US Election Prediction: ಕಮಲಾ ಹ್ಯಾರಿಸ್‌ಗೆ ಶನಿ ಕಂಟಕ: ಟ್ರಂಪ್ ಜಾತಕ ಹೇಗಿದೆ?

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇಂದು (ನವೆಂಬರ್ 5) ನಡೆಯಲಿದ್ದು, ಭಾರತೀಯ ಮೂಲದವರಾದ ಡೆಮಾಕ್ರೆಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕ್ ಪಾರ್ಟಿ ನಾಯಕ ಡೊನಾಲ್ಡ್ ಟ್ರಂಪ್ ನಡುವೆ ಭಾರೀ ಪೈಪೋಟಿ ನಡೆದಿದೆ. ಇವರಿಬ್ಬರ ನಡುವೆ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರಗಳು ಈಗ ಶುರುವಾಗಿದೆ. ಕೆಲ ಸಮೀಕ್ಷೆಗಳು ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರೆ ಇನ್ನೂ ಕೆಲ ಸಮೀಕ್ಷೆಗಳು ಕಮಲಾ ಹ್ಯಾರಿಸ್‌ಗೆ ಜಯ ಖಚಿತ ಎಂದು ಹೇಳಿವೆ. ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾರು ಈ ಬಾರಿ ಜಯ ಸಾಧಿಸಲಿದ್ದಾರೆ ಎಂದು ತಿಳಿಯೋಣ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವುದಕ್ಕೆ ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದಾರೆ. ಅಮೆರಿಕಾದಲ್ಲಿ ಈಗಾಗಲೇ ಅಧ್ಯಕ್ಷೀಯ ಚುನಾವಣೆ ಪ್ರಚಾರ ಪೂರ್ಣಗೊಂಡಿದ್ದು, ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಸಮೀಕ್ಷೆಗಳ ಪ್ರಚಾರ ಇಬ್ಬರೂ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದೆ. ಈಗ ಇವರಿಬ್ಬರ ಬಗ್ಗೆ ಜ್ಯೋತಿಷಿಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಕೆಲವರು ಈಗಾಗಲೇ ಟ್ರಂಪ್ ಹಾಗೂ ಹ್ಯಾರಿಸ್ ಭವಿಷ್ಯ ನೋಡಲು ಶುರು ಮಾಡಿದ್ದಾರೆ. ಇನ್ನೂ ಕೆಲವರು ಇವರಿಬ್ಬರ ಜನ್ಮ ಕುಂಡಲಿಯನ್ನು ನೋಡುತ್ತಿದ್ದಾರೆ. ಈ ಮೂಲಕ ಮುಂದಿನ ಫಲಿತಾಂಶ ಏನಾಗಲಿದೆ ಎನ್ನುವ ಬಗ್ಗೆ ನಿಖರ ಫಲಿತಾಂಶ ನೀಡಿದ್ದಾರೆ.

america election prediction kamala harris v s donald trump- who will win astrologers predictions are here

ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹ್ಯಾರಿಸ್ ಹಾಗೂ ಟ್ರಂಪ್ ಅವರ ಜಾತಕ ಹೇಗಿದೆ? ಜ್ಯೋತಿಷಿಗಳು ಯಾರು ಗೆಲ್ತಾರೆ ಎನ್ನುವ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ? ಟ್ರಂಪ್ ಹಾಗೂ ಹ್ಯಾರಿಸ್ ಅವರ ಜನ್ಮ ಕುಂಡಲಿ ಹೇಗಿದೆ? ಇದೆಲ್ಲದರ ಬಗ್ಗೆ ಈಗ ತಿಳಿಯೋಣ.

ಡೊನಾಲ್ಡ್ ಟ್ರಂಪ್ ಜಾತಕ...

ಡೊನಾಲ್ಡ್ ಟ್ರಂಪ್ ಚಂದ್ರ ಗ್ರಹಣದ ಸಮಯದಲ್ಲಿ ಹುಟ್ಟಿದವರು ಎಂದು ಹೇಳಲಾಗುತ್ತದೆ. ಹೀಗಾಗಿ ಇದರ ಪ್ರಭಾವದಿಂದ ಟ್ರಂಪ್ ತಮ್ಮ ಆಟವನ್ನೇ ಬದಲಾಯಿಸಬಹುದು ಎಂದು ಕೆಲ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಡೊನಾಲ್ಡ್ ಟ್ರಂಪ್ ಜೂನ್ 14, 1946ರಂದು ಜಮಿನಿಯಲ್ಲಿ ಜನಿಜನಿಸಿದರು. ಧನು ಇವರ ರಾಶಿಯಾಗಿದೆ.

america election prediction kamala harris v s donald trump- who will win astrologers predictions are here

ಕಮಲಾ ಹ್ಯಾರಿಸ್ ಜಾತಕ..

ಇನ್ನೂ ಕಮಲಾ ಹ್ಯಾರಿಸ್ ಅವರು ಅಕ್ಟೋಬರ್ 20, 1964ರಲ್ಲಿ ಹುಟ್ಟಿದ್ದಾರೆ. ಇವರದ್ದು ತುಲಾ ರಾಶಿಯಾಗಿದೆ. ಇದು ಅವರ ರಾಜಕೀಯದಲ್ಲಿ ಸಾಧನೆಗೆ ಮುಖ್ಯ ಕಾರಣವಾಗಿದೆ. ಇದೇ ಕಾರಣ ಕಮಲಾ ಹ್ಯಾರಿಸ್ ಅವರು ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಗುರುವಿನ ಬಲ ಹೇಗಿದೆ...?

