ಆಸ್ಪತ್ರೆಯಲ್ಲಿ ನರ್ಸ್ ಇರಲ್ಲ, ಸ್ಕೂಲ್‌ಗೆ ಟೀಚರ್ ಬರಲ್ಲ... ಇಲ್ಲಿದೆ ನೋಡಿ ಆಸ್ಟ್ರೇಲಿಯಾದ ಪ್ಲಾನ್! Artificial Intelligence
ಜಗತ್ತು ದಿನದಿಂದ ದಿನಕ್ಕೆ ಪೂರ್ತಿ ಬದಲಾಗುತ್ತಿದ್ದು, ತಂತ್ರಜ್ಞಾನಕ್ಕೆ ಮನುಷ್ಯರು ಅಂಟಿಕೊಳ್ಳುತ್ತಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ಪ್ರಪಂಚದ ಪರಿಸ್ಥಿತಿ ಕೂಡ ಬದಲಾಗಿ ಹೋಗುತ್ತಿದೆ. ಅದರಲ್ಲೂ ಎಐ ವಿಚಾರದಲ್ಲಿ ದೊಡ್ಡ ಚರ್ಚೆಗಳು ನಡೆಯುತ್ತಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೇಡ ಅನ್ನುವ ಕೂಗು ಕೂಡ ಜೋರಾಗಿದೆ. ಇಷ್ಟೆಲ್ಲದರ ನಡುವೆ ದೂರದ ಆಸ್ಟ್ರೇಲಿಯಾ ದೇಶದಲ್ಲಿ ಖತರ್ನಾಕ್ ಪ್ಲಾನ್ ಮಾಡಿದೆ ಸರ್ಕಾರ, ಇವರ ಪ್ಲಾನ್ ಪ್ರಕಾರ ಎಲ್ಲಾ ನಡೆದರೆ ಭವಿಷ್ಯದಲ್ಲಿ ಆಸ್ಪತ್ರೆಯಲ್ಲಿ ನರ್ಸ್ ಇರಲ್ಲ, ಸ್ಕೂಲ್‌ಗೆ ಟೀಚರ್ ಬರಲ್ಲ!
ಹೌದು, ಆಸ್ಟ್ರೇಲಿಯಾದ ಎಐ ಸಚಿವ ಇದೀಗ ಭಾರಿ ಭರ್ಜರಿ ಐಡಿಯಾ ಒಂದನ್ನ ನೀಡಿದ್ದು ಜಗತ್ತಿನಾದ್ಯಂತ ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ. ಆಸ್ಟ್ರೇಲಿಯಾದ ಮೊಟ್ಟ ಮೊದಲ ಕೃತಕ ಬುದ್ಧಿಮತ್ತೆ ಸಚಿವ ಅಂದ್ರೆ ಎಐ ಮಿನಿಸ್ಟರ್ ಆಗಿರುವ ಮಾರ್ಕ್ ಸ್ಪೀಕ್ಮ್ಯಾನ್ ಒಂದು ಐಡಿಯಾ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ, ಆಸ್ಟ್ರೇಲಿಯಾ ದೇಶದಲ್ಲಿ ಎಐ ತಂತ್ರಜ್ಞಾನವನ್ನ ಸಂಪೂರ್ಣವಾಗಿ ಬಳಸಿಕೊಳ್ಳುವ ಬಗ್ಗೆ ಮಾರ್ಕ್ ಸ್ಪೀಕ್ಮ್ಯಾನ್ ಈಗ ಮಾತನಾಡಿದ್ದಾರೆ. ಆ ಪ್ರಕಾರ ಸ್ಕೂಲ್ ಮತ್ತು ಆಸ್ಪತ್ರೆಗಳಲ್ಲಿ ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಕೆ ಮಾಡಿಕೊಂಡು, ಜನರನ್ನು ಮನೆಗೆ ಕಳುಹಿಸುವ ಪ್ರಯತ್ನ ಮಾಡ್ತಿದ್ದಾರೆ ಅನ್ನೋ ಚರ್ಚೆಯು ಈಗ ಶುರುವಾಗಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹವಾ ಜೋರು!
ಅಂದಹಾಗೆ ಆಸ್ಟ್ರೇಲಿಯಾದ ಎಐ ಸಚಿವ ಮಾರ್ಕ್ ಸ್ಪೀಕ್ಮ್ಯಾನ್ ಅವರ ಪ್ರಕಾರ, ಮುಂದಿನ ದಿನಗಳಲ್ಲಿ ಸಾಧ್ಯ ಆಗುವ ಎಲ್ಲಾ ಕ್ಷೇತ್ರದಲ್ಲೂ ಎಐ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆಯಂತೆ. ಆ ಪ್ರಕಾರ ಕೆನಡಾ, ಫ್ರಾನ್ಸ್, ಯುಎಇ ಹಾಗೂ ತೈವಾನ್ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಶುರು ಆಗಿರುವ ಎಐ ತಂತ್ರಜ್ಞಾನ ಪರ್ವವನ್ನು ಫಾಲೋ ಮಾಡುವುದೇ ಆಗಿದೆ. ಅಂದ್ರೆ ಆಸ್ಟ್ರೇಲಿಯಾ ದೇಶದ ಆರೋಗ್ಯ ವಿಭಾಗ ಮತ್ತು ಶೈಕ್ಷಣಿಕ ವಿಭಾಗದಲ್ಲಿ ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನ ಅಳವಡಿಸಿಕೊಂಡು, ಜನರ ಕೆಲಸ ಕಡಿಮೆ ಮಾಡುವ ಪ್ಲಾನ್ ಕೂಡ ನಡೆಯುತ್ತಿದೆಯಂತೆ.
ಸಚಿವರ ಐಡಿಯಾಗೆ ಜನ ಏನಂತಾರೆ?
ಆಸ್ಟ್ರೇಲಿಯಾದ ಎಐ ಸಚಿವ ಮಾರ್ಕ್ ಸ್ಪೀಕ್ಮ್ಯಾನ್ ತಮ್ಮ ಐಡಿಯಾ ಬಗ್ಗೆ ವಾದ ಕೂಡ ಮಂಡಿಸಿದ್ದಾರೆ, ಅವರ ಪ್ರಕಾರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನ ಅಳವಡಿಕೆ ಮಾಡಿಕೊಂಡರೆ ಭವಿಷ್ಯದಲ್ಲಿ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ ಜನರಿಗೆ ಹೆಚ್ಚು ಕೆಲಸ ಕೊಡುವುದು ಕೂಡ ತಪ್ಪಲಿದೆ. ಇದರಿಂದ ದೇಶದ ಅಭಿವೃದ್ಧಿಗೆ ಕೂಡ ಸಹಾಯ ಆಗಲಿದೆ ಅಂತಿದ್ದಾರೆ.
ಆದರೆ ಈ ಬಗ್ಗೆ ಮತ್ತೊಂದು ರೀತಿಯ ಚರ್ಚೆ ಕೂಡ ಶುರುವಾಗಿದ್ದು, ಇದೇ ರೀತಿ ನಡೆಯುತ್ತಿದ್ದರೆ ಮುಂದೆ ಜನರಿಗೆ ಉದ್ಯೋಗ ಇಲ್ಲದೆ ಪರದಾಡುವ ಪರಿಸ್ಥಿತಿ ಬರುತ್ತದೆ ಅನ್ನೋ ಮಾತನ್ನು ಕೂಡ ಜನ ಹೇಳ್ತಿದ್ದಾರೆ. ಇದೆಲ್ಲಾ ಏನೇ ಇರಲಿ, ಎಐ ತಂತ್ರಜ್ಞಾನ ಮಾತ್ರ ಯಾವುದೇ ಅಡ್ಡಿ ಇಲ್ಲದೆ ವೇಗವಾಗಿ ಬೆಳೆಯುತ್ತಿರುವುದು ಮಾತ್ರ ಸತ್ಯ. ಮುಂದಿನ ದಿನಗಳಲ್ಲಿ ಎಐ ಇಡೀ ಪ್ರಪಂಚವನ್ನೇ ಆಳಲಿದೆ ಅಂತಾ ಕೂಡ ತಜ್ಞರು ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ.












Click it and Unblock the Notifications