AI ಉದ್ಯೋಗ ಕಸಿಯಲ್ಲ, ಕಾರ್ಮಿಕರಿಗೆ ಸಹಾಯ ಮಾಡುತ್ತೆ: US ಉಪಾಧ್ಯಕ್ಷ...Artificial Intelligence:
Artificial Intelligence: ಇಂದಿನ ಸನ್ನಿವೇಶದಲ್ಲಿ AI ತಂತ್ರಜ್ಞಾನದ ಅಳವಡಿಕೆಯು ಸಾಮೂಹಿಕ ನಿರುದ್ಯೋಗಕ್ಕೆ, ಉದ್ಯೋಗ ವಜಾಕ್ಕೆ ಕಾರಣವಾಗುತ್ತದೆ ಎಂಬ ಭಾವನೆಯನ್ನು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಳ್ಳಿಹಾಕಿದ್ದಾರೆ. ರೋಬೋಟ್ ಗಳು ಮಾನವನ ಉದ್ಯೊಗ/ನೌಕರಿ ಕಸಿದುಕೊಳ್ಳಲಿದ್ದರೆ ಎನ್ನಲಾಗಿತ್ತಾದರೂ ಮುಂದೆ ಏನಾಯಿತು ಎಂದು ನಿಮಗೆ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.
ಪ್ಯಾರಿಸ್‌ನಲ್ಲಿ ಇತ್ತೀಚೆಗೆ ನಡೆದ AI (ಕೃತಕ ಬುದ್ಧಿಮತ್ತೆ) ಕ್ರಿಯಾ ಶೃಂಗಸಭೆಯಲ್ಲಿ ಅವರು ಮಾತನಾಡಿದರು. AI ಆಧಾರಿತ ಉದ್ಯೋಗಗಳ ವ್ಯಾಪಕ ಸ್ವಾಧೀನದ ಪರಿಣಾಮಗಳು ಪ್ರಸ್ತುತ ಕಾಲದಲ್ಲಿ ಸ್ಪಷ್ಟವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. AI ತಂತ್ರಜ್ಞಾನ ಮಾನವ ಪ್ರಯತ್ನಕ್ಕೆ ಒಂದು ಸಾಧನವಾಗಿದೆ ಹೊರತು ಮಾನವನ ಉದ್ಯೋಗಕ್ಕೆ ಪಯಾರ್ಯ ಸಾಧನ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಯುಎಸ್‌ನಲ್ಲಿ ಡೋನಾಲ್ಡ್ ಟ್ರಂಪ್ ಆಡಳಿತ ಬಂದ ಮೇಲೆ ಪೋಷಕ ನೀತಿಗಳ ನಡುವೆ ಜೆಡಿ ವ್ಯಾನ್ಸ್ ಅವರು ನೀಡಿರುವ ಈ ಹೇಳಿಕೆಯು AI ತಂತ್ರಜ್ಞಾನದಿಂದ ಸಂಕಷ್ಟ ಎದುರಿಸುತ್ತಿರುವ ಕಾರ್ಮಿಕರ ಪರವಾದ ನಿಲುವು ಎಂದು ಹೇಳಲಾಗುತ್ತಿದೆ. AI ಮಾನವ ಶ್ರಮವನ್ನು ಪೂರ್ತಿಗೊಳಿಸದೇ, ತೀವ್ರಗೊಳಿಸುತ್ತದೆ. ಎಐ ತಂತ್ರಜ್ಞಾನ ಅಳವಡಿಕೆ ಕಾರಣದಿಂದಾಗಿ ಉದ್ಯೋಗ ನಷ್ಟದ ಭಯ ಹುಟ್ಟುಹಾಕಿದ ಕೆಲವು ತಂತ್ರಜ್ಞಾನ ನಾಯಕರ ನಡೆಯನ್ನು ಅವರು ಟೀಕಿಸಿದರು.
ಉತ್ಪಾದಕತೆ ಮೆಲೆ AI ಪ್ರಭಾವ
ಕೃತಕ ಬುದ್ಧಿಮತ್ತೆಯಿಂದ ಉತ್ಪಾದಕತೆ ಹೆಚ್ಚಲು ಸಕಾರಾತ್ಮಕ ಪ್ರಭಾವ ಬೀರುತ್ತದೆ. ಹೆಚ್ಚಿನ ಸ್ವಾತಂತ್ರ್ಯ ಮತ್ತು ಹೆಚ್ಚಿನ ಸಮೃದ್ಧಿಯನ್ನು ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. AI ನ ಶಕ್ತಿಯ ಬಗ್ಗೆ ಕೆಲವು ಜನರ 'ಅತ್ಯಂತ ನಕಾರಾತ್ಮಕ' ದೃಷ್ಟಿಕೋನವನ್ನು ಅವರು ಪ್ರಶ್ನಿಸಿದರು. AI ಸಂಪೂರ್ಣ ಉದ್ಯೋಗ ನಾಶಕ್ಕೆ ಕಾರಣವಾಗುತ್ತದೆ ಎಂಬ ಭಯಕ್ಕೆ ಯಾವುದೇ ಅರ್ಥಪೂರ್ಣ ಆಧಾರವಿಲ್ಲ. ಇದು ಕೇವಲ ಹಾಸ್ಯಾಸ್ಪದ ಊಹೆ ಎಂದು ಅವರು 'ಎಐನಿಂದ ಉದ್ಯೋಗ ನಾಶ' ಎಂಬುದನ್ನು ತಳ್ಳಿಹಾಕಿದ್ದಾರೆ ಎಂದು ಬಿಸಿನೆಸ್ ಇನ್ಸೈಡರ್ ವರದಿಯ ಮಾಡಿದೆ.
ಕೃತಕ ಬುದ್ಧಿಮತ್ತೆ (AI) ಹೊಸ ಕೌಶಲ್ಯ ಅವಶ್ಯಕತೆಗಳನ್ನು ಸೃಷ್ಟಿಸುತ್ತದೆ. ಇದರಿಂದ ಹೊಸ ಉದ್ಯೋಗಗಳನ್ನು ಸೃಷ್ಟಯಾಗಲಿವೆ. ಇದು ಉದ್ಯೋಗ ಸೃಷ್ಟಿಗೆ ಹೊಸ ದಿಕ್ಕನ್ನು ನೀಡಬಹುದು ಎಂದು ಅವರು ಆಶಿಸಿದರು. ಇಂದಿನ ಕಾಲಘಟ್ಟದಲ್ಲಿ AI ನೈತಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ತಂತ್ರಜ್ಞಾನದಿಂದ ನಿರಾಶಾವಾದಿ ಆಗುವ ಬದಲು ಡೇಟಾವನ್ನು ಆಧರಿಸಿ ವಿಶ್ಲೇಷಣೆ ಮಾಡಬಹುದು. ಅದನ್ನು ಸಾಧನವಾಗಿ ಬಳಕೆ ಮಾಡಿಕೊಳ್ಳಬಹುದು. ತಂತ್ರಜ್ಞಾನದಲ್ಲಿನ ಭವಿಷ್ಯದ ದೃಷ್ಟಿಕೋನ ಕುರಿತು ಯೋಚಿಸುವಂತೆ ಪ್ರೇಕ್ಷಕರಿಗೆ ಕರೆ ನೀಡಿದರು.












Click it and Unblock the Notifications