ಅಲ್ಲದೇ ಇವರಿಬ್ಬರ ಮೇಲೆ ಗುರುವಿನ ಪ್ರಭಾವ ಹೇಗಿದೆ ಎನ್ನುವ ಲೆಕ್ಕಾಚಾರವನ್ನೂ ಜ್ಯೋತಿಷಿಗಳು ಹಾಕುತ್ತಿದ್ದಾರೆ. ಜಾತಕದಲ್ಲಿ ಗುರು ಬಲವಾಗಿದ್ದರೆ ಅದೃಷ್ಟ, ಬುದ್ಧಿವಂತಿಕೆ, ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಅಂತೆಯೇ ಜ್ಯೋತಿಷ್ಯಶಾಸ್ತ್ರದ ಪ್ರಚಾರ ಟ್ರಂಪ್ ಹಾಗೂ ಹ್ಯಾರಿಸ್ ಇಬ್ಬರ ಜಾತಕದಲ್ಲೂ ಗುರು ಬಲವಾಗಿದ್ದಾನೆ. ಇದು ಅವರ ರಾಜಕೀಯ ಹಾಗೂ ಸಾರ್ವಜನಿಕರ ಮನವಿಯನ್ನು ಸುಧಾರಿಸುವ ಸಾಧ್ಯತೆಯನ್ನು ಹೊಂದಿದೆ. ಆದರೆ ಗುರು ಗ್ರಹದ ಪ್ರಭಾವ ಅನಿರೀಕ್ಷಿತ ಬದಲಾವಣೆಯನ್ನು ತರಬಹುದು ಅಂತಲೂ ಹೇಳಲಾಗುತ್ತಿದೆ.

ಹ್ಯಾರಿಸ್ ಹಾಗೂ ಟ್ರಂಪ್ ಜನ್ಮ ಕುಂಡಲಿ ಹೇಗಿದೆ..?

ಜ್ಯೋತಿಷ್ಯದಲ್ಲಿ ಮೀಡಿಯಂ ಕೊಹ್ಲಿ ಅನ್ನೋದು ವ್ಯಕ್ತಿಯ ಜನ್ಮ ಚಾಟ್‌ನಲ್ಲಿರುವ ರಾಶಿಯಾಗಿರುತ್ತದೆ. ಇದು ಅವರ ಸಾರ್ವಜನಿಕ ಚಿತ್ರಣ, ವೃತ್ತಿ ಹಾಗೂ ಸಾಮಾಜಿಕ ಸ್ಥಾನಮಾನವನ್ನು ಸೂಚಿಸುತ್ತದೆ. ಟ್ರಂಪ್ ಮೀಡಿಯಂ ಕೊಹ್ಲಿ ಹೊಂದಿದ್ದಾರೆ. ಇದು ಅವರ ಆಡಳಿತ ಹಾಗೂ ಸಾಧನೆಯನ್ನು ತೋರಿಸುತ್ತದೆ. ಆದರೆ ಕಮಲಾ ಹ್ಯಾರಿಸ್ ಅವರಿಗೆ ಈ ಶಾಸ್ತ್ರದಲ್ಲಿ ಶನಿ ಅನ್ವಯಿಸುತ್ತದೆ. ಶನಿ ಗ್ರಹ ಅಡೆತಡೆ ವಿಳಂಬಗಳನ್ನು ಸೂಚಿಸುತ್ತದೆ. ಇದರ ಅರ್ಥ ಹ್ಯಾರಿಸ್ ಅವರು ಈ ಚುನಾವಣೆಯಲ್ಲಿ ಸಾಕಷ್ಟು ಸವಾಲುಗಳನ್ನು ಎದರಿಸುವ ಪರಿಸ್ಥಿತಿ ಬರಬಹುದು. ಹಾಗಂತ ಚುನಾವಣೆಯಲ್ಲಿ ಹ್ಯಾರಿಸ್ ಸೋಲ್ತಾರೆ ಅಂತನೂ ಹೇಳಲು ಆಗುವುದಿಲ್ಲ.

ಈ ಎಲ್ಲಾ ಅಂಶಗಳ ಆಧಾರದ ಮೇಲೆ ಚುನಾವಣೆಯಲ್ಲಿ ಯಾರು ಗೆಲ್ತಾರೆ ಅಂತ ಹೇಳೋದು ತುಂಬಾ ಕಷ್ಟ. ಯಾಕೆಂದರೆ ಅನಿರೀಕ್ಷಿತವಾಗಿ ಏನು ಬೇಕಾದರು ಆಗಬಹುದು ಎನ್ನುತ್ತಾರೆ ಜ್ಯೋತಿಷಿಗಳು. ಆದರೆ ಈ ಬಾರಿ ಇಬ್ಬರೂ ಕೂಡ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣದಲ್ಲಿ ಇದ್ದುರೆ ಫಲಿತಾಂಶ ಏನಾಗಿರಲಿದೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+