ಅಧಿಕಾಷಾಢ ಮಾಸದ ಪಂಚಾಂಗ: ಜುಲೈ 12 ರಿಂದ 18

ಅಧಿಕಾಷಾಢ ಮಾಸದ ಜು.12ರಿಂದ ಜು.18ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Adhika Ashada masa - July 12 to 18 : Rahu Kala, Gulika Kala, Yamaganda Kala

ಜು.12. ರವಿವಾರ : ಕೃತ್ತಿಕಾ ನಕ್ಷತ್ರ. ಏಕಾದಶಿ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಜು.13. ಸೋಮವಾರ : ರೋಹಿಣಿ. ತಾರಸಿ ಹಾಕಿಸಲುತ್ತಮ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಜು.14. ಮಂಗಳವಾರ : ಮೃಗಶಿರಾ. ಹಣಕಾಸಿನ ವ್ಯವಹಾರಕ್ಕೆ ಶುಭ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಜು.15. ಬುಧವಾರ : ಆರಿದ್ರಾ. ಗುರು ಕರ್ಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ. ಮಹತ್ವದ ಬದಲಾವಣೆ ಎಲ್ಲ ರಾಶಿಗಳವರಿಗೆ. ದೂರ ಪ್ರಯಾಣದಿಂದ ನಷ್ಟ. [ಅಂತೂ ಇಂತೂ ಗುರುಬಲ ಬಂತು : ಯಾರಿಗುಂಟು, ಯಾರಿಗಿಲ್ಲ]

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಜು.16. ಗುರುವಾರ : ಪುನರ್ವಸು. ಅಧಿಕ ನಾಗರ ಅಮವಾಸ್ಯೆ (ಬುಧವಾರ ಬೆಳಗ್ಗೆ 6-39 ಕ್ಕೆ ಅಮವಾಸ್ಯೆ ಆರಂಭ. ಗುರುವಾರ ಬೆಳಗ್ಗೆ 6-54ಕ್ಕೆ ಮುಕ್ತಾಯ). ದೂರ ಪ್ರಯಣದಿಂದ ಲಾಭ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಜು.17. ಶುಕ್ರವಾರ : ಪುಷ್ಯ. ನಿಜ ಆಷಾಢ ಮಾಸ ಆರಂಭ. ಬಟ್ಟೆ ವ್ಯಾಪಾರ ಆರಂಭಿಸಲು ಮತ್ತು ಕಚೇರಿಯ ಮುಖ್ಯಸ್ಥರನ್ನು ಭೇಟಿಯಾಗಲು ಶುಭ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಜು.18. ಶನಿವಾರ : ಆಶ್ಲೇಷಾ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.

ಈ ವಾರದ ಶುಕ್ರವಾರದಿಂದ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳಬಹುದು.

ಈ ವಾರದ ಗ್ರಹಗತಿ : ಮೇಷ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಮಿಥುನ: ಮಂಗಳ+ಸೂರ್ಯ+ಬುಧ. ಕರ್ಕ: ಗುರು.(ಮಂಗಳವಾರದವರೆಗೆ ಮಾತ್ರ) ಸಿಂಹ: ಶುಕ್ರ+ಗುರು (ಬುಧವಾರ ಗುರು ಪ್ರವೇಶ. ಒಂದು ವರ್ಷ ಕಾಲ ವಾಸ). ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮೀನ: ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+