Chandra Gochar 2025: ಚಂದ್ರ ಗೋಚಾರ- ಈ ರಾಶಿಯವರ ಮನೆಗೆ ಅದೃಷ್ಟ ಲಕ್ಷ್ಮೀ ಆಗಮನ
ಗ್ರಹಗಳು ಕಾಲ ಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸಿದಾಗ ರಾಶಿಗಳನ್ನು ಬದಲಾಯಿಸುತ್ತವೆ. ನವಗ್ರಹಗಳಲ್ಲಿ ವೇಗವಾಗಿ ರಾಶಿ ಬದಲಾಯಿಸುವ ಚಂದ್ರನು ಶನಿವಾರ ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರ ಗ್ರಹ ಒಂದು ರಾಶಿಯಲ್ಲಿ ಎರಡುವರೆ ದಿನ ಇರುತ್ತದೆ. ಪ್ರಸ್ತುತ ಸಿಂಹ ರಾಶಿಯಲ್ಲಿರುವ ಚಂದ್ರ ಗ್ರಹ ಜನವರಿ 18ರಂದು ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಚಂದ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಶನಿವಾರ ರಾತ್ರಿ 9:28ಕ್ಕೆ ಸಾಗಲಿದ್ದಾನೆ. ಇದು ಕೆಲ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ಹಾಗಾದರೆ ಈ ಸಂಚಾರದಿಂದ ಯಾವ ರಾಶಿಯವರು ಶುಭ ಫಲವನ್ನು ಪಡೆಯಲಿದ್ದಾರೆ ಎಮದು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಚಂದ್ರನ ಸಂಚಾರ ಫಲಪ್ರದವಾಗಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ವ್ಯವಹಾರದಲ್ಲಿ ನಡೆಯುತ್ತಿರುವ ತೊಂದರೆಗಳು ದೂರವಾಗಲಿದೆ. ಯಶಸ್ಸನ್ನು ಸಾಧಿಸಲು ನೀವು ಹೊಸ ಆರಂಭವನ್ನು ಮಾಡಲು ಸಾಧ್ಯವಾಗುತ್ತದೆ. ಆದರೆ ನೀವು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಬಹುದು. ಸಂಬಂಧಗಳು ಸುಧಾರಿಸುತ್ತವೆ. ವಾದಗಳಿಂದ ದೂರವಿರುವಿರಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಸಮಯ ಚೆನ್ನಾಗಿರುತ್ತದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದೆ. ಅಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ಆಸಕ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಉತ್ತಮ ಲಾಭ ದೊರಕುವುದರಿಂದ ಸಂತೋಷ ಹೆಚ್ಚಾಗಲಿದೆ. ಈ ರಾಶಿಗೆ ಸೇರಿದ ಜನರು ಕೆಲಸವನ್ನು ಹುಡುಕುತ್ತಿದ್ದರೆ, ನಿಮ್ಮ ಪ್ರಯತ್ನಗಳು ಫಲ ನೀಡಲಿದೆ. ನೀವು ಯಾವುದಾದರು ಹೊಸ ಕೆಲಸ ಅಥವಾ ವ್ಯಾಪಾರವನ್ನು ಶುರು ಮಾಡಬೇಕೆಂದಿದ್ದರೆ, ಇದಕ್ಕೆ ಉತ್ತಮ ಸಮಯ ಇದಾಗಿದೆ. ನಿಮ್ಮ ಆರೋಗ್ಯ ಸುಧಾರಿಸಲಿದೆ.

ಮಕರ ರಾಶಿ
ಚಂದ್ರ ಗೋಚಾರ ಮಕರ ರಾಶಿಯವರಿಗೆ ಅದ್ಭುತ ಫಲ ನೀಡಲಿದೆ. ಯಶಸ್ಸು ಮತ್ತು ಸಂತೋಷ ಸಿಗಲಿದೆ. ನಿಮ್ಮ ಮನೋಬಲ ಹೆಚ್ಚಾಗುವುದು. ಸಾಮಾಜಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಪ್ರತಿಷ್ಠೆ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಕೆಲಸ ಮಾಡುವ ಜನರು ಹೊಸ ಜವಾಬ್ದಾರಿಗಳನ್ನು ಪಡೆಯುವರು. ಮನೆಯಲ್ಲಿ ಶುಭ ಮತ್ತು ಮಂಗಳಕಾರ್ಯ ನಡೆಯುವ ಸಾಧ್ಯತೆ ಇದೆ.

ಮೀನ ರಾಶಿ
ಮೀನ ರಾಶಿಯವರಿಗೆ ಚಂದ್ರನ ಸಂಚಾರ ಪ್ರಯೋಜನಕಾರಿಯಾಗಲಿದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ನೀವು ಹೊಸ ಯೋಜನೆಗಳನ್ನು ಮಾಡಬಹುದು. ಉದ್ಯೋಗದಲ್ಲಿರುವವರಿಗೆ ಸಮಯ ಉತ್ತಮವಾಗಿದೆ. ಸಂಬಂಧದಲ್ಲಿ ಮಾಧುರ್ಯ ಇರಲಿದ್ದು ವಿದೇಶಕ್ಕೆ ಹೋಗಲು ಯೋಜಿಸಬಹುದು. ಮನೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications