ಸಮರಸವಿದ್ದರೆ ಜೀವನವೇ ಸರಸಮಯ

Made for each other
ಮೇಷ ರಾಶಿ ಸ್ತ್ರೀ - ತುಲಾ ರಾಶಿ ಪುರುಷ

ಅತ್ಯಂತ ಸುಂದರ ಜೋಡಿ. ಈಡು ಜೋಡಿ ಅಂತಾರಲ್ಲ ಹಾಗೆ. ಹೊಂದಾಣಿಕೆಯಂತೂ ತುಂಬಾ ಸೂಪರ್. ಮೇಷರಾಶಿ ಸ್ತ್ರೀಯೊಂದಿಗೆ ತುಲಾ ರಾಶಿ ಪುರುಷರ ಮನವು ಬೆಸೆಯುವ ಕಾರಣದಿಂದ ದಂಪತಿಗಳು ಸ್ವಲ್ಪ ಹೆಚ್ಚೇ ವಿಶಿಷ್ಟ ಅನ್ನಿಸುತ್ತಾರೆ ಬೇರೆಯವರಿಗೆ. ಸಮರಸ ಇವರ ಬದುಕಿನ ಪ್ಲಸ್ ಪಾಯಿಂಟ್. ನನಗೆ ನೀನು ನಿನಗೆ ನಾನು ಎನ್ನುವ ಈ ಗುಣ ಸಮಾಜಕ್ಕೆ ಮಾದರಿ. ತುಲಾ ರಾಶಿಯವರು ದಯಾಗುಣ ಹೊಂದಿರುವವರು. ಎಲ್ಲ ಓಕೆ ಆದರೆ ಇಲ್ಲಿಯೂ ಸಣ್ಣ ಸಮಸ್ಯೆ ಇದೆ. ಎಲ್ಲರೊಂದಿಗೂ ಕರುಣೆ ಪ್ರೀತಿ ಹೊಂದಿರುತ್ತಾರೆ. ಆದರೆ ಪತಿಯ ಈ ಗುಣ ಮೇಷರಾಶಿ ಸ್ತ್ರೀಗೆ ಕೆಂಡಾಮಂಡಲ ಕೋಪ ಉಕ್ಕಿಸುತ್ತದೆ. ಅದೇನೋ ಹೇಳ್ತಾರಲ್ಲ, ಮನೆಗೆ ಮಾರಿ ಊರಿಗೆ ಉಪಕಾರಿ. ಕೋಪಕ್ಕೆ ಕಾರಣಗಳು ಯಾವುದೇ ಆಗಿರಲಿ ಇವರಿಬ್ಬರಲ್ಲಿ ಜಗಳ ಕದನ ತುಂಬಾ ಕಡಿಮೆ. ಶಾಂತಿ ನೆಲೆಸಿರುವುದಕ್ಕೆ ಹೆಚ್ಚಿನ ಗಮನ ಕೊಡುತ್ತಾರೆ. ಇದು ಸಹ ಬದುಕು ಸುಂದರವಾಗಿ ಇಡುವಲ್ಲಿ ಸಹಾಯ ಮಾಡುತ್ತದೆ.

ಮೇಷ ರಾಶಿ ಪುರುಷ - ತುಲಾ ರಾಶಿ ಸ್ತ್ರೀ

ತಪ್ಪು ಮಾಡಿದರೆ ಇಬ್ಬರು ಕ್ಷಮಾಪಣೆ ಕೇಳ್ತಾರೆ, ಆ ಬಳಿಕ ಅದನ್ನು ಪದೇಪದೇ ಹೇಳ್ತಾನು ಇರ್ತಾರೆ. ಆದರೆ, ಯಾರು ಯಾರಿಗೂ ತಲೆ ಬಾಗಲ್ಲ. ಈ ಕಾರಣದಿಂದ ಇಬ್ಬರಲ್ಲೂ ಒತ್ತಡ ಉಂಟಾಗುತ್ತದೆ. ಇಬ್ಬರು ಹೊಂದಿಕೊಂಡು ನಡೆಯುವ ಗುಣ ಬೆಳೆಸಿಕೊಳ್ಳಬೇಕು. ನಾನ್ ಹೆಚ್ಚು ನಾನೇ ಹೆಚ್ಚು ಅನ್ನುವ ಗುಣ ಬಿಟ್ರೆ ಎಲ್ಲವು ಸರಾಗವಾಗುತ್ತದೆ, ಬದುಕು ಹಾಯಾಗಿ ನಡೆಯುತ್ತದೆ. ಇಲ್ಲದೆ ಹೋದರೆ ಇಬ್ಬರು ಅವರವರ ದಾರಿ ಅವರವರು ನೋಡಿಕೊಳ್ಳಲೇ ಬೇಕಾಗುತ್ತದೆ, ಯೋಚಿಸಿ! ಬದುಕು ನಿಮ್ಮ ಕೈಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+