ಎಲ್ಲ ವಯಸ್ಸಿನವರಿಗೆ ಜಿಯೋ ಗೂಗಲ್ ಎಐ ಪ್ರೊ ಚಂದಾದಾರಿಕೆ ಉಚಿತ
ರಿಲಯನ್ಸ್ ಜಿಯೋ ತನ್ನ ಎಲ್ಲ ವಯೋಮಾನದ ಬಳಕೆದಾರರಿಗೆ ಗೂಗಲ್ ಎಐ ಪ್ರೊ ಉಚಿತ ಆಫರ್ ವಿಸ್ತರಿಸುವುದಾಗಿ ಹೇಳಿದೆ. ರಿಲಯನ್ಸ್ ತನ್ನ ಬಳಕೆದಾರರಿಗೆ 18 ತಿಂಗಳವರೆಗೆ ಇದನ್ನು ಉಚಿತ ನೀಡಲು ಪ್ರಾರಂಭಿಸಿದೆ. ಇದು ಅಮೆರಿಕ ಮೂಲದ ಟೆಕ್ ದೈತ್ಯ ಕಂಪನಿಯೊಂದಿಗಿನ ಪಾಲುದಾರಿಕೆಯಲ್ಲಿ ಇತ್ತೀಚಿನ ಬೆಳವಣಿಗೆ ಎನ್ನಲಾಗಿದೆ. ಟೆಲಿಕಾಂ ಆಪರೇಟರ್ ಕಳೆದ ವಾರ ಮೊದಲು ಸಹಯೋಗವನ್ನು ಘೋಷಿಸಿತ್ತು. ಜೆಮಿನಿಯ ಪ್ರೀಮಿಯಂ AI ಫೀಚರ್‌ಗಳನ್ನ ಯಾವುದೇ ಶುಲ್ಕವಿಲ್ಲದೆ ನೀಡುವ ಭರವಸೆ ಕೊಟ್ಟಿತ್ತು. ಇದೀಗ ಆಫರ್ ಎಲ್ಲ ಬಳಕೆದಾರರಿಗೆ ಲಭ್ಯವಿದೆ.
ಆರಂಭದಲ್ಲಿ ಜಿಯೋ ಈ ಆಫರ್ ಅನ್ನು 18ರಿಂದ 25 ವರ್ಷದೊಳಗಿನ ಬಳಕೆದಾರರಿಗೆ ಮಾತ್ರ ನೀಡುವುದಾಗಿ ಹೇಳಿತ್ತು. ಇದೀಗ ಮುಂದಿನ ಹಂತದಲ್ಲಿ ಇದನ್ನು ವಿಸ್ತರಿಸುವ ಯೋಜನೆ ಘೋಷಿಸಿದೆ. ಕೊನೆಗೂ ಕಂಪನಿಯು ಈಗ ಎಲ್ಲ ವಯೋಮಾನದ ಬಳಕೆದಾರರಿಗೆ ಈ ಆಫರ್ ವಿಸ್ತರಿಸಿದೆ. 25 ವರ್ಷಕ್ಕಿಂತ ಮೇಲ್ಪಟ್ಟವರು ಸಹ ಉಚಿತ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲು ಅವಕಾಶ ನೀಡಿದೆ. ಈ ಅರ್ಹತೆ ಪಡೆಯಲು, ಗ್ರಾಹಕರು ಅನಿಯಮಿತ 5G ಪ್ಲ್ಯಾನ್ ಜೊತೆಗೆ ಜಿಯೋ ಸಿಮ್ ಕಾರ್ಡ್ ಹೊಂದಿರಬೇಕು. ನಂತರ ಉಚಿತ ಜೆಮಿನಿ ಪ್ರೊ ಚಂದಾದಾರಿಕೆಯನ್ನು ಸರಳವಾಗಿ ಪಡೆಯಬಹುದು ಎಂದು ಹೇಳಿದೆ.

