Shani Budha Yuti 2024: ಶನಿ-ಬುಧರಿಂದ ಕೇಂದ್ರ ದೃಷ್ಟಿ ಯೋಗ- ಯಾವ ರಾಶಿಗೇನು ಫಲ?

ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸುವಲ್ಲಿ ನವಗ್ರಹಗಳ ಪಾತ್ರ ತುಂಬಾ ಮುಖ್ಯವಾಗಿದೆ. ಗ್ರಹಗಳ ಚಲನೆಯ ಆಧಾರದ ಮೇಲೆ ಜ್ಯೋತಿಷ್ಯಶಾಸ್ತ್ರದ ಮೂಲಕ ಒಬ್ಬ ವ್ಯಕ್ತಿಯ ಭವಿಷ್ಯ ಹೇಗಿರಲಿದೆ ಎಂದು ತಿಳಿಯಬಹುದು. ಅಂದಹಾಗೆ ನವಗ್ರಹಗಳಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ವಿಶೇಷ ಸ್ಥಾನವಿದೆ. ಕೆಲ ಗ್ರಹಗಳು ಶುಭ ಫಲಗಳನ್ನು ನೀಡಿದರೆ ಇನ್ನೂ ಕೆಲ ಗ್ರಹಗಳು ಅಶುಭ ಫಲಿತಾಂಶವನ್ನು ನೀಡುತ್ತವೆ. ಗ್ರಹಗಳ ಪ್ರಭಾವ ಆ ರಾಶಿಯೊಂದಿಗಿನ ಅದರ ಸಂಬಂಧದ ಮೇಲೆ ಅವಲಂಭಿತವಾಗಿರುತ್ತದೆ.

ಅಂದಹಾಗೆ ನವಗ್ರಹಗಳು ಸಂಚಾರದ ವೇಳೆ ರಾಶಿಯನ್ನು ಬದಲಾಯಿಸಿದಂತೆ ನಕ್ಷತ್ರಗಳನ್ನೂ ಬದಲಾಯಿಸುತ್ತವೆ. ಗ್ರಹಗಳ ಈ ಸಂಚಾರ 12 ರಾಶಿಗಳ ಮೇಲೆ ಶುಭ ಹಾಗೂ ಅಶುಭ ಫಲಿತಾಂಶವನ್ನು ಬೀರುತ್ತದೆ. ಡಿಸೆಂಬರ್ 7ರಂದು ಶನಿ ಮತ್ತು ಬುಧ ಎರಡೂ ಗ್ರಹಗಳು ಪರಸ್ಪರ 90 ಡಿಗ್ರಿ ಕೋನದಲ್ಲಿ ಚಲಿಸುತ್ತವೆ. ಈ ಸಂಚಾರದಿಂದ ಮೂರು ರಾಶಿಯವರು ಮಾತ್ರ ತುಂಬಾ ಉತ್ತಮ ಫಲವನ್ನು ಪಡೆಯಲಿದ್ದಾರೆ. ಹಾಗಾದರೆ ಆ ರಾಶಿಯವರು ಯಾರೆಂದು ತಿಳಿಯುವ ಮುನ್ನ ಶನಿ ಬುಧ ಯುತಿ ಸಮಯವನ್ನು ತಿಳಿಯೋಣ.

ಬುಧ ಧನು ರಾಶಿ ಮತ್ತು ಶನಿ ಮೀನ ರಾಶಿಯಲ್ಲಿ 13 ಡಿಗ್ರಿಗಳಲ್ಲಿ ಸಾಗಲಿದೆ. ಡಿಸೆಂಬರ್ 7ರ ಶನಿವಾರದಂದು ಬೆಳಿಗ್ಗೆ 07:21ಕ್ಕೆ ಎರಡು ಗ್ರಹಗಳ ನಡುವಿನ ಅಂತರ 13 ಡಿಗ್ರಿಗಳಷ್ಟು ಇರುತ್ತದೆ. ಬುಧ ಮತ್ತು ಶನಿ ಪರಸ್ಪರ 90 ಡಿಗ್ರಿ ಇರುವಾಗ ಕೇಂದ್ರ ದೃಷ್ಟಿ ಯೋಗ ಸೃಷ್ಟಿಯಾಗುತ್ತದೆ. ಹಾಗಾದರೆ ಈ ಯೋಗದ ಶುಭ ಫಲ ಪಡೆಯುವ ರಾಶಿಗಳ ಬಗ್ಗೆ ಈಗ ನೋಡೋಣ.

