Horoscope: ಡಿಸೆಂಬರ್ 22 ಅದೃಷ್ಟ ರಾಶಿಗಳು- ಇವರಿಗೆ ಸೂರ್ಯದೇವನ ಕೃಪೆಯಿಂದ ಪ್ರಗತಿ
ಡಿಸೆಂಬರ್ 22 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ 5 ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯುತ್ತದೆ. ಈ ರಾಶಿಯವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ, ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ ಸಿಗಲಿದೆ. ಅಲ್ಲದೆ ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿ ಬರಲಿದೆ. ಈ ದಿನ ಹೊಸ ಅವಕಾಶಗಳು ಮತ್ತು ಸಂತೋಷದಿಂದ ಕೂಡಿರಲಿದೆ. ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಡಿಸೆಂಬರ್ 22 ತುಂಬಾ ಶುಭಕರವಾಗಿರುತ್ತದೆ. ಈ ದಿನ ವೃತ್ತಿಜೀವನದಲ್ಲಿ ಪ್ರಗತಿಯೊಂದಿಗೆ, ಆರ್ಥಿಕ ಸ್ಥಿತಿಯೂ ಬಲಗೊಳ್ಳುತ್ತದೆ. ನಿಮ್ಮ ಕಠಿಣ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ. ಹೊಸ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆಯಿದೆ. ಕೆಲಸದ ಒತ್ತಡ ಕಡಿಮೆಯಾಗಲಿದೆ. ಅಂದುಕೊಂಡ ಕಾರ್ಯಗಳು ಸುಲಭವಾಗಿ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳಲಿದೆ.
ನಿಮ್ಮ ಕನಸು ನನಸಾಗುವ ಸುಸಂದರ್ಭ ಇದಾಗಿದೆ. ಹೀಗಾಗಿ ಸೂರ್ಯನನ್ನು ಆರಾಧನೆ ಮಾಡಿ. ಸೂರ್ಯ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿಯಿಂದ ಬೇಡಿಕೊಳ್ಳುವುದರಿಂದ ನಿಮ್ಮ ಆಸೆಗಳು ಈಡೇರಲಿವೆ. ಜೀವನದಲ್ಲಿ ಬರುವ ತೊಂದರೆಗಳು ಸೂರ್ಯ ದೇವನ ಕೃಪೆಯಿಂದ ದೂರವಾಗುತ್ತವೆ.

ವೃಷಭ ರಾಶಿ
ಈ ದಿನವು ವೃಷಭ ರಾಶಿಯವರಿಗೆ ಸಂತೋಷವನ್ನು ತರುತ್ತದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಕುಟುಂಬದ ವಾತಾವರಣ ಆಹ್ಲಾದಕರವಾಗಿರುತ್ತದೆ. ಹೊಸ ವಿಚಾರದೊಂದಿಗೆ ಕೆಲಸ ಪ್ರಾರಂಭಿಸುವಿರಿ. ಇದು ಭವಿಷ್ಯದಲ್ಲಿ ದೊಡ್ಡ ಪ್ರಯೋಜನಗಳನ್ನು ನೀಡುತ್ತದೆ. ವಾರಾಂತ್ಯದ ಮೋಜು ಮಸ್ತಿಗಾಗಿ ಸಮಯ ನೀಡುವಿರಿ.
ಪಟ್ಟ ಶ್ರಮಕ್ಕೆ ಫಲ ನೀಡುವ ಸಮಯ ಇದಾಗಿದೆ. ಕುಟುಂಬಸ್ಥರೊಂದಿಗೆ ಕಾಲ ಕಳೆಯಬೇಕು ಎನ್ನುವ ನಿಮ್ಮ ಆಸೆ ಇದೇ ತಿಂಗಳು ಈಡೇರಲಿದೆ. ಇದಕ್ಕಾಗಿ ನೀವು ಕೈಗೊಂಡ ಪ್ರವಾಸ ಯಶಸ್ವಿಯಾಗಲಿದೆ. ಶತ್ರುಗಳು ದೂರವಾಗುತ್ತಾರೆ. ಸ್ನೇಹಿತರ ಬಳಗ ದೊಡ್ಡದಾಗಲಿದೆ. ನಿಮ್ಮ ಎಲ್ಲಾ ಕಷ್ಟಗಳಿಗೆ ಈ ದಿನ ಪರಿಹಾರ ಸಿಗಲಿದೆ.

ಸಿಂಹ
ಸಿಂಹ ರಾಶಿಯವರಿಗೆ ಈ ದಿನ ಅದೃಷ್ಟದಾಯಕವಾಗಿರುತ್ತದೆ. ಬಡ್ತಿ ಜತೆಗೆ ಸಾಲ ಕೊಟ್ಟ ಹಣ ಸಿಗುವ ಸಾಧ್ಯತೆ ಇದೆ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ಹೊಸ ಅವಕಾಶಗಳು ನಿಮ್ಮ ಬಾಗಿಲನ್ನು ತಟ್ಟುತ್ತವೆ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗಲಿದೆ. ಕೆಲಸದ ಹೊರೆ ಕಡಿಮೆಯಾಗಿ ನೀವು ನಿಮಗಾಗಿ ಕೊಂಚ ಸಮಯ ನೀಡುವಿರಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭವಿದ್ದು ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಅಲ್ಲದೆ ನಿಮ್ಮ ಹೊಸ ಯೋಜನೆಗಳು ಸಹ ಯಶಸ್ವಿಯಾಗಿ ಪ್ರಾರಂಭವಾಗುತ್ತವೆ. ವ್ಯಾಪಾರದಲ್ಲಿ ಲಾಭ, ಉದ್ಯಮದಲ್ಲಿ ಪ್ರಗತಿ ಕಂಡು ಬರಲಿದೆ. ಈ ದಿನ ನಿಮಗೆ ಲಾಭದಾಯಕ ದಿನವಾಗಿದೆ.

ಮಕರ ರಾಶಿ
ಡಿಸೆಂಬರ್ 22 ಮಕರ ರಾಶಿಯವರಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹಾರವಾಗುತ್ತವೆ. ಹೂಡಿಕೆಯಿಂದ ಹೆಚ್ಚಿನ ಲಾಭ ಸಿಗಲಿದೆ. ನಿಮ್ಮ ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ಹೊಸ ಶಕ್ತಿಯನ್ನು ಅನುಭವಿಸುವಿರಿ.












Click it and Unblock the Notifications