ChatGPT: ಚಾಟ್ ಜಿಪಿಟಿಯಿಂದ ಏನೆಲ್ಲಾ ಪ್ರಯೋಜನೆಗಳಿವೆ?
ChatGPT: ಎಐ ತಂತ್ರಜ್ಞಾನ ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ, ಇದರ ವಿಭಾಗ ಆಗಿರುವ ಚಾಟ್ ಜಿಪಿಟಿಯಿಂದ ಏನೆಲ್ಲಾ ಪ್ರಯೋಜನಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾವ ಕ್ಷೇತ್ರದಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದೆ. ಕೆಲಸದ ವೇಗ ಹೆಚ್ಚಳ, ಉದ್ಯೋಗಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಇದನ್ನು ಬಹುತೇಕ ಕಂಪನಿಗಳ ಅಳವಡಿಕೆ ಮಾಡಿಕೊಂಡಿವೆ. ಅದರಲ್ಲೂ ಚಾಟ್ ಜಿಪಿಟಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.

ಚಾಟ್ ಜಿಪಿಟಿಯಿಂದ ಏನೆಲ್ಲಾ ಪ್ರಯೋಜನೆಗಳಿವೆ?
* ತ್ವರಿತ ಮಾಹಿತಿ ಪಡೆಯುವುದು
* ಭಾಷಾಂತರಕ್ಕೆ ಸಹಾಯ
* ಲೇಖನ ರಚನೆ
* ಶಿಕ್ಷಣ ಮತ್ತು ಕಲಿಕೆಗೆ ಸಹಾಯ
* ಹೊಸ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳಬಹುದು
* ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯಬಹುದು
* ತ್ವರಿತ ಮಾಹಿತಿ ಪಡೆಯುವುದು: ನೀವು ಯಾವ ವಿಷಯದ ಬಗ್ಗೆ ಕೇಳಿದರೂ, ಮಾಹಿತಿ ಕೂಡಲೇ ಲಭ್ಯವಾಗುತ್ತದೆ. ಸುದ್ದಿ, ವಿಜ್ಞಾನ, ಇತಿಹಾಸ, ತಂತ್ರಜ್ಞಾನ, ಕಾನೂನು, ಆರೋಗ್ಯ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಪಡೆಯಬಹುದು.
* ಭಾಷಾಂತರಕ್ಕೆ ಸಹಾಯ: ಯಾವುಚೇ ವಿಷಯನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸುಲಭವಾಗಿ ಅನುವಾದಿಸಬಹುದು ಅಥವಾ ಕನ್ನಡದಲ್ಲಿ ಬರೆಯಲು, ತಿದ್ದುಪಡಿ ಮಾಡಲು ಸಹಾಯ ಮಾಡುತ್ತದೆ.
* ಲೇಖನ, ವರದಿ, ಕಥೆ, ಪ್ರಬಂಧ, ಬ್ಲಾಗ್ ಪೋಸ್ಟ್, ಇಮೇಲ್, ಸ್ಕ್ರಿಪ್ಟ್ ಮೊದಲಾದವುಗಳನ್ನು ರಚಿಸಲು ಸಹಾಯ ಮಾಡುತ್ತದೆ.
* ಗಣಿತ, ವಿಜ್ಞಾನ, ಇತಿಹಾಸ ಸೇರಿದಂತೆ ಮುಂತಾದ ವಿಷಯಗಳನ್ನು ವಿವರವಾಗಿ, ಸರಳವಾಗಿ ಅರ್ಥವಾಗುವಂತೆ ನೀಡುತ್ತದೆ. ಅಲ್ಲದೆ, ಹೊಸ ಕೌಶಲ್ಯ, ಬಿಸಿನೆಸ್ ಪ್ಲ್ಯಾನ್, ಪ್ರಾಜೆಕ್ಟ್ ಥೀಮ್, ಕಥೆಗಳ ರಚನೆಗಾಗಿ ಸಹಾಯ ಮಾಡುತ್ತದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ.
* ದಿನನಿತ್ಯದ ಜೀವನ, ಆರೋಗ್ಯ, ಪ್ರಯಾಣ, ಕಾರ್ಮಿಕ ಸಲಹೆಗಳು, ತಂತ್ರಜ್ಞಾನ ಬಳಕೆ ಮುಂತಾದವುಗಳ ಸಲಹೆಯನ್ನು ಕೂಡ ಪಡೆಯಬಹುದು. ಪ್ರೋಗ್ರಾಮಿಂಗ್, ಡೇಟಾ ಅನಾಲಿಸಿಸ್, ವೆಬ್ ಡೆವಲಪ್‌ಮೆಂಟ್, ಅಪ್ಲಿಕೇಶನ್ ಡೆವಲಪ್‌ಮೆಂಟ್‌ಗೆ ಸಹಾಯ ಮಾಡುತ್ತದೆ. ಹೀಗೆ ಚಾಟ್ ಜಿಪಿಟಿಯಲ್ಲಿ ಎಲ್ಲಾ ವಿಚಾರಗಳ ಬಗ್ಗೆಯೋ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಅತೀ ಬೇಗನೇ ಸರಿಯಾಗಿ ಮಾಹಿತಿ ನೀಡುವ ಕಾರಣ ಇದನ್ನು ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ.












Click it and Unblock the Notifications