Horoscope: ಜನವರಿ 4ರಂದು ಆಂಜನೇಯನ ಕೃಪೆಯಿಂದ ಈ ರಾಶಿಗೆ ಅಷ್ಟೈಶ್ವರ್ಯ, ಉದ್ಯೋಗದಲ್ಲಿ ಒಳಿತು
ಜನವರಿ 4 ಕೆಲವು ರಾಶಿಗಳಿಗೆ ಅದ್ಭುತವಾದ ದಿನವಾಗಿದೆ. ಈ ದಿನ ಗ್ರಹಗಳ ರಾಶಿ ಹಾಗೂ ನಕ್ಷತ್ರ ಸಂಚಾರ ಕೆಲ ರಾಶಿಯವರ ಜೀವನದಲ್ಲಿ ಬಾರಿ ಬದಲಾವಣೆ ತರಲಿದೆ. ಈ ದಿನ ಕೆಲ ರಾಶಿಯವರಿಗೆ ಪ್ರಗತಿ, ಆರ್ಥಿಕ ಲಾಭ ಮತ್ತು ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಅಲ್ಲದೆ ಈ ದಿನ ಆರೋಗ್ಯ ಮತ್ತು ಸಾಮಾಜಿಕ ಪ್ರತಿಷ್ಠೆಯ ದೃಷ್ಟಿಯಿಂದ ಮಂಗಳಕರವಾಗಿರುತ್ತದೆ. ಈ ರಾಶಿಗಳಲ್ಲಿ ನೀವೂ ಒಬ್ಬರಾಗಿದ್ದರೆ ಅದೃಷ್ಟವಂತರು ನೀವು. ಹಾಗಾದರೆ ಜನವರಿ 4ರಂದು ಯಾವ ರಾಶಿಯವರು ಅದೃಷ್ಟವಂತರು? ಯಾವ ರಾಶಿಯವರಿಗೆ ಹನುಮನ ಆಶೀರ್ವಾದ ಸಿಗಲಿದೆ ಎಂದು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಜನವರಿ 4 ಬಹಳ ವಿಶೇಷವಾದ ದಿನವಾಗಿದೆ. ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ನೀವು ಕೆಲಸ ಮಾಡುತ್ತಿದ್ದರೆ ಬಡ್ತಿ ಅಥವಾ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.
ಮನೆ ದೇವರಿಗೆ ಪೂಜೆ ಮಾಡಲು ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬಹುದು. ಆಂಜನೇಯನ ಆಶೀರ್ವಾದದಿಂದ ಕೆಲಸದಲ್ಲಿ ಹೊಸ ಉತ್ಸಾಹ ಕಂಡು ಬರಲಿದೆ. ಮೇಲಾಧಿಕಾರಿಗಳಿಂದ ಮೆಚ್ಚುಗೆ ಶತ್ರುಕಾಟ ದೂರವಾಗಲಿದೆ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ.

ವೃಷಭ ರಾಶಿ
ವೃಷಭ ರಾಶಿಯ ಜನರು ಈ ದಿನ ಆರ್ಥಿಕ ಲಾಭವನ್ನು ಪಡೆಯುವಿರಿ. ಯಾವುದೇ ಹಳೆಯ ಕಾಮಗಾರಿ ಬಾಕಿ ಇದ್ದರೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ದಿನ ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ. ನೀವು ದಿನವಿಡೀ ಧನಾತ್ಮಕ ಶಕ್ತಿಯನ್ನು ಅನುಭವಿಸುವಿರಿ. ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚಾಗಲಿದೆ. ಎಲ್ಲಾ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತವೆ.
ವಾರಾಂತ್ಯವಾದ್ದರಿಂದ ವೃಷಭ ರಾಶಿಯವರು ಪ್ರಯಾಣ ಮಾಡಲು ಬಯಸಬಹುದು. ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಕೈಗೊಂಡ ಪ್ರವಾಸ ನೀವಂದುಕೊಂಡಂತೆ ಇರಲಿದೆ. ಪ್ರೇಮ ಜೀವನ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಸಂತೋಷದ ಜೀವನ ನಡೆಸುವಿರಿ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಬಹಳ ಶುಭಕರವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅಭಿವೃದ್ಧಿ ಕಂಡುಬರಲಿದೆ. ಲಾಭದಾಯಕ ಮಾರ್ಗ ತಲುಪುವ ಅವಕಾಶವನ್ನು ನೀವು ಪಡೆಯುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ.
ನಿಮ್ಮ ಆಸೆ ಈಡೇರಲಿದೆ. ಕನಸಿನ ಮನೆ ಪ್ರವೇಶ ಮಾಡಲು ದಿನಗಳು ಹತ್ತಿರವಾಗುತ್ತಿವೆ. ಆಸ್ತಿ ವಾಹನ ಖರೀದಿ ಮಾಡಲು ಸುಸಂದರ್ಭವಿದು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಅಂದುಕೊಂಡ ಕಾರ್ಯಗಳು ವೇಗಪಡೆದುಕೊಳ್ಳಲಿವೆ. ಎಲ್ಲಾ ಕೆಲಸದಲ್ಲಿ ಆಸಕ್ತಿ ಹೊಸ ಉತ್ಸಾಹ ಹೆಚ್ಚಾಗಲಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಪ್ರೀತಿ ಮತ್ತು ಸಂಬಂಧಗಳಲ್ಲಿ ಮಾಧುರ್ಯವನ್ನು ತರಲಿದೆ. ನೀವು ಯಾರೊಂದಿಗಾದರೂ ತಪ್ಪು ತಿಳುವಳಿಕೆಯನ್ನು ಹೊಂದಿದ್ದರೆ ಅದು ಪರಿಹರಿಸಲ್ಪಡುತ್ತದೆ. ಹೊಸ ಅವಕಾಶಗಳು ನಿಮ್ಮ ಬಾಗಿಲನ್ನು ತಟ್ಟುತ್ತವೆ. ಇವುಗಳನ್ನು ಗುರುತಿಸಿ ಸರಿಯಾದ ಸಮಯದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಗಲಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ. ನೀವು ಪ್ರವಾಸವನ್ನು ಯೋಜಿಸುತ್ತಿದ್ದರೆ, ಅದು ಯಶಸ್ವಿಯಾಗುತ್ತದೆ. ಮಾಡುವ ಕಾರ್ಯಗಳು ಲಾಭದಾಯಕವಾಗಿರುತ್ತವೆ. ನಿಮ್ಮಲ್ಲಿ ದಿನವಿಡೀ ಧನಾತ್ಮಕ ಶಕ್ತಿ ಹೆಚ್ಚಾಗಲಿದೆ. ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.












Click it and Unblock the Notifications