Chandra Grahan 2024: ಸೆಪ್ಟೆಂಬರ್ 18ರಂದು ವರ್ಷದ 2ನೇ ಚಂದ್ರಗ್ರಹಣ: ಈ 3 ರಾಶಿಯವರು ಎಚ್ಚರ!
ಗ್ರಹಣಗಳು ಆಕಾಶದಲ್ಲಿ ನಡೆಯುವ ಅಪರೂಪದ ವಿದ್ಯಮಾನಗಳಾಗಿವೆ. ಪ್ರತಿ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸುತ್ತವೆ. 2 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು. ಈ ರೀತಿಯಾಗಿ ಈ ವರ್ಷ ಈಗಾಗಲೇ 1 ಸೂರ್ಯಗ್ರಹಣ ಮತ್ತು 1 ಚಂದ್ರಗ್ರಹಣ ಸಂಭವಿಸಿದೆ.
ಈ ವರ್ಷದ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18ರಂದು ಸಂಭವಿಸಲಿದೆ. ಈ ಚಂದ್ರಗ್ರಹಣ ಭಾಗಶಃ ಚಂದ್ರಗ್ರಹಣವಾಗಿರುತ್ತದೆ. ಹೀಗಾಗಿ ಈ ದಿನ ಚಂದ್ರನು ಸಾಮಾನ್ಯಕ್ಕಿಂತ ಹೆಚ್ಚು ಪ್ರಕಾಶಮಾನವಾಗಿರುತ್ತಾನೆ. ಆದರೆ ಭಾರತದಲ್ಲಿ ಈ ಚಂದ್ರಗ್ರಹಣ ಕಾಣಿಸುವುದಿಲ್ಲ. ಏಕೆಂದರೆ ಇದು ಸೆಪ್ಟೆಂಬರ್ 18 ಬೆಳಿಗ್ಗೆ 6.11 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಗ್ಗೆ 10.17 ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ ಭಾರತದಲ್ಲಿ ಬೆಳಗಿನ ಅವಧಿ ಇದು ಸಂಭವಿಸುವುದರಿಂದ ಗೋಚರಿಸುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಪರಿಣಾಮ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ವಿಶೇಷವಾಗಿ 3 ರಾಶಿಯ ಜನರು ಈ ಚಂದ್ರ ಗ್ರಹಣದಿಂದ ಬಹಳ ಜಾಗರೂಕರಾಗಿರಬೇಕು. ಹಾಗಾದರೆ 2024ರ ಎರಡನೇ ಚಂದ್ರಗ್ರಹಣದ ಕಾರಣದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂಬುದನ್ನು ಈಗ ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಚಂದ್ರಗ್ರಹಣ ಸ್ವಲ್ಪ ಕೆಟ್ಟದು. ಪ್ರಮುಖ ಕೆಲಸಗಳಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಲ್ಲ.
ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚುತ್ತದೆ ಮತ್ತು ನೀವು ಸಾಮಾನ್ಯ ದಿನಗಳಿಗಿಂತ ಹೆಚ್ಚು ಜಾಗರೂಕರಾಗಿರಬೇಕು. ವ್ಯಾಪಾರಿಗಳು ಇತರರನ್ನು ಕುರುಡಾಗಿ ನಂಬುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬರುವ ಚಂದ್ರಗ್ರಹಣ ಒಳ್ಳೆಯದಲ್ಲ. ನೀವು ಕುಟುಂಬದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾತನ್ನು ನಿಯಂತ್ರಿಸುವುದು ತುಂಬಾ ಒಳ್ಲೆಯದು. ಇಲ್ಲದಿದ್ದರೆ ನೀವು ಮಾತಿನೊಂದಿಗೆ ಅನೇಕ ವಾದಗಳಿಗೆ ಸಿಲುಕುತ್ತೀರಿ.
ಅಪಘಾತವಾಗುವ ಸಂಭವವಿರುವುದರಿಂದ ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನೀವು ಖಿನ್ನತೆಯಿಂದ ಬಳಲಬಹುದು. ಅಲ್ಲದೆ ಈ ಸಮಯದಲ್ಲಿ ನಿಮ್ಮ ಯಾವುದೇ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

ಕನ್ಯಾ ರಾಶಿ
2024ರ ಎರಡನೇ ಚಂದ್ರಗ್ರಹಣ ಕನ್ಯಾ ರಾಶಿಯವರಿಗೆ ಒಳ್ಳೆಯದಲ್ಲ. ಆರೋಗ್ಯದ ವಿಷಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಜಾಗರೂಕರಾಗಿರಬೇಕು. ನಿರ್ಲಕ್ಷ್ಯ ದೊಡ್ಡ ವೈದ್ಯಕೀಯ ಬಿಲ್ಗಳಿಗೆ ಕಾರಣವಾಗಬಹುದು.
ಯಾರಿಂದಲೂ ಸಾಲ ಮಾಡಬೇಡಿ. ಈ ಸಮಯದಲ್ಲಿ, ದೂರದ ಪ್ರಯಾಣವನ್ನು ಸಹ ತಪ್ಪಿಸಬೇಕು. ಕೆಟ್ಟ ಪ್ರಭಾವವನ್ನು ತಪ್ಪಿಸಲು ಈ ರಾಶಿಗಳು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications