ಗೂಗಲ್ ಬಳಕೆದಾರರಿಗೆ ಭರ್ಜರಿ ಸುದ್ದಿ, ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದ ಟೆಕ್ ದೈತ್ಯ! Artificial Intelligence
ಗೂಗಲ್ ಸಂಸ್ಥೆ ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆದಿದ್ದು, ತನ್ನ ಗ್ರಾಹಕರಿಗೆ ಅಥವಾ ಬಳಕೆದಾರರಿಗೆ ಬೇಕಾದ ಹೊಸ ಹೊಸ ಅಪ್‌ಡೇಟ್ ನೀಡುತ್ತಾ ಬಂದಿದೆ. ಅದರಲ್ಲೂ ಈಗಿನ ಎಐ ಯುಗದಲ್ಲಿ ಭಾರಿ ದೊಡ್ಡ ದೊಡ್ಡ ಬದಲಾವಣೆ ತರುವ ಮೂಲಕ ಸಾಮಾನ್ಯ ಜನರ ಪಾಲಿಗೆ ಮತ್ತಷ್ಟು ಹತ್ತಿರವಾಗುತ್ತಿದೆ ಗೂಗಲ್. ಹೀಗಿದ್ದಾಗಲೇ ಗೂಗಲ್ ಬಳಕೆದಾರರಿಗೆ ಭರ್ಜರಿ ಸುದ್ದಿ ಸಿಕ್ಕಿದ್ದು, ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದೆ ಟೆಕ್ ದೈತ್ಯ!
ಗೂಗಲ್ ಸರ್ಚ್ ಇಂಜಿನ್ ಇಲ್ಲದೆ ಇಂಟರ್‌ನೆಟ್ ಕೆಲಸ ಮಾಡೋದೇ ಇಲ್ಲ ಅನ್ನುವ ಸ್ಥಿತಿ ಇದೆ. ಯಾಕಂದ್ರೆ ಎಂತಹ ಸಾಮಾನ್ಯ ಮನುಷ್ಯ ಕೂಡ ಸುಲಭವಾಗಿ ತನಗೆ ಬೇಕಾಗಿರುವ, ವಿಚಾರ & ವಸ್ತುಗಳ ಬಗ್ಗೆ ಹುಡುಕಾಟ ನಡೆಸಲು ಗೂಗಲ್ ಸರ್ಚ್ ಸಹಕಾರಿ ಆಗಿದ. ಇದೇ ಸಮಯದಲ್ಲಿ ಮತ್ತೊಂದು ಅಪ್‌ಡೇಟ್ ಕೊಟ್ಟಿರುವ ಗೂಗಲ್ ಸಂಸ್ಥೆ, ಸರ್ಚ್ ಲೈವ್ ವಿತ್ ವಾಯ್ಸ್ ಇನ್ಪುಟ್ ಆಯ್ಕೆ ನೀಡಿದೆ. ಈ ಮೂಲಕ ಎಐ ಆಧಾರಿತ ಹಾಗೂ ವಾಯ್ಸ್ ಮೂಲಕ ಸರ್ಚಿಂಗ್ ಆಪ್ಷನ್ ನೀಡಿದೆ ಗೂಗಲ್ ಸಂಸ್ಥೆ.

ಯಾವ ಯಾವ ದೇಶಗಳಲ್ಲಿ ಲಭ್ಯ?
ಅಂದಹಾಗೆ ಇದೀಗ ಗೂಗಲ್ ನೀಡಿರುವ ಈ ಅಪ್‌ಡೇಟ್ ಭಾರತದಲ್ಲಿ ಸದ್ಯಕ್ಕೆ ಲಭ್ಯವಿಲ್ಲದೇ ಇದ್ದರೂ, ಅಮೆರಿಕ & ಇತರ ದೇಶಗಳಲ್ಲಿ ಲಭ್ಯವಿದೆ. ಗೂಗಲ್ ಅಪ್ಲಿಕೇಷನ್ ಬಳಸುವವರು ಈ ಹೊಸ ಆಯ್ಕೆಯ ಪ್ರಯೋಜನ ಪಡೆಯಬಹುದು. ಈ ಮೂಲಕ ಗೂಗಲ್ ಸಂಸ್ಥೆ ಮತ್ತೆ ಎಐ ಅಂದ್ರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಕ್ಕೆ ಇನ್ನಷ್ಟು ಒತ್ತು ನೀಡಿದೆ. ಇದು ಗೂಗಲ್ ಬಳಕೆದಾರರಿಗೆ ಕೂಡ ಪ್ರಯೋಜನಕ್ಕೆ ಬರಲಿದೆ. ಹಾಗಾದರೆ, ಇದರಿಂದ ಏನೆಲ್ಲಾ ಪ್ರಯೋಜನ ಆಗಲಿದೆ?
ಜನರಿಗೆ ಏನೆಲ್ಲಾ ಪ್ರಯೋಜನ ಆಗಲಿದೆ?
ಗೂಗಲ್ ಅಪ್ಲಿಕೇಷನ್‌ನಲ್ಲಿ ಇದೀಗ ಎಐ ಮೂಡ್ ಎಂಬ ಹೊಸ ಆಯ್ಕೆಯನ್ನ ನೀಡಿದ್ದು, ಈ ಮೂಲಕ ಗೂಗಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿರುವ ಬಳಕೆದಾರರು ನೇರವಾಗಿ ಎಐ ಮೂಡ್ ಆಯ್ಕೆ ಮಾಡಿಕೊಂಡು ಅದರಿಂದ ಎಐ ವಾಯ್ಸ್ ತಂತ್ರಜ್ಞಾನ ಬಳಸಿಕೊಂಡು ಸರ್ಚಿಂಗ್ ಮಾಡಬಹುದು. ಹೀಗಾಗಿ ಈ ತಂತ್ರಜ್ಞಾನ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಈ ಆಯ್ಕೆಯಿಂದಾಗಿ ಗೂಗಲ್ ಮತ್ತಷ್ಟು ಜನಸ್ನೇಹಿ ಎಂಬ ಹೆಗ್ಗಳಿಕೆಯನ್ನ ಪಡೆಯುತ್ತಿದೆ. ಹಾಗೇ, ಜನರಿಗೆ ಇನ್ನಷ್ಟು ಹತ್ತಿರ ಕೂಡ ಆಗುತ್ತಿದೆ.












Click it and Unblock the Notifications