Budhaditya Rajyoga 2024: 1 ವರ್ಷದ ನಂತರ ಸಿಂಹ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ: ಈ 3 ರಾಶಿಗಳಿಗೆ ಜಾಕ್ ಪಾಟ್
ಸಿಂಹ ರಾಶಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಐದನೇ ರಾಶಿಯಾದ ಸಿಂಹದಲ್ಲಿ ಆಗಸ್ಟ್ ತಿಂಗಳು ಹಲವಾರು ಗ್ರಹಗಳು ಸಂಚಾರ ಮಾಡಲಿವೆ. ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ತಿಂಗಳಿಗೊಮ್ಮೆ ರಾಶಿಗಳನ್ನು ಬದಲಾಯಿಸುವ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದೆ.
ಆ ರೀತಿಯಲ್ಲಿ ಸೂರ್ಯ ಸದ್ಯ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದೆ. ಆಗಸ್ಟ್ 16 ರಂದು ಸೂರ್ಯನು ತನ್ನದೇ ಆದ ರಾಶಿಯಾದ ಸಿಂಹವನ್ನು ಪ್ರವೇಶಿಸುತ್ತದೆ. ಗ್ರಹಗಳ ರಾಜಕುಮಾರ ಬುಧ ಈಗಾಗಲೇ ಈ ಸಿಂಹ ರಾಶಿಯಲ್ಲಿ ಸಂಚರಿಸುತ್ತಿದೆ. ಸಿಂಹರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗದಿಂದ ಬುಧಾದಿತ್ಯ ರಾಜಯೋಗ ಉಂಟಾಗುವುದು.
ಈ ರಾಜಯೋಗದ ಪ್ರಭಾವವನ್ನು ಎಲ್ಲಾ ರಾಶಿಯವರಲ್ಲೂ ಕಾಣಬಹುದಾದರೂ ಈ ಯೋಗ ಕೆಲವು ರಾಶಿಯವರಿಗೆ ಹಲವು ವಿಶೇಷ ಲಾಭಗಳನ್ನು ನೀಡುತ್ತದೆ. ಹಾಗಾದರೆ ಈಗ ಸಿಂಹ ರಾಶಿಯಲ್ಲಿ ಬುಧಾದಿತ್ಯ ರಾಜಯೋಗದಿಂದ ಯಾರಿಗೆ ಅದೃಷ್ಟ ಒಲಿಯಲಿದೆ ಎಂದು ನೋಡೋಣ.

ಮೇಷ ರಾಶಿ
ಮೇಷ ರಾಶಿಯ 5 ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಇದು ಮೇಷ ರಾಶಿಯವರ ಜನರ ಜೀವನದಲ್ಲಿ ಉತ್ತಮ ಪ್ರಗತಿಯನ್ನು ತರಲಿದೆ. ಮೇಷ ರಾಶಿಯವರ ಆತ್ಮವಿಶ್ವಾಸ ಮತ್ತು ಧೈರ್ಯ ಈ ಯೋಗದಿಂದ ಹೆಚ್ಚಾಗಲಿದೆ. ಈ ಸಮಯದಲ್ಲಿ ಬಹಳಷ್ಟು ಹಣವನ್ನು ಗಳಿಸುವ ಅವಕಾಶವಿರುತ್ತದೆ.
ವೃತ್ತಿಪರವಾಗಿ ನಿಮ್ಮ ಕೆಲಸ ಮೇಲಾಧಿಕಾರಿಗಳ ಮೆಚ್ಚುಗೆಯನ್ನು ಪಡೆಯಲಿದೆ. ನಿಮ್ಮ ಗುರಿಗಳನ್ನು ನೀವು ಸಾಧಿಸುವಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಹೂಡಿಕೆಯಿಂದ ಲಾಭವನ್ನೂ ಪಡೆಯುತ್ತೀರಿ. ಸಂಗಾತಿಯೊಂದಿಗಿನ ಸಂಬಂಧವು ಸಂತೋಷವಾಗಿರುತ್ತದೆ. ಇಲ್ಲಿಯವರೆಗಿನ ಸಮಸ್ಯೆಗಳು ಕೊನೆಗೊಳ್ಳುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.

ಮಿಥುನ ರಾಶಿ
ಮಿಥುನ 3ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗವನ್ನು ರಚಿಸುತ್ತದೆ. ಹೀಗಾಗಿ ಈ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ದೊರೆಯಲಿದೆ. ಕೆಲವರಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶವೂ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಸಿಗಲಿದೆ. ಆರ್ಥಿಕವಾಗಿ ಉತ್ತಮ ಸಮಯ ಇದಾಗಿದೆ. ಸಾಕಷ್ಟು ಹಣ ಗಳಿಸುವ ಅವಕಾಶವಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಆಹ್ಲಾದಕರವಾಗಿರುತ್ತದೆ.

ಸಿಂಹ ರಾಶಿ
ಬುಧಾದಿತ್ಯ ರಾಜಯೋಗ ಸಿಂಹ ರಾಶಿಯ ಮೊದಲ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದ ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ದೊರೆಯಲಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ನಿಮ್ಮದಾಗಲಿದೆ. ವಿದೇಶಕ್ಕೆ ಹೋಗುವ ಆಸೆ ಇದ್ದರೆ ಈ ಅವಧಿಯಲ್ಲಿ ಅವಕಾಶಗಳು ಸಿಗುತ್ತವೆ.
ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾರೆ. ಆದಾಗ್ಯೂ, ಎಚ್ಚರಿಕೆಯಿಂದ ಇರುವುದು ಉತ್ತಮ. ಏಕೆಂದರೆ ಒಂದು ಸಣ್ಣ ತಪ್ಪು ಕೂಡ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಆರ್ಥಿಕ ಸ್ಥಿತಿಯಲ್ಲಿ ಏರಿಕೆ ಕಂಡುಬರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಹೀಗಾಗಿ ನೀವು ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ಅನುಭವಿಗಳನ್ನು ಸಂಪರ್ಕಿಸಿ)












Click it and Unblock the Notifications