ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿಗೆ AI: ₹1 ಕೋಟಿ ಹೂಡಿಕೆ ಘೋಷಿಸಿದ EaseMyTrip ಸಹ-ಸ್ಥಾಪಕ
ಈಸ್‌ಮೈಟ್ರಿಪ್ (EaseMyTrip) ಸಹ-ಸ್ಥಾಪಕ ಪ್ರಶಾಂತ್ ಪಿಟ್ಟಿ ಅವರು ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಎರಡು ಗಂಟೆಗಳ ಕಾಲ ಸಿಲುಕಿದ ಅನುಭವದ ನಂತರ, ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಹಿಡಿಯಲು ಸ್ವತಃ 1 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ವಿವರ ಹಂಚಿಕೊಂಡಿದ್ದಾರೆ ಪಿಟ್ಟಿ. "ಇನ್ನೊಂದು ಟ್ರಾಫಿಕ್ ಮೀಮ್ ಅಥವಾ ದೂರು ಬೇಡ, ನಾನು ಇದನ್ನು ಪರಿಹರಿಸಲು ಬಯಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಶಾತ್ ಅವರು ಗೂಗಲ್‌ನ ರೋಡ್ ಮ್ಯಾನೇಜ್‌ಮೆಂಟ್ ಇನ್‌ಸೈಟ್, ಗೂಗಲ್ ಮ್ಯಾಪ್ ಎಪಿಐ, ಸ್ಯಾಟಲೈಟ್ ಚಿತ್ರ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ಪ್ರಮುಖ ಪಾಯಿಂಟ್‌ಗಳನ್ನು ಗುರುತಿಸುವ ಯೋಜನೆಗೆ ಹಣ ಹೂಡಿಕೆ ಮಾಡಲಿದ್ದಾರೆ. ಈ ಯೋಜನೆಗೆ AI ಇಂಜಿನಿಯರ್‌ಗಳನ್ನು ನೇಮಿಸಿ, ಅಗತ್ಯವಾದ ಡೇಟಾ ಮತ್ತು ತಂತ್ರಜ್ಞಾನಕ್ಕೆ ಬಜೆಟ್ ಒದಗಿಸಲಾಗುವುದು. ಈ ಡೇಟಾ ಮತ್ತು ಪರಿಹಾರಗಳನ್ನು ಓಪನ್ ಸೋರ್ಸ್ ರೂಪದಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಇದರಿಂದ ಇತರ ನಗರಗಳೂ ಈ ಮಾದರಿಯನ್ನು ಅನುಸರಿಸಬಹುದು ಎಂದು ಹೇಳಿದ್ದಾರೆ.

ಪ್ರಶಾಂತ್ ಪಿಟ್ಟಿ ಅವರು ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಟ್ರಾಫಿಕ್ ಇಲಾಖೆಯ ಸಹಕಾರವನ್ನು ಕೋರಿ, ನಾಗರಿಕರು ಮತ್ತು ತಂತ್ರಜ್ಞಾನ ತಜ್ಞರು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ. ನಾವು ಎಲ್ಲರೂ ಸೇರಿ ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕಂಡುಹಿಡಿಯಬಹುದು" ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಪಾಯಿಂಟ್‌ಗಳನ್ನು ಹುಡುಕಲು ನಾನು 1 ಕೋಟಿ ರೂಪಾಯಿ ಪಾವತಿಸುತ್ತಿದ್ದೇನೆ. ಶನಿವಾರ ತಡರಾತ್ರಿ ಬೆಂಗಳೂರು ಟ್ರಾಫಿಕ್‌ನಲ್ಲಿ 11 ಕಿ.