Horoscope: ಡಿಸೆಂಬರ್ 20ರಂದು ಖುಲಾಯಿಸಲಿದೆ ಈ 5 ರಾಶಿಯವರ ಅದೃಷ್ಟ- ಬಡ್ತಿ, ಖ್ಯಾತಿ, ಸಂಪತ್ತು

ಡಿಸೆಂಬರ್ 20 ಕೆಲವು ರಾಶಿಗಳಿಗೆ ಬಹಳ ವಿಶೇಷ ಮತ್ತು ಮಂಗಳಕರವಾಗಿದೆ. ಈ ದಿನ ಗ್ರಹಗಳ ಸ್ಥಾನ ಕೆಲ ರಾಶಿಗಳ ಅದೃಷ್ಟವನ್ನು ಬೆಳಗಿಸಲಿವೆ. ಇದರಿಂದ ವೃತ್ತಿ, ಆರ್ಥಿಕ ಪರಿಸ್ಥಿತಿ ಮತ್ತು ಸಂಬಂಧಗಳ ವಿಷಯಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಮೇಷ, ವೃಷಭ, ಸಿಂಹ, ತುಲಾ ಮತ್ತು ಮಕರ ರಾಶಿಯವರಿಗೆ ಈ ದಿನ ಶುಭ ತರಲಿದೆ. ನೀವು ಸಹ ಈ ರಾಶಿಗಳಲ್ಲಿ ಒಬ್ಬರಾಗಿದ್ದರೆ, ನಿಮ್ಮ ಜೀವನದಲ್ಲಿ ಬರುವ ಒಳ್ಳೆಯ ಬದಲಾವಣೆಗಳನ್ನು ಸ್ವಾಗತಿಸಲು ಸಿದ್ಧರಾಗಿ.

Astrology december 20 lucky zodiac signs promotion at work increase fame wealth

ಮೇಷ ರಾಶಿ(Aries)

ಮೇಷ ರಾಶಿಯವರಿಗೆ ಡಿಸೆಂಬರ್ 20 ಅತ್ಯಂತ ಶುಭ ದಿನವಾಗಿದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ದೊಡ್ಡ ಅವಕಾಶವನ್ನು ಪಡೆಯುವಿರಿ. ಇದು ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಕಾರಣವಾಗುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವ ಲಕ್ಷಣಗಳಿವೆ. ಕೌಟುಂಬಿಕ ಸಂಬಂಧಗಳಲ್ಲಿ ಮಾಧುರ್ಯವಿರುತ್ತದೆ. ಇದರಿಂದಾಗಿ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ.

ವಿಶೇಷವಾಗಿ ಸಾಲಗಳನ್ನು ತೀರಿಸುವಿರಿ. ನಿಮ್ಮ ಆತ್ಮೀಯರ ಬಗ್ಗೆ ಪ್ರೀತಿ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಇದ್ದ ಮನಸ್ತಾಪಗಳು ದೂರವಾಗಲಿದೆ. ಪ್ರವಾಸ ಹೋಗುವ ಯೋಜನೆ ಕೈಗೂಡಲಿದೆ. ಧಾರ್ಮಿಕ ಸ್ಥಳಗಳಿಗೆ ನೀವು ಭೇಟಿ ನೀಡಬಹುದು. ಇದು ನಿಮ್ಮ ಮನಸ್ಸನ್ನು ಉತ್ಸಾಹಗೊಳಿಸುತ್ತದೆ.

Astrology december 20 lucky zodiac signs promotion at work increase fame wealth

ವೃಷಭ ರಾಶಿ (Taurus)

ಈ ದಿನ ವೃಷಭ ರಾಶಿಯವರಿಗೆ ಯಶಸ್ಸು ಮತ್ತು ಆಹ್ಲಾದಕರ ಅನುಭವಗಳನ್ನು ತರಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಪಡೆಯುವಿರಿ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನೀವು ಈ ದಿನ ಹೆಚ್ಚು ಶಕ್ತಿಯುತ ಮತ್ತು ಸಂತೋಷವನ್ನು ಅನುಭವಿಸುವಿರಿ.

ಈ ದಿನ ವೃಷಭ ರಾಶಿಯವರಿಗೆ ಕೆಲಸದ ವಿಚಾರದಲ್ಲಿ ಅತ್ಯಂತ ಶುಭ ದಿನವಾಗಿದೆ. ನೀವು ಕೈಗೊಂಡ ಕಾರ್ಯಗಳು ಇಂದು ಯಶಸ್ವಿಯಾಗಲಿವೆ. ಉದ್ಯೋಗದಲ್ಲಿ ಸಂಬಳ ಹೆಚ್ಚಾಗಬಹುದು. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ನಿಮ್ಮೊಂದಿಗೆ ಕೆಲಸದಲ್ಲಿ ಕೈ ಜೋಡಿಸಿ ನಿಮ್ಮ ಬೆಳವಣಿಗೆಗೆ ಶ್ರಮಿಸುತ್ತಾರೆ.

