Lucky Zodiac Signs: ಅಕ್ಷಯ ತೃತಿಯಂದು ಈ 4 ರಾಶಿಯವರಿಗೆ ಹಣದ ಸುರಿಮಳೆ!
ಹಿಂದೂಗಳ ಪ್ರಮುಖ ಹಬ್ಬವಾದ ಅಕ್ಷಯ ತೃತೀಯವನ್ನು ಈ ವರ್ಷ ಮೇ 10ರಂದು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಈ ವರ್ಷ ಅನೇಕ ಶುಭ ಯೋಗಗಳೊಂದಿಗೆ ಆಗಮಿಸಲಿದೆ. 100 ವರ್ಷಗಳ ನಂತರ ಅಕ್ಷಯ ತೃತೀಯ ದಿನದಂದು ಗಜಗೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಈ ವರ್ಷ ಅಕ್ಷಯ ತೃತೀಯ ದಿನದಂದು ಚಂದ್ರ ಮತ್ತು ಗುರುಗಳ ಸಂಯೋಗ ಗಜಗೇಸರಿ ಯೋಗವನ್ನು ರೂಪಿಸುತ್ತದೆ. ಈ ಯೋಗ ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಮುಖವಾದ ರಾಜಯೋಗವಾಗಿದೆ.
ಗುರು ಮತ್ತು ಚಂದ್ರ ಉತ್ತಮ ಸ್ನೇಹಿತರಾಗಿದ್ದಾರೆ. ಗಜಕೇಸರಿ ಯೋಗ ಚಂದ್ರ ಮತ್ತು ಗುರುಗಳಿಂದ ರೂಪಗೊಳ್ಳುತ್ತದೆ. ಗಜಕೇಸರಿಯೋಗ ಅಕ್ಷಯ ತೃತಿಯಂದು ರೂಪುಗೊಂಡಿದೆ. ಇದು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಈ ರಾಶಿಗಳು ಜೀವನದಲ್ಲಿ ಅನೇಕ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅಕ್ಷಯ ತೃತಿಯಂದು ರೂಪುಗೊಂಡ ಗಜಗೇಸರಿಯೋಗದಿಂದ ಯಾವ ರಾಶಿಯವರಿಗೆ ಲಾಭವಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಗಜಕೇಸರಿ ರಾಜಯೋಗ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ. ಈ ರಾಜಯೋಗ ನಿಮ್ಮ ಜಾತಕದಲ್ಲಿ ಹಣ ಮತ್ತು ಸಂಬಂಧಗಳ ಮನೆಯಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ ನೀವು ಕಾಲಕಾಲಕ್ಕೆ ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುತ್ತೀರಿ.
ವಿದೇಶದಿಂದ ವ್ಯಾಪಾರ ಮಾಡುವವರು ಯಶಸ್ಸಿನ ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಈ ರಾಶಿಗಳು ಊಹಿಸಿದ್ದಕ್ಕಿಂತ ಹೆಚ್ಚಿನ ಸಂಪತ್ತನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಮಾತಿನ ಮೂಲಕ ನೀವು ಇತರರನ್ನು ಸುಲಭವಾಗಿ ನಿಯಂತ್ರಿಸಬಹುದು.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಗಜಕೇಸರಿ ರಾಜಯೋಗ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ ಈ ರಾಜಯೋಗ ರೂಪುಗೊಳ್ಳುತ್ತದೆ. ಆದ್ದರಿಂದ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸವನ್ನು ಈ ಸಮಯದಲ್ಲಿ ಪೂರ್ಣಗೊಳಿಸಬಹುದು. ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು.
ನಿಮ್ಮ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಕೆಲವು ಶುಭ ಕಾರ್ಯಕ್ರಮಗಳಿಗೆ ಹಾಜರಾಗಬಹುದು. ವಿದೇಶ ಪ್ರಯಾಣಕ್ಕೆ ಅವಕಾಶವಿರುತ್ತದೆ. ಈ ಅವಧಿಯು ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಗಜಕೇಸರಿ ರಾಜಯೋಗ ನಿಮ್ಮ ರಾಶಿಯ 10ನೇ ಮನೆಯಲ್ಲಿರುವುದರಿಂದ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತೀರಿ. ಅನೇಕ ಅದ್ಭುತ ಅವಕಾಶಗಳು ನಿಮ್ಮ ದಾರಿಯಲ್ಲಿ ಬರುತ್ತವೆ.
ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ನಿರೀಕ್ಷಿತ ಹೊಸ ಉದ್ಯೋಗ ದೊರೆಯಲಿದೆ. ಈ ಅವಧಿಯಲ್ಲಿ ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಲಾಭ ಮತ್ತು ಅವಕಾಶಗಳನ್ನು ಪಡೆಯುತ್ತಾರೆ.

ತುಲಾ ರಾಶಿ
ತುಲಾ ರಾಶಿಯವರು ಈ ಸಮಯದಲ್ಲಿ ತಮ್ಮ ಒಡಹುಟ್ಟಿದವರ ಬೆಂಬಲವನ್ನು ಪಡೆಯುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಹೊಸ ವಾಹನ ಖರೀದಿಸಲು ಬಯಸುವವರು ತಮ್ಮ ಇಷ್ಟಾರ್ಥವನ್ನು ಪೂರೈಸಿಕೊಳ್ಳಬಹುದು.
ಹಣಕಾಸಿನ ಸ್ಥಿತಿ ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಕೆಲಸದಲ್ಲಿ ನೀವು ಅನೇಕ ಯಶಸ್ವಿ ಅವಕಾಶಗಳನ್ನು ಕಾಣಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications