ದ್ವಾದಶ ರಾಶಿಗಳ ಸೆಪ್ಟೆಂಬರ್ ತಿಂಗಳ ಭವಿಷ್ಯ: ಮೇಷ- ಕುಟುಂಬ-ಕೆಲಸಕ್ಕೂ ಪ್ರಾಮುಖ್ಯ ನೀಡಿ

Posted By:
Subscribe to Oneindia Kannada

ಈ ತಿಂಗಳು ಎಲ್ಲ ಸಲೀಸಾಗಿ ಸಾಗುತ್ತದೆ. ಆದರೆ ಮಧ್ಯೆ ಕೆಲವು ಸವಾಲುಗಳು ಎದುರಾಗುತ್ತವೆ. ನಿಮ್ಮ ಬದುಕಿನ ಆದ್ಯತೆಗಳನ್ನು ತುಂಬ ಚೆನ್ನಾಗಿ ನಿರ್ಧರಿಸುತ್ತೀರಿ. ಮಾಡುವ ಕೆಲಸಗಳ ಬಗ್ಗೆ ಗಮನ ಹೆಚ್ಚು ಕೊಡುವುದರಿಂದ ಎಲ್ಲ ರಂಗದಲ್ಲೂ ಯಶಸ್ಸು ಸಾಧಿಸಲು ಸಾಧ್ಯ. ದುಡಿಮೆಯೇ ನಿಮ್ಮ ಬಹುಪಾಲು ಸಮಯವನ್ನು ತೆಗೆದುಕೊಂಡು ಬಿಡುತ್ತದೆ. ನಿಮ್ಮ ಕೆಲಸ ಹಾಗೂ ಕುಟುಂಬಕ್ಕೆ ಸರಿಸಮವಾದ ಪ್ರಾಮುಖ್ಯತೆ ಕೊಡಿ.

ಒಂದು ಕಡೆಯಿಂದ ಕೆಲಸದ ಜವಾಬ್ದಾರಿ, ಮತ್ತೊಂದು ಕಡೆಯಿಂದ ಕೌಟುಂಬಿಕ ಜವಾಬ್ದಾರಿ ಎಳೆದಾಡುತ್ತದೆ. ಆದರೆ ಕೆಲಸದ ಗುರಿ ಮುಟ್ಟಿದ ಸಂಭ್ರಮ ಅನುಭವಿಸುವಾಗ ಕುಟುಂಬವನ್ನು ನಿರ್ಲಕ್ಷಿಸಬಾರದಿತ್ತು ಎಂಬ ವಿಷಾದ ನಿಮ್ಮನ್ನು ಕಾಡದಂತೆ ಎಚ್ಚರವಹಿಸಿ.[ಮೇಷ ರಾಶಿಗೆ ಗುರುಬಲದ ನಿರೀಕ್ಷೆ ಅಷ್ಟೇನೂ ಬೇಡ]

Aries horoscope in Kannada for September 2016

ವೃತ್ತಿ: ಕೆಲಸದ ಬಗ್ಗೆ ಹೆಚ್ಚಿನ ಗಮನಹರಿಸಿ. ನಿಮ್ಮ ಹೆಚ್ಚಿನ ಸಮಯ ಇದಕ್ಕಾಗಿ ಮೀಸಲಿಡಬೇಕಾಗುತ್ತದೆ. ತಂಡದ ಹಿರಿಯರ ಜತೆಗೆ ಸಣ್ಣ-ಪುಟ್ಟ ವಾಗ್ವಾದಗಳು ನಡೆಯುವ ಸಾಧ್ಯತೆ ಇದ್ದು; ಹುಷಾರಾಗಿರಿ. ಸೆಪ್ಟೆಂಬರ್ 18ರ ನಂತರ ಕೆಲವು ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ. ಅದೃಷ್ಟ ನಿಮ್ಮ ಪಾಲಿಗೆ ಒದಗಿಬರುತ್ತದೆ.

ಪ್ರೀತಿ-ಪ್ರೇಮ, ಮದುವೆ: ಇದು ಪರೀಕ್ಷೆಯ ಸಮಯ. ಭಿನ್ನಾಭಿಪ್ರಾಯ, ಗೊಂದಲಗಳ ಹೊರತಾಗಿಯೂ ನೀವು-ನಿಮ್ಮನ್ನು ಇಷ್ಟಪಡುವವರ ಮಧ್ಯೆ ಭಾವನಾತ್ಮಕ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಸೆ.16ರ ನಂತರ ಮಾತುಕತೆಯಲ್ಲಿ ಎಚ್ಚರ. ಮದುವೆ ಆಗಿರುವವರಿಗೆ 19ರ ನಂತರ ಎಲ್ಲ ಸರಿಹೋಗುತ್ತದೆ.[ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ: ಮಕ್ಕಳಿಗೆ ಇದು ಸ್ವಲ್ಪ ಕಷ್ಟದ ಸಮಯ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು. ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. 19ರ ನಂತರ ಶುಭ ಸುದ್ದಿ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Get the complete month prediction for the month of September 2016. Read monthly horoscope of Aries in Kannada. Get free monthly horoscope, astrology and monthly predictions in Kannada.
Please Wait while comments are loading...