Astrology december 20 lucky zodiac signs promotion at work increase fame wealth

ಸಿಂಹ ರಾಶಿ(Leo)

ಸಿಂಹ ರಾಶಿಯವರಿಗೆ ಈ ದಿನ ಉದ್ಯೋಗದಲ್ಲಿ ಬಡ್ತಿ ಸಿಗುವ ಲಕ್ಷಣ ಇದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಅದು ಈ ದಿನ ಸಾಧ್ಯವಾಗಲಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣವನ್ನು ಕಾಣುವಿರಿ. ಇದಲ್ಲದೆ ಹೊಸ ಮತ್ತು ವಿಶೇಷ ವ್ಯಕ್ತಿಗಳ ಭೇಟಿ ನಿಮ್ಮ ಜೀವನದಲ್ಲಿ ಹೊಸ ಶಕ್ತಿಯನ್ನು ತರಲಿದೆ.

ನಿಮ್ಮ ಮೇಲಿನ ನಂಬಿಕೆ ಕುಟುಂಬದಲ್ಲಿ ಹೆಚ್ಚಾಗುತ್ತದೆ. ಪ್ರೀಮಿಗಳು ಇಂದು ತಮ್ಮ ಪ್ರೇಮ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸಲು ಉತ್ತಮ ಸಮಯವಾಗಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯುವ ಶ್ರಮ ಫಲ ನೀಡಲಿದೆ. ಹೊಸ ವರ್ಷಕ್ಕೆ ಇಂದು ನೀವು ಮಾಡುವ ಸಂಕಲ್ಪ ಯಶಸ್ಸನ್ನು ಕಾಣಲಿದೆ.

Astrology december 20 lucky zodiac signs promotion at work increase fame wealth

ತುಲಾ ರಾಶಿ(Libra)

ಈ ದಿನ ತುಲಾ ರಾಶಿಯವರಿಗೆ ಪ್ರಯಾಣ ಮಾಡಲು ಶುಭಕರವಾಗಿರುತ್ತದೆ. ಈ ಪ್ರಯಾಣ ನಿಮಗೆ ಮಾನಸಿಕ ಶಾಂತಿ ಮತ್ತು ಹೊಸ ಅವಕಾಶಗಳನ್ನು ನೀಡುತ್ತದೆ. ಹಣದ ಹೊಸ ಮೂಲಗಳನ್ನು ಹುಡುಕುವಿರಿ., ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಸಂಬಂಧಿಕರಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಗಳು ಇವೆ. ಇದು ನಿಮ್ಮ ದಿನವನ್ನು ವಿಶೇಷವಾಗಿಸುತ್ತದೆ.

ತುಲಾ ರಾಶಿಯವರ ಕುಟುಂಬದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ದಿನ ಹೆಚ್ಚು ಹಣ ಗಳಿಸುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ವ್ಯಾಪಾರ ಜೀವನ ಸುಧಾರಣೆ ಕಾಣಲಿದೆ.

Astrology december 20 lucky zodiac signs promotion at work increase fame wealth

ಮಕರ ರಾಶಿ(Capricorn)

ಮಕರ ರಾಶಿಯವರಿಗೆ ಈ ದಿನ ಲಾಭ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ನೀಡುತ್ತದೆ. ಇದರಿಂದ ಮಾನಸಿಕ ಶಾಂತಿ ಸಿಗಲಿದೆ. ನೀವು ಪ್ರತಿ ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ. ನೀವು ದೀರ್ಘಕಾಲದಿಂದ ಬೇರ್ಪಟ್ಟ ಸ್ನೇಹಿತರನ್ನು ಭೇಟಿಯಾಗುವಿರಿ. ಅದು ನಿಮಗೆ ಸಂತೋಷ ಮತ್ತು ಹಳೆಯ ನೆನಪುಗಳನ್ನು ಮರುಕಳಿಸುತ್ತದೆ.

ಮಕರ ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಇರಲಿದೆ. ಇದರಿಂದ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳಾಗಲಿವೆ. ವಿಶೇಷವಾಗಿ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಅಂದುಕೊಂಡ ಕಾರ್ಯಗಳು ಕೈ ಹಿಡಿದು ಸಂಪತ್ತು ವೃದ್ಧುಯಾಗಲಿದೆ. ಸಾಲದ ಹಣ ವಾಪಸ್ ಬರಲಿದೆ. ನಿಮ್ಮ ಜೀವನದಲ್ಲಿ ಉಂಟಾಗುವ ಸಮಸ್ಯೆಗಳು ದೂರವಾಗುತ್ತವೆ. ಮನಸ್ತಾಪಗಳಿಗೆ ಅಂತ್ಯ ಹಾಡುವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+