ಅಕ್ಷಯ ತೃತೀಯದ ದಿನ ಈ ಸಮಯದಲ್ಲಿ ವಾಹನ ಖರೀದಿಸಿದರೆ ಅದೃಷ್ಟ: ರಾಶಿಗೆ ಅನುಗುಣವಾಗಿ ಈ ಬಣ್ಣಕ್ಕಿರಲಿ ಆದ್ಯತೆ
ಅಕ್ಷಯ ತೃತೀಯದ ದಿನ ಏನೇ ಖರೀದಿ ಮಾಡಿದರೂ ಅದು ನಮ್ಮ ಬಳಿ ಶಾಶ್ವತವಾಗಿ ಉಳಿಯುತ್ತದೆ ಅಲ್ಲದೆ ಆ ವಸ್ತು ಮನೆಯ ಅಭಿವೃದ್ಧಿಗೆ ಕಾರಣವಾಗುತ್ತದೆ ಎನ್ನುವುದು ನಂಬಿಕೆ. ಈ ಹಿನ್ನೆಲೆಯಲ್ಲಿ ಅಕ್ಷಯ ತೃತೀಯದ ದಿನ ಒಡವೆ, ಬೆಳ್ಳಿ, ಬಂಗಾರ, ವಾಹನಗಳನ್ನು ಖರೀದಿ ಮಾಡುವ ಸಂಪ್ರದಾಯವಿದೆ. ದೊಡ್ಡ ಮಟ್ಟದಲ್ಲಿ ಅಲ್ಲ ಎಂದಾದರೂ ಸಣ್ಣ ವಸ್ತುವನ್ನಾದರೂ ಈ ದಿನ ಖರೀದಿಸಲೇ ಬೇಕು ಎನ್ನುವವರು ಕೂಡಾ ಇದ್ದಾರೆ.ಅಕ್ಷಯ ತೃತೀಯ ಎಂದರೆ ಖರೀದಿಗೆ ಶುಭ ದಿನ ಎಂದರ್ಥ.
ಅಕ್ಷಯ ತೃತೀಯದಂದು ಬೈಕ್, ಕಾರು ಅಥವಾ ಇತರ ವಾಹನವನ್ನು ಖರೀದಿಸುವ ಬಗ್ಗೆ ಆಲೋಚನೆ ಇದ್ದರೆ ಇಲ್ಲಿ ಬರೀ ಖರೀದಿ ಮಾತ್ರ ಮುಖ್ಯವಾಗುವುದಿಲ್ಲ.ಬದಲಿಗೆ ಶುಭ ಸಮಯ ನೋಡಿ ಖರೀದಿ ಮಾಡುವುದು ಬಹಳ ಮುಖ್ಯ. ಜೊತೆಗೆ ವಾಹನ ಖರೀದಿ ಮಾಡುವುದಾದರೆ ರಾಶಿಗನುಗುಣವಾಗಿ ಬಣ್ಣವನ್ನು ಆಯ್ಕೆ ಮಾಡಿದರೆ ಅದೃಷ್ಟ ಇಮ್ಮಡಿಯಾಗಲೂಬಹುದು.

ಅಕ್ಷಯ ತೃತೀಯ ದಿನಾಂಕ ಮತ್ತು ವಾಹನ ಖರೀದಿಗೆ ಇರುವ ಶುಭ ಸಮಯ:
ವೈಶಾಖ ಶುಕ್ಲ ತೃತೀಯ ತಿಥಿ ಅಥವಾ ಅಕ್ಷಯ ತೃತೀಯ ಏಪ್ರಿಲ್ 19 ರಂದು ಮಧ್ಯಾಹ್ನ 1:01 ಕ್ಕೆ ಪ್ರಾರಂಭವಾಗಿ ಏಪ್ರಿಲ್ 20 ರಂದು ಬೆಳಿಗ್ಗೆ 10:39 ಕ್ಕೆ ಕೊನೆಗೊಳ್ಳುತ್ತದೆ. ಅಂದರೆ ಅಕ್ಷಯ ತೃತೀಯವನ್ನು ಏಪ್ರಿಲ್ 19 ರಂದು ಆಚರಿಸಲಾಗುತ್ತದೆ. ಮೊದಲೇ ಹೇಳಿದಂತೆ ಈ ದಿನ ಏನೇ ಖರೀದಿ ಮಾಡಿದರೂ ಅದೃಷ್ಟ ಎನ್ನುವುದು ನಂಬಿಕೆ. ಹಾಗಾಗಿ ದಿನವಿಡೀ ಖರೀದಿ ಮಾಡಬಹುದು. ಆದರೆ ಶುಭ ಸಮಯ ಎನ್ನುವುದನ್ನು ನೋಡುವುದಾದರೆ ಬೆಳಿಗ್ಗೆ 11:38 ರಿಂದ ಮಧ್ಯಾಹ್ನ 12:27 ರವರೆಗೆ ಇರುತ್ತದೆ.
