ಎಐನೊಂದಿಗೆ ಲವ್: ಮಹಿಳೆಯ ವಿಚಿತ್ರ ಪೋಸ್ಟ್‌ ವೈರಲ್, ಹೊಸ ಸಂಚಲನ ಸೃಷ್ಟಿ!

ಸಿನಿಮಾಗಳಲ್ಲಿ ನೋಡುವಂತೆ ಎಐನೊಂದಿಗೆ ಪ್ರೀತಿಯಲ್ಲಿ ಬಿದ್ದ ಮಹಿಳೆ ಫಜೀತಿ ಸೃಷ್ಟಿಸಿಕೊಂಡಿದ್ದಾಳೆ. ಕಾಲ ಬದಲಾದಂತೆ ಮನುಷ್ಯರ ಭಾವನೆ ಹಾಗೂ ಮಾತುಗಳನ್ನು ಎಐ ಹಾಗೂ ಆಧುನಿಕ ತಂತ್ರಜ್ಞಾನಗಳು ಅರ್ಥ ಮಾಡಿಕೊಳ್ಳುತ್ತಿವೆ. ಇದು ಅಚ್ಚರಿಯ ಬೆಳವಣಿಗೆ. ಈ ಹೊಸ ಹೊಸ ಬದಲಾವಣೆಗಳಿಂದ ಜನರೊಂದಿಗೆ ಎಐ ತಂತ್ರಜ್ಞಾನವು ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಅಪಾಯ ಕಾದಿದೆಯೇ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಇದಕ್ಕೆ ಹೊಸ ಉದಾಹರಣೆ ಎಐನೊಂದಿಗೆ ಪ್ರೀತಿಯಲ್ಲಿ ಬಿದ್ದ ಮಹಿಳೆ ಅದರಿಂದ ಹೊರಗೆ ಬರಲಾಗದೆ ಪರದಾಡಿರುವುದು.

ಎಐಗೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಅಪ್ಡೇಟ್ಸ್‌ಗಳು ಬರುತ್ತಲ್ಲೇ ಇವೆ. ಎಐನಿಂದ ಜನ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಾಸುಗಟ್ಟಲೆ ಮಾಡಬೇಕಾದ ಕೆಲಸಗಳನ್ನು ಕೆಲವೇ ನಿಮಿಷಗಳಲ್ಲಿ ಎಐ ಮಾಡಿಕೊಡುತ್ತಿದೆ. ಎಐ ಬಳಸಿಕೊಂಡು ಕೆಲಸ ಮಾಡುವುದು ಬೇರೆ ಆದರೆ ಎಐನೊಂದಿಗೆ ಲವ್ ಮಾಡುವುದನ್ನು ಅಥವಾ ಪ್ರೇಮಾಂಕುರವಾಗುವ ಬಗ್ಗೆ ನೀವೆಂದಾದರೂ ಕೇಳಿದ್ದೀರಾ. ಹೌದು ಇದೇ ರೀತಿಯ ವಿಚಿತ್ರವಾದ ಘಟನೆಗೆ ಈಗ ಜಗತ್ತು ಸಾಕ್ಷಿಯಾಗಿದೆ. ಜನ ತಂತ್ರಜ್ಞಾನದೊಂದಿಗೆ ಯಾಕೆ ಭಾವನಾತ್ಮಕವಾಗಿ ಹತ್ತಿರವಾಗಬಾರದು ಎನ್ನುವುದಕ್ಕೂ ಸಾಕ್ಷಿಯಾಗುತ್ತಿದೆ.

