 2024 these zodiac signs will be lucky in kannada

ವೃಷಭ ರಾಶಿ

ವೃಷಭ ರಾಶಿಯ 3ನೇ ಮನೆಯಲ್ಲಿ ಬುಧ ಹಿಮ್ಮುಖವಾಗಿ ಚಲಿಸುತ್ತದೆ. ಇದು ವೃಷಭ ರಾಶಿಗಳ ಧೈರ್ಯ ಮತ್ತು ಶೌರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ನೀವು ಬಹಳ ದಿನಗಳಿಂದ ಕೆಲಸ ಬದಲಾಯಿಸುವ ಯೋಚನೆಯಲ್ಲಿದ್ದರೆ ನಿಮ್ಮ ಆಸೆ ಈಡೇರುತ್ತದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಇದರಿಂದ ನಿಮ್ಮ ಆರ್ಥಿಕ ಜೀವನ ಸುಧಾರಿಸಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

Astrology mercury retrograde in cancer on 22 august 2024 these zodiac signs will be lucky in kannada

ಕನ್ಯಾ ರಾಶಿ

ಬುಧ ಗ್ರಹ ಕನ್ಯಾರಾಶಿಯ 11ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತದೆ. ಇದರಿಂದ ಅನಿರೀಕ್ಷಿತ ಆರ್ಥಿಕ ಲಾಭ ಸಿಗಲಿದೆ. ಕೆಲವರು ಹೊಸ ಆದಾಯದ ಮೂಲಗಳನ್ನು ಪಡೆಯುತ್ತಾರೆ. ಉದ್ಯೋಗಿಗಳು ತಮ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮೇಲಧಿಕಾರಿಗಳನ್ನು ಮೆಚ್ಚಿಸುತ್ತಾರೆ. ಇದರಿಂದ ಕಛೇರಿಯಲ್ಲಿ ಉತ್ತಮ ಪ್ರಗತಿ ಕಾಣಬಹುದು. ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ. ಹೂಡಿಕೆಯಿಂದ ಉತ್ತಮ ಲಾಭವೂ ಸಿಗಲಿದೆ. ಧನಲಾಭದಿಂದ ನಿಮ್ಮ ಹಣದ ಸಮಸ್ಯೆಗಳು ದೂರವಾಗುತ್ತವೆ.

Astrology mercury retrograde in cancer on 22 august 2024 these zodiac signs will be lucky in kannada

ತುಲಾ ರಾಶಿ

ತುಲಾ ರಾಶಿಯ 10ನೇ ಮನೆಯಲ್ಲಿ ಬುಧ ಹಿಮ್ಮುಖವಾಗಿ ಸಂಚಾರ ಮಾಡಲಿದೆ. ಹೀಗಾಗಿ ಈ ರಾಶಿಚಕ್ರದವರು ತಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಉದ್ಯೋಗಿಗಳು ತಮ್ಮ ಕಾರ್ಯನಿರ್ವಹಣೆಯಿಂದ ಕಚೇರಿಯಲ್ಲಿ ಬಡ್ತಿಯನ್ನು ಪಡೆಯುತ್ತಾರೆ. ಕೆಲವರಿಗೆ ಹೊಸ ವಾಹನ, ಆಸ್ತಿ ಖರೀದಿಗೆ ಅವಕಾಶ ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರಲಿದೆ. ಬಹಳಷ್ಟು ಹಣವನ್ನು ಈ ಸಮಯದಲ್ಲಿ ಉಳಿಸಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಜೀವನ ಸುಧಾರಿಸಲಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+