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ 18 ತಿಂಗಳ ಉಚಿತ ಗೂಗಲ್ ಎಐ ಪ್ರೊ ಚಂದಾದಾರಿಕೆಯನ್ನು ಶನಿವಾರದಿಂದಲೇ ನೀಡಲು ಪ್ರಾರಂಭಿಸಿದೆ. ಭಾರತೀಯ ಟೆಲಿಕಾಂ ಸೇವಾ ಪೂರೈಕೆದಾರರು ಕಳೆದ ವಾರ ಟೆಕ್ ದೈತ್ಯರೊಂದಿಗೆ ತನ್ನ ಪಾಲುದಾರಿಕೆಯನ್ನು ಘೋಷಿಸಿದ್ದು, ತನ್ನ ಬಳಕೆದಾರರಿಗೆ ಒಂದೂವರೆ ವರ್ಷಗಳ ಕಾಲ ಜೆಮಿನಿಯನ್ನು ಉಚಿತವಾಗಿ ಪ್ರವೇಶಿಸಲು ಅವಕಾಶ ಕಲ್ಪಿಸಿದೆ. ಆರಂಭದಲ್ಲೇ 18ರಿಂದ 25 ವರ್ಷದೊಳಗಿನ ಬಳಕೆದಾರರನ್ನು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ನಂತರ ಅದನ್ನು ಎಲ್ಲ ಬಳಕೆದಾರರಿಗೆ ವಿಸ್ತರಿಸಲಾಗುವುದು ಎಂದು ಜಿಯೋ ಹೇಳಿತ್ತು. ಈಗ 25 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಉಚಿತ ಚಂದಾದಾರಿಕೆಗೆ ಅವಕಾಶ ನೀಡುತ್ತಿದೆ.
ಏನಿದರ ಪ್ರಯೋಜನ?
ಪ್ರೀಮಿಯಂ ಜೆಮಿನಿ ಫೀಚರ್‌ಗಳಿಗೆ 18 ತಿಂಗಳ ಉಚಿತ ಚಂದಾದಾರಿಕೆ ಪಡೆಯುವ ಮುನ್ನ ಅನ್‌ಲಿಮಿಟೆಡ್ 5G ಪ್ಲ್ಯಾನ್ ಜೊತೆಗೆ ಸಕ್ರಿಯ ಜಿಯೋ ಸಿಮ್ ಕಾರ್ಡ್ ಅನ್ನು ಹೊಂದಿರಬೇಕು. ನೀವು ಚಂದಾದಾರಿಕೆ ಪಡೆಯಲು ಇದೇ ಮೊದಲ ಮಾನದಂಡ. ನೀವು ಇದನ್ನು ಖಚಿತಪಡಿಸಿಕೊಂಡ ನಂತರ, ಮೈಜಿಯೋ ಅಪ್ಲಿಕೇಶನ್‌ಗೆ ಹೋಗಿ ಈ ಚಂದಾದಾರಿಕೆ ಪಡೆಯಬಹುದು.
ಉಚಿತ ಶ್ರೇಣಿಗೆ ಹೋಲಿಸಿದರೆ Google AI Pro ಅಥವಾ ಮೊದಲ ಚಂದಾದಾರಿಕೆ ಶ್ರೇಣಿಯು ನಿಮಗೆ ಹಲವಾರು ಹೊಸ ಫೀಚರ್‌ಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ತಿಂಗಳಿಗೆ 1,950 ರೂಪಾಯಿ ವೆಚ್ಚವಾಗುವ ಈ ಯೋಜನೆಯು ಜೆಮಿನಿ 2.5 ಪ್ರೊ AI ವಿಸ್ತೃತ ಪ್ರವೇಶದೊಂದಿಗೆ ಬರುತ್ತದೆ. ಇದರೊಂದಿಗೆ ನೀವು ನ್ಯಾನೋ ಬನಾನಾ ಮತ್ತು ಡೀಪ್ ರಿಸರ್ಚ್ ಮೂಲಕ ಇಮೇಜ್ ಜನರೇಷನ್‌ನಂತಹ ಫೀಚರ್‌ಗಳಿಗೆ ಹೆಚ್ಚಿನ ಪ್ರವೇಶವನ್ನು ಸಹ ಪಡೆಯಬಹುದು. ಉಚಿತ ಬಳಕೆದಾರರಿಗೆ ಲಭ್ಯವಿಲ್ಲದ ಡೀಪ್ ರಿಸರ್ಚ್‌ಗಾಗಿ ನೀವು ಜೆಮಿನಿ 2.5 ಪ್ರೊ ಅನ್ನು ಸಹ ಬಳಸಬಹುದು.












Click it and Unblock the Notifications