Mangala Chandra Yoga 2025: ಮಂಗಳ ಚಂದ್ರ ಸಂಯೋಗದಿಂದ ಮಹಾಲಕ್ಷ್ಮಿ ಯೋಗ- ಈ ರಾಶಿಗೆ ಅಷ್ಟೈಶ್ವರ್ಯ ಪ್ರಾಪ್ತಿ

ಒಂಬತ್ತು ಗ್ರಹಗಳಲ್ಲಿ ಚಂದ್ರ ತನ್ನ ರಾಶಿಯನ್ನು ಅತ್ಯಂತ ವೇಗವಾಗಿ ಬದಲಾಯಿಸುವ ಗ್ರಹವಾಗಿದೆ. ಗ್ರಹಗಳ ಅಧಿಪತಿಯಾದ ಮಂಗಳ ಒಂದೇ ರಾಶಿಯಲ್ಲಿ ದೀರ್ಘಕಾಲ ಇರುತ್ತದೆ. ಯಾವುದೇ ಗ್ರಹ ಯಾವುದೇ ರಾಶಿಯಲ್ಲಿ ಒಂದು ನಿರ್ದಿಷ್ಟ ಸಮಯದವರೆಗೆ ಇರುತ್ತದೆ. ಈ ಮಂಗಳ ಹಾಗೂ ಚಂದ್ರ ಗ್ರಹಗಳ ಸಂಯೋಗ 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರಲಿದೆ.

ಮುಂಬರುವ ದಿನಗಳಲ್ಲಿ ಮಂಗಳ ಮತ್ತು ಚಂದ್ರರ ಸಂಯೋಗ ಸಂಭವಿಸಲಿದ್ದು, ಇದು ಮಹಾಲಕ್ಷ್ಮಿ ಯೋಗವನ್ನು ರೂಪಿಸುತ್ತದೆ. ಇದನ್ನು ಮಂಗಳ-ಚಂದ್ರ ಯೋಗ ಎಂದೂ ಕರೆಯುತ್ತಾರೆ. ಹಾಗಾದರೆ ಚಂದ್ರ-ಮಂಗಳ ಸಂಯೋಗ ಯಾವಾಗ ಸಂಭವಿಸುತ್ತದೆ? ಇದರಿಂದ ಯಾವ 3 ರಾಶಿಗಳಿಗೆ ಲಾಭವಾಗುತ್ತದೆ ಎಂದು ಈಗ ತಿಳಿಯೋಣ?

ಮಂಗಳ-ಚಂದ್ರ ಸಂಯೋಗ

ಜನವರಿ 21ರಂದು ಮಂಗಳ ಗ್ರಹ ಮಿಥುನ ರಾಶಿಯಲ್ಲಿ ಸಾಗುತ್ತದೆ. ಫೆಬ್ರವರಿ 8ರಂದು ಚಂದ್ರನು ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಹಾಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ. ಎರಡೂ ಗ್ರಹಗಳ ಸಂಯೋಗ ಮತ್ತು ಯೋಗದಿಂದಾಗಿ 3 ರಾಶಿಯವರು ಅದೃಷ್ಟವನ್ನು ಪಡೆಯುತ್ತಾರೆ. ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಹಾಗಾದರೆ ಆ ಮೂರು ರಾಶಿಗಳು ಯಾವುವು? ಎಂದು ಈಗ ತಿಳಿಯೋಣ.

Astrology mahalakshmi yoga by mars moon conjunction 2025 these zodic signs get auspicious days

ಮಿಥುನ ರಾಶಿ

ಮಿಥುನ ರಾಶಿಯ ಜನರು ಚಂದ್ರ ಮತ್ತು ಮಂಗಳನ ಸಂಯೋಗದಿಂದ ಸಾಕಷ್ಟು ಶುಭ ಸಮಯವನ್ನು ಅನುಭವಿಸುತ್ತಾರೆ. ಸಂಗಾತಿಯೊಂದಿಗೆ ಮಾಧುರ್ಯ ಹೆಚ್ಚಾಗುತ್ತದೆ. ಸಂಬಂಧದಲ್ಲಿ ನಡೆಯುತ್ತಿರುವ ಉದ್ವಿಗ್ನತೆಗಳು ದೂರವಾಗುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪಾಲುದಾರಿಕೆಯಲ್ಲಿ ಮಾಡಿದ ವ್ಯವಹಾರ ಲಾಭದಾಯಕವಾಗಿರುತ್ತದೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಲಕ್ಷ್ಮಿ ದೇವಿಯು ತನ್ನ ವಿಶೇಷ ಆಶೀರ್ವಾದವನ್ನು ಮಿಥುನ ರಾಶಿಯವರಿಗೆ ನೀಡಲಿದ್ದಾಳೆ.

ಮಹಾಲಕ್ಷ್ಮಿ ಯೋಗ ಮಿಥುನ ರಾಶಿಯವರಿಗೆ ನೆಮ್ಮದಿಯ ಜೀವನ ನೀಡಲಿದೆ. ಸಂಪತ್ತು ವೃದ್ಧಿಯಾಗಲಿದೆ. ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ನೀವು ಗಳಿಸುವಿರಿ. ಆಧ್ಯಾತ್ಮದಲ್ಲಿ ಆಸ್ಕ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಜೀವನ ಸಂತೋಷದಿಂದ ಕೂಡಿರುತ್ತದೆ.

Astrology mahalakshmi yoga by mars moon conjunction 2025 these zodic signs get auspicious days

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಮಹಾಲಕ್ಷ್ಮಿ ಯೋಗ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ದೀರ್ಘಕಾಲದಿಂದ ಪೂರ್ಣಗೊಳಿಸಲು ಸಾಧ್ಯವಾಗದ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಮನಸ್ಸು ಪ್ರಸನ್ನವಾಗಿರುತ್ತದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವರು.

ವೃತ್ತಿಯಲ್ಲಿ ಕೆಲಸದ ಒತ್ತಡ ಕಡಿಮೆಯಾಗಲಿದೆ. ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ಅಂದುಕೊಂಡ ಕಾರ್ಯ ನಿಮ್ಮ ಕೈ ಹಿಡಿಯಲಿದೆ. ಈ ಸಮಯದಲ್ಲಿ ಉತ್ತಮ ಕಾರ್ಯಗಳನ್ನು ನೀವು ಆರಂಭಿಸಬಹುದು. ಕುಟುಂಬದಿಂದ ಸಹಕಾರ ಸಿಗಲಿದೆ. ಎಲ್ಲಾ ವ್ಯವಹಾರಗಳು ನೀವಂದುಕೊಂಡಂತೆ ಆರಂಭವಾಗಲಿದೆ.

Astrology mahalakshmi yoga by mars moon conjunction 2025 these zodic signs get auspicious days

ಕುಂಭ ರಾಶಿ

ಕುಂಭ ರಾಶಿಯವರಿಗೆ ಮಂಗಳ-ಚಂದ್ರ ಸಂಯೋಜನೆ ಪ್ರಯೋಜನಕಾರಿಯಾಗಲಿದೆ. ತಾಯಿ ಲಕ್ಷ್ಮಿ ನಿಮ್ಮ ಮೇಲೆ ವಿಶೇಷವಾಗಿ ದಯೆ ತೋರುತ್ತಾಳೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಬಾಕಿ ಇರುವ ಕೆಲಸ ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ದೀರ್ಘ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+