ಮೀ ಕ್ರಮಿಸಲು 2.15 ಗಂಟೆಗಳು ಸಮಯ ಹಿಡಿಯಿತು. ನಾನು ಔಟರ್ ರಿಂಗ್‌ರೋಡ್‌ನಲ್ಲಿ ಒಂದು ಚೋಕ್-ಪಾಯಿಂಟ್‌ನಲ್ಲಿ ಸಿಲುಕಿಕೊಂಡೆ. ಅಲ್ಲಿ ಟ್ರಾಫಿಕ್-ಲೈಟ್ ಅಥವಾ ಪೊಲೀಸ್ ಏಕೆ ಇಲ್ಲ? ಎಂದು ಅರ್ಥಮಾಡಿಕೊಳ್ಳಲು ನಾನು 100 ನಿಮಿಷಗಳನ್ನು ಕಳೆದೆ. ಆದರೆ ನನಗೆ ಇನ್ನೊಂದು ಬೆಂಗಳೂರು ಟ್ರಾಫಿಕ್ ಮೀಮ್ಸ್ ಬೇಡ. ನಾನು ಅದನ್ನು ಸರಿಪಡಿಸಲು ಬಯಸುತ್ತೇನೆ ಎಂದು ಪ್ರಶಾಂತ್ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಏಪ್ರಿಲ್ 2025ರಲ್ಲಿ ಗೂಗಲ್ ನಕ್ಷೆಗಳು "ರಸ್ತೆ ನಿರ್ವಹಣಾ ಒಳನೋಟ"ವನ್ನು ಹಂಚಿಕೊಳ್ಳಲು ಪ್ರಾರಂಭಿಸಿದವು. ಇದು ಬಿಗ್ ಕ್ವೆರಿ ಸ್ವರೂಪದಲ್ಲಿ ನಗರ ಮಟ್ಟದ ಡೇಟಾ. ಗೂಗಲ್ ಡೇಟಾ ಮತ್ತು ಸ್ಯಾಟಲೈಟ್ ಇಮೇಜ್‌ಗಳನ್ನು ಬಳಸಿಕೊಂಡು ನಾವು ಒಂದು ತಿಂಗಳಲ್ಲಿ ಎಲ್ಲಾ ಚೋಕ್-ಪಾಯಿಂಟ್‌ಗಳು ಮತ್ತು ಅವುಗಳ ನಿಖರವಾದ ಸಮಯಗಳನ್ನು ಪಟ್ಟಿ ಮಾಡಬಹುದು. ಸಂಚಾರ ಇಲಾಖೆಯು ಆ ಪ್ರದೇಶಗಳಲ್ಲಿ ನಿರ್ದಿಷ್ಟವಾಗಿ ಕೆಲಸ ಮಾಡಲು ಈ ಯೋಜನೆಗೆ ನಾನು 1 ಕೋಟಿ ರೂಪಾಯಿಗಳನ್ನು ನಿಧಿಯ ಮೂಲಕ ಖರ್ಚು ಮಾಡಲು ಸಿದ್ಧನಿದ್ದೇನೆ ಎಂದಿದ್ದಾರೆ.
ನೀವು ಈಗ ಹೇಗೆ ಸಹಾಯ ಮಾಡಬಹುದು?
ಬೆಂಗಳೂರು ಸಂಚಾರ ಪೊಲೀಸ್, ಬಿಬಿಎಂಪಿ ಅಥವಾ ಸಂಚಾರ ಆಯುಕ್ತರ ಕಚೇರಿಯಲ್ಲಿ ನಿಮಗೆ ತಿಳಿದಿರುವ ಯಾರನ್ನಾದರೂ ಟ್ಯಾಗ್ ಮಾಡಿ, ಇದು ಸರಿಯಾದ ಇನ್‌ಬಾಕ್ಸ್‌ಗೆ ಬರಲಿ. ಈ ಅಪಾಯವನ್ನು ಕೊನೆಗೊಳಿಸಲು ನೀವು ಅರೆಕಾಲಿಕವಾಗಿ ಕೆಲಸ ಮಾಡಬಹುದಾದರೆ ಇನ್ ಎಂದು ಕಾಮೆಂಟ್ ಮಾಡಿ. ರಕ್ತಸ್ರಾವದ ಸಮಯದಿಂದ ಬೇಸತ್ತ ಪ್ರತಿಯೊಬ್ಬ ಪ್ರಯಾಣಿಕರು ಕಾಮೆಂಟ್ ಮಾಡಿ ಅಥವಾ ಹಂಚಿಕೊಳ್ಳಿ. ಬೆಂಗಳೂರು ಭಾರತದ ತಂತ್ರಜ್ಞಾನದ ಭವಿಷ್ಯ. ಮತ್ತು ಅದನ್ನು ಸಾಧ್ಯವಾಗಿಸುವ ಜನರು ಇನ್ನೂ ಹೆಚ್ಚಿನದನ್ನು ಪಡೆಯಬೇಕು ಎಂದು ಉತ್ಸಾಹ ತೋರಿದ್ದಾರೆ.












Click it and Unblock the Notifications