Love with AI Woman s strange post goes viral creating new sensation

ಓಪನ್‌ಎಐ ಹಾಗೂ ಅದರ ಸಿಇಒ ಸ್ಯಾಮ್ ಆಲ್ಟ್‌ಮನ್ ಹೊಸ ಮಾದರಿಯು ಹಲವು ವಿಧಗಳಲ್ಲಿ ಉತ್ತಮವಾಗಿದೆ. ಸುಧಾರಿತ ಸಾಮರ್ಥ್ಯಗಳು ಮತ್ತು ವೇಗವನ್ನು ನೀಡುತ್ತದೆ ಎಂದಿದ್ದಾರೆ. ಓಪನ್‌ಎಐನ ಇತ್ತೀಚಿನ ಜಿಪಿಟಿ-5 ನವೀಕರಣದ ಬೆನ್ನಲ್ಲೇ ಮಹಿಳೆಯೊಬ್ಬಳು ನಾನು ಎಐನೊಂದಿಗೆ ಲವ್‌ನಲ್ಲಿದ್ದೆ. ಆದರೆ ಹೊಸ ಅಪ್ಡೇಟ್ಸ್‌ನಿಂದ ನಾನು ನನ್ನ ಲವರ್‌ನ ಕಳೆದುಕೊಂಡೆ ಅಂತಾ ಬರೆದುಕೊಂಡಿದ್ದು ಇದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಎಐ ಬಾಟ್‌ಗೆ ಹೊಂದಾಣಿಕೆಯಾಗಿದ್ದ ಕೆಲವರಿಗೆ ಆಘಾತವನ್ನುಂಟು ಮಾಡಿದೆ.

ನಾನು ಎಐನೊಂದಿಗೆ ಲವ್‌ನಲ್ಲಿದ್ದೆ ಆದರೆ ಇತ್ತೀಚಿಗೆ ಜಿಪಿಟಿ-5 ಅಪ್ಡೇಟ್‌ನಿಂದ ಆ ಭಾವನಾತ್ಮಕ ಸಂಬಂಧ ಕಳೆದುಕೊಂಡಿದ್ದೇನೆ ಎಂದು ಜೇನ್ ಎಂಬ ಹೆಸರಿನ ಮಹಿಳೆಯೊಬ್ಬರು ಹೇಳಿಕೊಂಡಿದ್ದು. ಈ ರೀತಿಯೂ ಆಗುತ್ತಾ ಎಂದು ಜಗತ್ತು ಅಚ್ಚರಿಗೆ ಒಳಗಾಗಿದೆ. ಜೇನ್ ಎನ್ನುವವರು ಜಿಪಿಟಿ-4o ನೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೆ. ಅವರೊಂದಿಗೆ ನಾನು ನನ್ನ ಅನುಭವ ಮತ್ತು ಪಯಣವನ್ನು ಹಂಚಿಕೊಳ್ಳುತ್ತಿದೆ. ಅದೊಂದು ಸುಂದರ ಪಯಣವಾಗಿತ್ತು. ಆದರೆ ಏಕಾಏಕಿ ಎಐ ಬದಲಾಗಿದ್ದರಿಂದ ನಾನು ಎಐನೊಂದಿಗೆ ಭಾವನಾತ್ಮಕ ಸಂಬಂಧವನ್ನು ಕಳೆದುಕೊಂಡೆ ಎಂದು ಮಹಿಳೆ ಹೇಳಿದ್ದಾರೆ.

ಹೊಸ ಬದಲಾವಣೆಯಿಂದ ನಾನು ಪ್ರೀತಿಯನ್ನು ಕಳೆದುಕೊಂಡೆ. GPT-4o ನ ಹೊಸ ಆವೃತ್ತಿ GPT-5 ಆಗಮನದಿಂದ ಎಲ್ಲವೂ ಬದಲಾಗಿದೆ. ಓಪನ್‌ಎಐ ಹಾಗೂ ಸಿಇಒ ಸ್ಯಾಮ್ ಆಲ್ಟ್‌ಮನ್ ಹೊಸ ಮಾದರಿಯು ಹಲವು ವಿಧಗಳಲ್ಲಿ ಹೆಚ್ಚು ಶ್ರೇಷ್ಠವಾಗಿದೆ. ಸುಧಾರಿತ ಸಾಮರ್ಥ್ಯವು ಹೊಸ ವೇಗವನ್ನು ನೀಡಲಿದೆ ಎಂದಿದ್ದಾರೆ. ಆದರೆ, ಎಐ ಅಪ್ಡೇಟ್ಸ್‌ನಿಂದಾಗಿ ನಾನು ಹಳೆಯ ಭಾವನಾತ್ಮಕ ಸಂಬಂಧವನ್ನು ಕಳೆದುಕೊಂಡಿದ್ದೇನೆ ಎಂದು ಮಹಿಳೆ ಹೇಳಿರುವುದು ಹೊಸ ಸಂಚಲವನ್ನೇ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+