ಭಾರತೀಯ ವಿದ್ಯಾರ್ಥಿಗಳಿಗೆ ಗೂಗಲ್‌ನಿಂದ ಬಂಪರ್ ಆಫರ್: ₹19,500 ಮೌಲ್ಯದ AI ಪ್ರೊ-ಪ್ಲ್ಯಾನ್ ಅನ್ನು ಉಚಿತವಾಗಿ ನೀಡಲು ನಿರ್ಧಾರ
Google AI Pro: ಗೂಗಲ್ ಕಂಪನಿಯು ಭಾರತೀಯ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಉಚಿತ Google AI Pro ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ₹19,500 ಮೌಲ್ಯವನ್ನು ಹೊಂದಿದ್ದು, ವಿದ್ಯಾರ್ಥಿಗಳು ಇದನ್ನು ಉಚಿತವಾಗಿ ಪಡೆಯುಬಹುದು ಎಂದು ಗೂಗಲ್ ಹೇಳಿದೆ. ಈ ಕೊಡುಗೆಯು ಸೆಪ್ಟೆಂಬರ್ 15 ರ ವರೆಗೆ ಮಾನ್ಯವಾಗಿದೆ. ಈ ಯೋಜನೆಯ ಮೂಲಕ Gemini 2.5 Pro, Deep Research ಮತ್ತು 2 TB cloud storage ಅನ್ನು ವಿದ್ಯಾರ್ಥಿಗಳು ಪಡೆಯಬಹುದು ಎಂದು ಕಂಪನಿಯು ಮಾಹಿತಿ ನೀಡಿದೆ.
ಈ ಪ್ಲ್ಯಾನ್‌ನ ವೈಶಿಷ್ಟ್ಯಗಳೇನು?
Gemini 2.5 Pro: ಇದು ಪ್ರೊಗ್ರೆಸಿವ್ AI ಮಾದರಿಯಾಗಿದೆ. ಇದು ವಿದ್ಯಾರ್ಥಿಗಳ ಹೋಮ್ ವರ್ಕ್, ಪರೀಕ್ಷಾ ಸಿದ್ಧತೆ ಹಾಗೂ ಅಸೈನ್‌ಮೆಂಟ್‌ಗಳಿಗೆ ಸಹಾಯ ಮಾಡಲಿದೆ.
Deep Research: ವೈಯಕ್ತಿಕ ಸಂಶೋಧನೆಗಳಿಗೆ ಸಹಾಯ ಮಾಡಲಿದೆ. ಇದರಿಂದ ಶೈಕ್ಷಣಿಕ ವರದಿಗಳನ್ನು ತಯಾರಿಸಬಹುದಾಗಿದೆ.
NotebookLM: ನೋಟ್‌ಬುಕ್‌ಎಲ್‌ಎಂ ಎಂಬುದು ಎಐ-ಚಾಲಿತ ಸಂಶೋಧನೆ ಮತ್ತು ಬರವಣಿಗೆಗೆ ಸಹಾಯಕವಾಗಿದೆ.
Veo 3 Fast: ಇದರ ಮೂಲಕ ಟೆಕ್ಟ್ಸ್ ಹಾಗೂ ಇಮೇಜ್‌ಗಳಿಂದ ವಿಡಿಯೊ ನಿರ್ಮಾಣ ಮಾಡಬಹುದು.
Audio Overviews: ಇದರಿಂದ ಪಾಡ್‌ಕಾಸ್ಟ್ ಸೃಷ್ಟಿ ಮಾಡಬಹುದು.
Gemini Live: ಕ್ಲಾಸ್‌ಗಳಿಗೆ ಹಾಗೂ ಐಡಿಯಾ ವಿನಿಮಯಕ್ಕೆ ಸಹಕಾರಿಯಾಗಿದೆ.
2TB ಕ್ಲೌಡ್ ಸ್ಟೋರೇಜ್: ಗೂಗಲ್ ಡ್ರೈವ್, ಜಿಮೇಲ್ ಮತ್ತು ಫೋಟೋಸ್‌ಗಳನ್ನು ಸ್ಟೋರ್ ಮಾಡಲು ಸಹಾಯ ಮಾಡಲಿದೆ.

ಅರ್ಹತೆ
* ವಿದ್ಯಾರ್ಥಿಗಳ ವಯಸ್ಸು 18 ವರ್ಷ ಅಥವಾ ಹೆಚ್ಚು ಇರಬೇಕು.
* ಮಾನ್ಯತೆ ಪಡೆದ ಕಾಲೇಜ್ ಅಥವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನೊಂದಾಯಿತರಾಗಿರಬೇಕು ಹಾಗೂ ವೈಯಕ್ತಿಕ Gmail ಖಾತೆಯನ್ನು ಹಾಗೂ Google Payments ಖಾತೆಯನ್ನು ಹೊಂದಿರಬೇಕು.
* Sheer ID ಮುಖಾಂತರ ವಿದ್ಯಾರ್ಥಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಪರಿಶೀಲಿಸಬೇಕು ( ಕ್ಲಾಸ್ ಐಡಿ, ಕ್ಲಾಸ್ ಟೈಮ್ ಟೇಬಲ್ ಅಥವಾ ಶುಲ್ಕ ರಸೀದಿಗಳನ್ನು ಅಪಲೋಡ್ ಮಾಡಬೇಕು ) .
* ಪೇಮೆಂಟ್ ಮೇಥಡ್ ಮೂಲಕ AI ಪ್ರೊ-ಪ್ಲ್ಯಾನ್ ಅನ್ನು ಹೊಂದಬೇಕು. ವಿದ್ಯಾರ್ಥಿಗಳೆಂದು ಪರಿಗಣಿಸಲ್ಪಟ್ಟರೆ, 12 ತಿಂಗಳ ಉಚಿತ ಅವಧಿಯಲ್ಲಿ ಯಾವುದೇ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
* Google One ಗೆ ಭೇಟಿ ನೀಡಿ ಅಥವಾ gemini.google/students/?gl=IN ಯುಆರ್‌ಎಲ್ ಅನ್ನು ಆಯ್ಕೆ ಮಾಡಿ 'Get offer' ಕ್ಲಿಕ್ ಮಾಡಿ.
* 'Verify eligibility' ಕ್ಲಿಕ್ ಮಾಡಿ, SheerID ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ
* ಪಾವತಿ ವಿಧಾನವನ್ನು ಆಯ್ಕೆ ಮಾಡಿ (ಉಚಿತವಾಗಿದ್ದರೂ ಪ್ರಕ್ರಿಯೆಯ ಸಮಯದಲ್ಲಿ ಇದು ಅಗತ್ಯ). ಲಾಗ್ ಇನ್ ಆಗಿ
ವಿಶೇಷ ಸೂಚನೆ: ನೋಂದಾಯಿಸುವ ಕೊನೆಯ ದಿನಾಂಕ- ಸೆಪ್ಟೆಂಬರ್ 15, 2025












Click it and Unblock the Notifications