AI Skills: ಭಾರತದಲ್ಲಿ ಬೇಡಿಕೆ ಇದ್ದರೂ ಎಐ ಸ್ಕಿಲ್‌ ಕಲಿತವರ ಕೊರತೆ ಹೆಚ್ಚು!

ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಪರಿಣಿತಿಯಿಂದ ಕೆಲಸ ಮಾಡುವ ಪ್ರತಿಭೆಯ ಕೊರತೆ ದಿನದಿಂದ ದಿನಕ್ಕೂ ಗಂಭೀರವಾಗುತ್ತಿದೆ. ಎಐಗೆ ಬೇಡಿಕೆ ಹೆಚ್ಚಾಗುತ್ತಿದ್ದರೂ, ಬೇಡಿಕೆಗೆ ತಕ್ಕ ಪ್ರತಿಭೆಗಳು ಸಿಗುತ್ತಿಲ್ಲ. ಇದರಿಂದ ಉದ್ಯೋಗದ ಬೇಡಿಕೆಯಷ್ಟಕ್ಕೂ ಸಾಕಷ್ಟು ತಜ್ಞರು ಲಭ್ಯವಿಲ್ಲ ಎಂದು ವರದಿ ಮಾಡಿದೆ. ಹೆಚ್ಚಿನ ಐಟಿ ಕಂಪನಿಗಳು, AI ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಎಲ್ಲವೂ ಒಂದೇ ಸವಾಲು ಎದುರಿಸುತ್ತಿವೆ ಎಂದು ಹೇಳಿದೆ.

ಮಾರುಕಟ್ಟೆಯಲ್ಲಿ ಎಐ ಕೌಶಲ್ಯಗಳಲ್ಲಿ ಪರಿಣಿತಿ ಹೊಂದಿದವರ ಕೊರತೆ ಇದೆ. ಐಟಿ ದೊಡ್ಡ ಕಂಪನಿಗಳು AIನ ತ್ವರಿತ ಬೆಳವಣಿಗೆಯಲ್ಲಿ ಹೊಂದಿಕೊಳ್ಳಬಲ್ಲ, ಅರ್ಹ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಆದರೆ ಆ ಕೌಶಲ್ಯಗಳನ್ನು ಸಮರ್ಥವಾಗಿ ಕಲಿತವರ ಕೊರತೆ ಸಾಕಷ್ಟಿದೆ.

ಎಐ ಕ್ಷೇತ್ರದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಜಾಗಗಳನ್ನು ನಿರ್ಮಿಸುವ, ತರಬೇತಿ ನೀಡುವ ಹಾಗೂ ಎಐ ಮಾದರಿಗಳನ್ನು ನಿಯೋಜಿಸುವ ಇಂಜಿನಿಯರ್‌ಗಳು ಹಾಗೂ ಬುದ್ಧಿವಂತ ವ್ಯವಸ್ಥೆಗಳ ಜೊತೆಗೆ ಕಾರ್ಯನಿರ್ವಹಿಸಬಲ್ಲ ವೃತ್ತಿಪರರ ಅಗತ್ಯವಿದೆ. ಈ ವಿಶೇಷ ಎಐ ಕೌಶಲ್ಯದೊಂದಿಗೆ ಹೊಸಬಂದವರಿಗೆ, ಬೇಡಿಕೆ ಇದ್ದೇ ಇರುತ್ತೆ. ನಾವು ಪ್ರಮಾಣಕ್ಕಿಂತ ಗುಣಮಟ್ಟವನ್ನು ಉಳಿಸಿಕೊಳ್ಳುವುದು ಮುಖ್ಯ. ಈಗಿನ ಕ್ಯಾಂಪಸ್‌ ನೇಮಕಾತಿಯಲ್ಲಿ ಶೇ 15-20ರಷ್ಟು ವಿಶೇಷ ಪರಿಣತಿ ಹೊಂದಿರುವವರನ್ನು ಮಾತ್ರ ಆಯ್ಕೆ ಮಾಡುತ್ತೇವೆ ಎನ್ನುತ್ತಾರೆ ಉದ್ಯೋಗದಾತರು.

india-faces-widening-ai-talent-gap-amidst-soaring-demand

ಗುರುಗ್ರಾಂನ ಎಐ ಸ್ಟಾರ್ಟ್‌ಅಪ್‌ಗಳು ಯುವ ಇಂಜಿನಿಯರ್‌ಗಳನ್ನು ಮುಂಚಿತವಾಗಿಯೇ ನೇಮಕ ಮಾಡುತ್ತಿದೆ. ಅನುಭವದ ಅವಧಿ ಮೇರೆಗೆ ನಾವು ನೇಮಕ ಮಾಡಿಕೊಳ್ಳಲ್ಲ, ಸಮುದಾಯ ಪ್ರತಿಕ್ರಿಯೆ, ಸಂಶೋಧನಾ ಉತ್ಪಾದನೆ ಆಧರಿಸಿ ಆಯ್ಕೆ ಮಾಡುತ್ತೇವೆ. ಎಐ ವೃತ್ತಿಪರನು ಎರಡು ದಶಕ ಜಾವಾ ಅನುಭವ ಹೊಂದಿರುವವರಿಗಿಂತ ಶ್ರೇಷ್ಠ ಎಂದು ಹೇಳುತ್ತಿದ್ದಾರೆ.

ತಕ್ಷಣವೇ ಎಐ ಪ್ರತಿಭೆಯನ್ನು ಹುಡುಕುವಲ್ಲಿ ಸಮಸ್ಯೆಗಳಿದ್ದರೂ ಭಾರತದಲ್ಲಿನ ಸಂಶೋಧನಾ ಮೂಲಸೌಕರ್ಯ ಮತ್ತು ಹಣಕಾಸಿನ ಕೊರತೆ ದೇಶವನ್ನು ಅಮೆರಿಕಾ, ಚೀನಾ ಹಾಗು ಇತರ ರಾಷ್ಟ್ರಗಳ ಮಟ್ಟದ ಮೂಲ ಎಐ ಮಾದರಿಗಳನ್ನು ನಿರ್ಮಿಸಲು ತಡೆಯುತ್ತಿದೆ. ಎಲ್‌ಎಲ್‌ಎಂ ಆಧಾರಿತ ಅಪ್ಲಿಕೇಶನ್‌ಗಳನ್ನು ಹಾಕುತ್ತಿದ್ದೇವೆ. ಅದಕ್ಕಾಗಿ ಕೇವಲ ಕೋಡರ್‌ಗಳಲ್ಲ, AI ಇಂಜಿನಿಯರ್‌ಗಳು ಬೇಕಾಗಿದ್ದಾರೆ ಎನ್ನುತ್ತಿದ್ದಾರೆ.

ಇಡೀ ಭಾರತೀಯ ಎಐ ಉದ್ಯಮವು 2027ರವರೆಗೆ 2.3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಆದರೆ ಲಭ್ಯವಿರುವ ಎಐ ಪರಿಣಿತಿ ಹೊಂದಿರುವರು ಒಟ್ಟಾರೆ 1.2 ಮಿಲಿಯನ್ ಮೀರಿ ಬರಬಹುದು ಅಷ್ಟೇ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಅಪ್‌ಸ್ಕಿಲ್ಲಿಂಗ್ ಮತ್ತು ತರಬೇತಿ ಈಗಿನ ಸಂದರ್ಭದಲ್ಲಿ ಅತ್ಯವಶ್ಯಕ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+