Astrology kendra drishti yoga formed by shani-mercury on december 7 effect on 12 zodiac signs

ಮೇಷ ರಾಶಿ

ಬುಧ ಮತ್ತು ಶನಿಯ ಕೇಂದ್ರ ದೃಷ್ಟಿಯು ಮೇಷ ರಾಶಿಯವರಿಗೆ ಸಾಕಷ್ಟು ಪ್ರಯೋಜನವನ್ನು ತಂದುಕೊಡಲಿದೆ. ಈ ಸಮಯದಲ್ಲಿ ನೀವು ದೂರದೂರಿಗೆ ಪ್ರವಾಸಕ್ಕೆ ಹೋಗಬಹುದು. ಈ ಹಿಂದೆ ಅನುಭವಿಸಿದ್ದ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಹೊಸ ಕೆಲಸ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಉದ್ಯೋಗ ವ್ಯವಹಾರಗಳಲ್ಲಿ ಮುಂಬರುವ ಸಮಯ ಲಾಭವನ್ನು ತಂದುಕೊಡಲಿದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಲಭ್ಯವಾಗುತ್ತವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.

ಕೆಲಸದಲ್ಲಿ ಹೊಸ ಉತ್ಸಾಹ ಕಂಡು ಬರಲಿದೆ. ನೀವು ನಿಮ್ಮವರಿಗಾಗಿ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ. ಶತ್ರು ಕಾಟ ದೂರವಾಗಲಿದೆ. ಮನೆ, ಭೂಮಿ, ಆಸ್ತಿ ಖರೀದಿಗೆ ಅವಕಾಶ ಸಿಗಲಿದೆ. ಆಳವಾಗಿ ಯೋಚಿಸಿ ಮಾಡಿದ ಕಾರ್ಯಗಳು ಅಧಿಕ ಲಾಭ ತಂದುಕೊಡಲಿದೆ.

Astrology kendra drishti yoga formed by shani-mercury on december 7 effect on 12 zodiac signs

ಕಟಕ ರಾಶಿ

ಕರ್ಕ ರಾಶಿಯವರಿಗೆ ಬುಧ ಮತ್ತು ಶನಿಯ ಕೇಂದ್ರ ದೃಷ್ಟಿ ಯೋಗ ಉತ್ತಮ ಫಲ ನೀಡಲಿದೆ. ಇದರಿಂದಾಗಿ ಕಟಕ ರಾಶಿಯವರು ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಹಣ ಗಳಿಸಲು ಉತ್ತಮ ಮಾರ್ಗಗಳು ಕಂಡು ಬರುತ್ತವೆ. ವ್ಯಾಪಾರದಲ್ಲಿ ನಿಮ್ಮನ್ನು ಪ್ರಶಂಸಿಸಲಾಗುತ್ತದೆ.

ನಿಮಗಿರುವ ತಾಳ್ಮೆ ನಿಮ್ಮನ್ನು ಹೆಚ್ಚು ಬೆಳೆಸುತ್ತದೆ. ನಿಮ್ಮ ಗುಣಗಳು ಇತರರಿಗೆ ಮೆಚ್ಚುಗೆಯಾಗುತ್ತವೆ. ಇದರಿಂದಾಗಿ ನಿಮಗೆ ಹೊಸ ಹೊಸ ಉದ್ಯೋಗದ ಆಫೀರ್ ಬರಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತೀರಿ.

Astrology kendra drishti yoga formed by shani-mercury on december 7 effect on 12 zodiac signs

ಕುಂಭ ರಾಶಿ

ಬುಧ ಮತ್ತು ಶನಿಯ ಕೇಂದ್ರ ದೃಷ್ಟಿ ಕುಂಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ವ್ಯಾಪಾರಸ್ಥರಿಗೆ ಹೆಚ್ಚೆಚ್ಚು ಲಾಭ ತಂದುಕೊಡುವ ಸಮಯವಿದು. ಉದ್ಯೋಗದಲ್ಲಿರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಉತ್ತಮ ವಾತಾವರಣ ಇದ್ದು ನಿಮ್ಮ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಬಲ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+