ಆಷಾಢ ಮಾಸದ ವಾರದ ಪಂಚಾಂಗ: ಆಗಸ್ಟ್ 2 ರಿಂದ 8
ಆಷಾಢ ಮಾಸದ ಆಗಸ್ಟ್ 2ರಿಂದ 8ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಆಗಸ್ಟ್ 2. ರವಿವಾರ : ಶತತಾರಾ ನಕ್ಷತ್ರ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಆ.3. ಸೋಮವಾರ : ಪೂರ್ವಾಭಾದ್ರಪದ. ಸಂಕಷ್ಟಿ ಚತುರ್ಥಿ. ಆಶ್ಲೇಷಾ ಮಳೆ ಮಧ್ಯಾಹ್ನದಿಂದ ಆರಂಭ. ಆಸ್ತಿ-ಪಾಸ್ತಿ ಕೊಳ್ಳಲು ಶುಭ. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಆ.4. ಮಂಗಳವಾರ : ಉತ್ತರಾಭಾದ್ರಪದಾ. ಸೀರೆ ಕಾರ್ಯಕ್ರಮಕ್ಕೆ ಶುಭ. ದೂರ ಪ್ರಯಾಣದಿಂದ ಯಶಸ್ಸು.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಆ.5. ಬುಧವಾರ : ರೇವತಿ. ಕಚೇರಿಯಲ್ಲಿನ ಮುಖ್ಯ ಕೆಲಸಕ್ಕೆ ಮತ್ತು ಹೊಸ ವಸ್ತುಗಳನ್ನು ಖರೀದಿಸಲು ಉತ್ತಮ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಆ.6. ಗುರುವಾರ : ಅಶ್ವಿನಿ. ಕೃಷಿಗೆ ಸಂಬಂಧಿಸಿದ ಕೆಲಸ ಕಾರ್ಯ ಮಾಡಿಕೊಳ್ಳಲು ಮತ್ತು ಬ್ಯಾಂಕಿನ ವಹಿವಾಟು ಆರಂಭಿಸಲು ಸೂಕ್ತ ದಿನ. ದೂರ ಪ್ರಯಾಣದಿಂದ ಶುಭ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಆ.7. ಶುಕ್ರವಾರ : ಭರಣಿ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಆಗಸ್ಟ್.8. ಶನಿವಾರ : ಕೃತ್ತಿಕಾ. ಎರಡನೇ ಶನಿವಾರ. ವಿಶ್ವ ಹಿರಿಯ ನಾಗರಿಕರ ದಿನ. ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಉತ್ತಮ.
ಈ ವಾರದ ಗ್ರಹಗತಿ : ಕರ್ಕ: ಸೂರ್ಯ+ಮಂಗಳ+ಬುಧ. ಸಿಂಹ: ಶುಕ್ರ+ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಕುಂಭ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಮೀನ: ಕೇತು.












Click it and Unblock the Notifications