ಗೂಗಲ್‌ನಿಂದ ಜೆಮಿನಿ ಎಐ ತಂತ್ರಜ್ಞಾನ ಅಭಿವೃದ್ಧಿಗೆ ಯೂಟ್ಯೂಬ್ ವಿಡಿಯೋ ಬಳಕೆ!
ಗೂಗಲ್ ಸಂಸ್ಥೆಯು ಜೆಮಿನಿ ಎಐ ತಂತ್ರಜ್ಞಾನ ಚಾಟ್ ಸೇರಿದಂತೆ ವಿವಿಧ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಮಾಡಬೇಕಾದರೂ ಆ ತಂತ್ರಜ್ಞಾನಕ್ಕೆ ಫೀಡ್ ಮಾಡಲಾಗುತ್ತದೆ. ಉದಾ: ಮಗುವಿಗೆ ಮಾತು ಕಲಿಸುವಂತೆ ಆ್ಯಪ್‌ಗಳಿಗೂ ಫೀಡ್ ಮಾಡಲಾಗುತ್ತದೆ. Google Translate ಅಭಿವೃದ್ಧಿ ಆಗಿರುವುದು ಇದೇ ರೀತಿಯೇ. ಗೂಗಲ್ ಟ್ರಾನ್ಸಲೇಟ್‌ಗೆ ಸಾಮಾನ್ಯ ಅಥವಾ ಸ್ಥಳೀಯ ಭಾಷೆಗಳ ಅರ್ಥವನ್ನು ಫೀಡ್ ಮಾಡಲಾಗಿದೆ. ಆದರೆ ಈ ರೀತಿ ಮಾಡುವ ಪ್ರತಿಷ್ಠಿತ ಸಂಸ್ಥೆಗಳು ಅನ್ಯ ಮಾರ್ಗವನ್ನು ಅನುಸರಿಸುತ್ತಿದೆ ಎನ್ನುವ ಆರೋಪವು ಮೊದಲಿನಿಂದಲೂ ಇದೆ.
ಗೂಗಲ್ ಇತ್ತೀಚಿಗೆ ಜೆಮಿನಿ ಸಾಫ್ಟ್‌ವೇರ್ - ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದೀಗ ಗೂಗಲ್‌ನ ಜೆಮಿನಿ ಹಾಗೂ ವಿಯೋ 3 ಅಭಿವೃದ್ಧಿಗೆ ಮತ್ತು ತರಬೇತಿ ನೀಡುವ ಉದ್ದೇಶದಿಂದ ಸಾವಿರಾರು ಯೂಟ್ಯೂಬ್ ವೀಡಿಯೊಗಳನ್ನು ಬಳಸಲಾಗಿದೆ. ಆದರೆ ಈ ರೀತಿ ಸಾವಿರಾರು ಯೂಟ್ಯೂಬ್ ವಿಡಿಯೋಗಳನ್ನು ಬಳಸುವಾಗ ಆ ಯೂಟ್ಯೂನ್ ವಿಡಿಯೋ ಮಾಡಿದವರಿಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ವಿಯೋ 3 ತಂತ್ರಜ್ಞಾನ ದೈತ್ಯ ಕಂಪನಿಯಾಗಿದೆ.

ಇದು ವಿಶ್ವದ ಅತ್ಯಂತ ಮುಂದುವರಿದ AI ವೀಡಿಯೊ ಜನರೇಷನ್ ಮಾಡೆಲ್ ಆಗಿದೆ. ಈ ಹೊಸ ಫೀಚರ್ ಅನ್ನು ಇದೇ ವರ್ಷದ I/O ಡೆವಲಪರ್ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಗಿದೆ. ಇದು ಸಂಪೂರ್ಣ ಧ್ವನಿ ಮತ್ತು ಸಂಭಾಷಣೆಯ ಜೊತೆಗೆ ಸಿನಿಮೀಯ ಮಾದರಿಯ ವಿಡಿಯೋಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮಾಡೆಲ್‌ನಿಂದ ಸಿನಿಮೀಯ ಮಾದರಿಯ ವಿಡಿಯೋಗಳನ್ನು ಸೃಷ್ಟಿ ಮಾಡಲು ಸಾಧ್ಯವಿದೆ. ಆದರೆ, ಯೂಟ್ಯೂಬ್ ವಿಡಿಯೋಗಳ ಬಳಕೆಯ ಬಗ್ಗೆ ವಿಡಿಯೋ ಮಾಡಿದವರಿಗೇ ಗೊತ್ತಿಲ್ಲ ಎಂದು CNBC ವರದಿ ಮಾಡಿದೆ. ಹೌದು ಅತ್ಯಾಧುನಿಕ AI ಫೀಚರ್‌ಗಳಿಗೆ ತರಬೇತಿ ನೀಡಲು ಗೂಗಲ್ 20-ಬಿಲಿಯನ್ ಯೂಟ್ಯೂಬ್ ವೀಡಿಯೊಗಳನ್ನು ಬಳಸಿದೆ ಎಂದು ಹೇಳಲಾಗಿದೆ.
YouTubeನಲ್ಲಿರುವ ಬರೋಬ್ಬರಿ 20 ಬಿಲಿಯನ್ ವೀಡಿಯೊಗಳಲ್ಲಿ ಯಾವುದನ್ನು ನಿರ್ದಿಷ್ಟವಾಗಿ AI ತರಬೇತಿಗಾಗಿ ಬಳಸಲಾಗಿದೆ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಾಗಿದೆ. ಆದರೆ. ಗೂಗಲ್ ಈ ವಿಡಿಯೋಗಳನ್ನು ಮಾಡಿದವರು ಹಾಗೂ ಮಾಧ್ಯಮ ಕಂಪನಿಗಳೊಂದಿಗಿನ ಒಪ್ಪಂದಗಳನ್ನು ಗೌರವಿಸುತ್ತದೆ ಎಂದು ಹೇಳಿದೆ ಎನ್ನಲಾಗಿದೆ.
ನಮ್ಮ ಉತ್ಪನ್ನಗಳನ್ನು ಉತ್ತಮಗೊಳಿಸುವ ಉದ್ದೇಶದಿಂದ ನಾವು ಯಾವಾಗಲೂ YouTube ವಿಷಯವನ್ನು ಬಳಸಿದ್ದೇವೆ. ಈಗ AI ಬಳಕೆಯಿಂದ ಹೊಸದಾಗಿ ಏನು ಬದಲಾಗಿಲ್ಲ. ನಾವು AI ಕಾಲಘಟ್ಟದಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿರುವುದು ವರದಿಯಾಗಿದೆ.












Click it and Unblock the Notifications