ರಾಶಿಗನುಗುಣವಾಗಿ ಯಾವ ಬಣ್ಣ ಸೂಕ್ತ :
ನಿಮ್ಮ ರಾಶಿಗೆ ಅನುಸಾರವಾಗಿ ಹೇಳಿರುವ ಶುಭ ಬಣ್ಣದ ವಾಹನವನ್ನು ಅಕ್ಷಯ ತೃತೀಯದಂದು ಖರೀದಿಸಿದರೆ ಅದೃಷ್ಟ ಮತ್ತಷ್ಟು ಹೆಚ್ಚುವುದು ಎಂದು ಹೇಳಲಾಗುತ್ತದೆ.ಹಾಗಿದ್ದರೆ ಯಾವ ರಾಶಿಯವರಿಗೆ ಯಾವ ಬಣ್ಣದ ವಾಹನ ಸೂಕ್ತ ಎಂದು ನೋಡುವುದಾದರೆ:
ಮೇಷ: ಕೆಂಪು ಅಥವಾ ಮೆರೂನ್ ಬಣ್ಣವನ್ನು ಆರಿಸಿದರೆ ಒಳ್ಳೆಯದು
ವೃಷಭ: ಬಿಳಿ ಅಥವಾ ಬೆಳ್ಳಿ ಬಣ್ಣ
ಮಿಥುನ: ಹಸಿರು, ಕ್ರೀಮ್ ಅಥವಾ ಬೂದು ಬಣ್ಣ
ಕರ್ಕಾಟಕ: ಬಿಳಿ, ಬೆಳ್ಳಿ ಅಥವಾ ಕ್ರೀಮ್ ಬಣ್ಣ
ಸಿಂಹ: ಕೆಂಪು, ಮೆರೂನ್, ಚಾಕೊಲೇಟ್ ಅಥವಾ ಕೇಸರಿ ಬಣ್ಣ
ಕನ್ಯಾ: ಹಸಿರು, ಬಿಳಿ ಅಥವಾ ಬೂದು ಬಣ್ಣದ ಕಾರು ಆರಿಸಿ.
ತುಲಾ: ಬಿಳಿ, ಹೊಳೆಯುವ ಅಥವಾ ಬೆಳ್ಳಿ ಬಣ್ಣದ ಕಾರು ಆರಿಸಿ.
ವೃಶ್ಚಿಕ: ಕೆಂಪು, ಮೆರೂನ್ ಅಥವಾ ಚಾಕೊಲೇಟ್ ಬಣ್ಣ
ಧನು: ಹಳದಿ, ಕ್ರೀಮ್ ಅಥವಾ ಬಿಳಿ ಬಣ್ಣ
ಮಕರ: ಕಪ್ಪು, ನೀಲಿ ಅಥವಾ ಕಂದು ಬಣ್ಣ
ಕುಂಭ: ಕಪ್ಪು, ನೀಲಿ ಅಥವಾ ನೇರಳೆ ಬಣ್ಣ
ಮೀನ: ಹಳದಿ, ಬಿಳಿ ಅಥವಾ ಕ್ರೀಮ್ ಬಣ್ಣ
(ಬರಹ: ರಂಜಿತಾ ಆರ್.ಕೆ.)












Click it and Unblock the Notifications