Ardha Kendra Yoga 2025: ಅರ್ಧ ಕೇಂದ್ರ ಯೋಗ- ಇಂದಿನಿಂದ 3 ರಾಶಿಗಳ ಜೀವನ ಬದಲು
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಪರಸ್ಪರ ಸ್ವಲ್ಪ ದೂರದಲ್ಲಿ ನೆಲೆಗೊಂಡಾಗ ಅವುಗಳಿಂದ ಕೆಲವು ಯೋಗಗಳು ಉಂಟಾಗುತ್ತವೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಶುಭ ಅಥವಾ ಆಶುಭವಾಗಿರಬಹುದು. ಮಾರ್ಚ್ 8ರಂದು ಅಂದರೆ ಇಂದು ಗ್ರಹಗಳ ರಾಜ ಸೂರ್ಯ ಮತ್ತು ಯಮನಿಂದ ಅರ್ಧ ಕೇಂದ್ರ ಯೋಗ ಸೃಷ್ಟಿಯಾಗುತ್ತಿದೆ.
ಸೂರ್ಯ-ಯಮರು ಪರಸ್ಪರ 45 ಡಿಗ್ರಿಗಳಲ್ಲಿ ನೆಲೆಗೊಂಡಿರುವುದರಿಂದ ಅರ್ಧ ಕೇಂದ್ರ ಯೋಗ ರೂಪುಗೊಳ್ಳುತ್ತಿದೆ. ಕೆಲವು ರಾಶಿಗಳು ಸೂರ್ಯ ಮತ್ತು ಯಮನ ಅರ್ಧಕೇಂದ್ರ ಯೋಗದಿಂದ ಆಶೀರ್ವದಿಸಲ್ಪಡುತ್ತವೆ. ಹಾಗಾದರೆ 12 ರಾಶಿಗಳಲ್ಲಿ ಯಾವ 3 ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಅರ್ಧಕೇಂದ್ರ ಯೋಗ ಪ್ರಯೋಜನಕಾರಿಯಾಗಿದೆ. ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು. ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಬಗ್ಗೆ ಯೋಚಿಸಬಹುದು. ನಿಮ್ಮ ಮಕ್ಕಳಿಂದ ನಿಮಗೆ ಸಂತೋಷ ಸಿಗುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.
ಅದು ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತದೆ. ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗುತ್ತದೆ. ಮನಸ್ಸಿನಲ್ಲಿ ಒಂದು ರೀತಿಯ ಸಂತೋಷ ಇರಲಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಸುಧಾರಿಸುತ್ತದೆ. ವ್ಯವಹಾರವನ್ನು ವಿಸ್ತರಿಸುವ ಆಲೋಚನೆ ಇರುತ್ತದೆ. ಈ ಯೋಜನೆ ಯೋಜಿತವಾಗಿ ಮಾಡುವುದರಿಂದ ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತವೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಅರ್ಧಕೇಂದ್ರ ಯೋಗ ಪ್ರಯೋಜನಕಾರಿಯಾಗಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರಲಿದೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಬಹುದು. ವ್ಯಾಪಾರ ಮಾಡುವವರಿಗೆ ಸಮಯ ಚೆನ್ನಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧಗಳು ಉತ್ತಮವಾಗಿರಲಿದೆ. ಉದ್ಯೋಗದಲ್ಲಿರುವವರಿಗೆ ಲಾಭವಾಗಲಿದೆ. ಪ್ರಗತಿಗೆ ಅವಕಾಶಗಳು ದೊರೆಯಲಿವೆ. ಸಂಪತ್ತು ಹೆಚ್ಚಾದಂತೆ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಸೂರ್ಯ-ಯಮದ ಅರ್ಧ ಕೇಂದ್ರ ಯೋಗ ಫಲಪ್ರದವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗಲಿಎದ. ಅದಕ್ಕಾಗಿ ಮಾತುಕತೆ ನಡೆಯುವುದು. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ಬಗೆಹರಿಯುತ್ತವೆ.
ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಾಗಬಹುದು. ಉದ್ಯಮಿಗಳು ತಮ್ಮ ಮೇಲೆ ಕೇಂದ್ರೀಕರಿಸುವ ಸಮಯ ಇದು. ಇದು ಅವರ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಪ್ರೀತಿಯ ಸಂಬಂಧದಲ್ಲಿ ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿದೆ.












Click it and Unblock the Notifications